ಗರ್ಭಪಾತ ಮಾಡಿಸಿಕೊಂಡಿದ್ರಾ ಇಲಿಯಾನಾ; ಈ ಬಗ್ಗೆ ನಟಿ ಹೇಳಿದ್ದೇನು?
ದಕ್ಷಿಣ ಭಾರತ ಮತ್ತು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಇಲಿಯಾನ ಡಿ ಕ್ರೂಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಇಲಿಯಾನಾ ಇತ್ತೀಚಿಗೆ ಬಿಗ್ ಬುಲ್ ಸಿನಿಮಾ ಮೂಲಕ ಒಟಿಟಿ ಪ್ರೇಕ್ಷಕರ ಮುಂದೆ ಬಂದಿದ್ದರು. ಚಿತ್ರದಲ್ಲಿ ಇಲಿಯಾನಾ ಜರ್ನಲಿಸ್ಟ್ ಆಗಿ ಮಿಂಚಿದ್ದರು. ತನ್ನ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದ್ದರು.
ಸಿನಿಮಾಗಳ ನಡುವೆ ಇದೀಗ ಇಲಿಯಾ ತನ್ನ ಬಗ್ಗೆ ಹರಿದಾಡುತ್ತಿದ್ದ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಲಿಯಾನಾ ಗರ್ಭಿಣಿ ಆಗಿದ್ದರು, ಗರ್ಭಪಾತ ಮಾಡಿಸಿಕೊಂಡಿದ್ದಾರೆ, ಅವಳು ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನುವ ಸುಳ್ಳು ಸುದ್ದಿಗಳು ಹಬ್ಬಿತ್ತು. ಈ ಬಗ್ಗೆ ಇಲಿಯಾನಾ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ನಾನು ಬದುಕಿದ್ದೀನಿ
'ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದು ನನಗೆ ನಿಜಕ್ಕೂ ದುಃಖವಾಗಿತ್ತು. ನಾನು ಆತ್ಮಹತ್ಯೆ ಮಾಡಿಕೊಂಡಿದ್ದೀನಿ. ನನ್ನ ಸೇವಕಿ ಎಲ್ಲರಿಗೂ ವಿಚಾರ ತಿಳಿಸಿದ್ದಾರೆ ಎಂದು ಹೇಳುತ್ತಿದ್ದರು. ನಾನು ಬದುರಿದ್ದೀನಿ, ನನಗೆ ಯಾವ ಸೇವಕಿಯೂ ಇಲ್ಲ. ಇಂಥ ಸುಳ್ಳು ಸುದ್ದಿಗಳನ್ನು ಎಲ್ಲಿಂದ ಪಡೆಯುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ' ಎಂದು ಹೇಳಿದ್ದಾರೆ.

ವಿದೇಶಿ ಫೋಟೋಗ್ರಾಫರ್ ಜೊತೆ ಪ್ರೀತಿಯಲ್ಲಿದ್ದ ಇಲಿಯಾನಾ
ನಟಿ ಇಲಿಯಾನಾ ಕಳೆದ ಕೆಲವು ವರ್ಷಗಳ ಹಿಂದೆ ವಿದೇಶಿ ಫೋಟೋಗ್ರಾಫರ್ ಆಂಡ್ರ್ಯೂ ನೀಬೊನ್ ಜೊತೆ ಪ್ರೀತಿಯಲ್ಲಿದ್ದರು. ಆಗಾಗ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡುವ ಮೂಲಕ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದರು. ಇಬ್ಬರು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯು ವೈರಲ್ ಆಗಿತ್ತು.

ಗರ್ಭಿಣಿ ಎನ್ನುವ ವದಂತಿ ಮತ್ತು ಬ್ರೇಕಪ್
ಅದೇ ಸಮಯಕ್ಕೆ ಇಲಿಯಾನ ತನ್ನ ಬಾಯ್ ಫ್ರೆಂಡ್ ಆಂಡ್ರ್ಯೂ ನೀಬೊನ್ ನಿಂದ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆಗ ಇಲಿಯಾನಾ ಗರ್ಭಿಣಿ ಅಲ್ಲ ಎನ್ನುವ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟಪಡಿಸಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಅಂದರೆ 2019ರಲ್ಲಿ ಇಲಿಯಾನಾ ಬಾಯ್ ಫ್ರೆಂಡ್ ಆಂಡ್ರ್ಯೂ ಜೊತೆ ಬ್ರೇಕಪ್ ಮಾಡಿಕೊಂಡು ದೂರ ಆದರು.

ತೆಲುಗು ಮತ್ತು ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ
2006ರಲ್ಲಿ ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಇಲಿಯಾನಾ ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಬಳಿಕ 2012ರಲ್ಲಿ ಬರ್ಫಿ ಸಿನಿಮಾ ಮೂಲಕ ಇಲಿಯಾನಾ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಆ ನಂತರ ಬಾಲಿವುಡ್ ನಲ್ಲಿ ಬ್ಯುಸಿಯಾದ ಇಲಿಯಾನಾ ಕೊನೆಯದಾಗಿ ಪಾಗಲ್ ಪಂತಿ ಸಿನಿಮಾದಲ್ಲಿ ಬೆಳ್ಳಿ ಪರದೆ ಮೇಲೆ ಮಿಂಚಿದ್ದಾರೆ.


Click it and Unblock the Notifications











