»   » ನಟಿ ಇಲಿಯಾನಾ ಸೀಕ್ರೆಟ್ ಮದುವೆ ಆಗ್ಬಿಟ್ರಾ?

ನಟಿ ಇಲಿಯಾನಾ ಸೀಕ್ರೆಟ್ ಮದುವೆ ಆಗ್ಬಿಟ್ರಾ?

Posted By:
Subscribe to Filmibeat Kannada

ಸೌತ್ ಇಂಡಿಯಾದ ಸಕ್ಸಸ್ ಫುಲ್ ನಟಿ ಇಲಿಯಾನಾ ಈಗ ದಕ್ಷಿಣಕ್ಕಿಂತ ಹೆಚ್ಚು ಬಾಲಿವುಡ್ ನಲ್ಲೇ ತೊಡಗಿಕೊಂಡಿದ್ದಾರೆ. ಸದ್ಯ ಸಿನಿಮಾ ವಿಚಾರಕ್ಕೆ ಹೆಚ್ಚೇನೂ ಸುದ್ದಿಯಾಗದ ನಟಿ ತನ್ನ ಬಾಯ್ ಫ್ರೆಂಡ್ ವಿಚಾರದಲ್ಲಿ ಆಗಾಗ ಹೆಡ್ ಲೈನ್ ಅಗ್ತಿದ್ದಾರೆ.

ಈಗ ಮತ್ತದೇ ವಿಚಾರದಲ್ಲಿ ಸುದ್ದಿಯಾಗಿದ್ದಾಳೆ. ಇಷ್ಟು ದಿನ ಇಲಿಯಾನಾಗೆ ಬಾಯ್ ಫ್ರೆಂಡ್ ಇದ್ದಾರೆ ಎಂಬ ಸುದ್ದಿ ಮಾತ್ರ ಸೌಂಡ್ ಮಾಡ್ತಿತ್ತು. ಆದ್ರೀಗ, ಇಲಿಯಾನಾ ಸೀಕ್ರೆಟ್ ಮದುವೆ ಆಗ್ತಿದ್ದಾರೆ ಎಂಬ ಅನುಮಾನ, ಕುತೂಹಲ ಕಾಡುತ್ತಿದೆ.

ಇಂತಹ ಅನುಮಾನ ಮತ್ತು ಚರ್ಚೆಗೆ ಕಾರಣ ಸ್ವತಃ ಇಲಿಯಾನಾ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಇಲಿಯಾನಾ ಹಾಕಿಕೊಂಡಿರುವ ಫೋಟೋ ಮತ್ತು ಸ್ಟೇಟಸ್ ಈಗ ವೈರಲ್ ಆಗಿದ್ದು, ಸೀಕ್ರೆಟ್ ಮದುವೆ ಬಗ್ಗೆ ಮಾತನಾಡಲು ಕಾರಣವಾಗಿದೆ. ಹಾಗಿದ್ರೆ, ಇಲಿಯಾನಾ ಪೋಸ್ಟ್ ಮಾಡಿರುವ ಫೋಟೋದಲ್ಲಿ ಏನಿದೆ? ಸ್ಟೇಟಸ್ ಏನು ಹಾಕಿದ್ದಾರೆ ಎಂದು ಮುಂದೆ ಓದಿ......

ಕುತೂಹಲ ಮೂಡಿಸಿದ ಸ್ಟೇಟಸ್

ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ನಟಿ ಇಲಿಯಾನಾ ಶುಭಕೋರಿದ್ದಾರೆ. ಕ್ರಿಸ್ಮಸ್ ಆಚರಿಸುತ್ತಿರುವ ಫೋಟೋ ಪೋಸ್ಟ್ ಮಾಡಿದ್ದು ಅದಕ್ಕೆ ''My favourite time of the year# family Photo by hubby @andrewkneebonephotography'' ಎಂದು ಸ್ಟೇಟಸ್ ಹಾಕಿದ್ದಾರೆ.

ಬಾಯ್ ಫ್ರೆಂಡ್ ತುಟಿಗೆ ತುಟಿ ಒತ್ತಿದ ನಟಿ ಇಲಿಯಾನಾ ಫೋಟೋ ಸಖತ್ ವೈರಲ್!

'hubby' ಪದದ ಬಳಕೆ ಏಕೆ?

ಫೋಟೋಗ್ರಾಫರ್ ಆಂಡ್ರ್ಯೂ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಇಲಿಯಾನಾ 'hubby' ಎಂಬ ಪದ ಬಳಿಸಿರುವುದರಿಂದ ಇವರಿಬ್ಬರಿಗೆ ಮದುವೆ ಆಗಿರಬಹುದು ಎಂಬ ಅನುಮಾನ ಕಾಡುತ್ತಿದೆ. ಆದ್ರೆ, ಮದುವೆ ಬಗ್ಗೆ ಇಲಿಯಾನಾ ಬಹಿರಂಗವಾಗಿ ಎಲ್ಲಿಯೂ ಹೇಳಿಲ್ಲ.

ಅಭಿಮಾನಿಗಳ ಅನುಚಿತ ವರ್ತನೆ: ಟ್ವಿಟ್ಟರ್ ನಲ್ಲಿ ಗುಡುಗಿದ ನಟಿ ಇಲಿಯಾನಾ

ಲವ್ ಒಪ್ಪಿಕೊಂಡಿದ್ದ ಇಲಿಯಾನಾ

ತಮ್ಮ ದೀರ್ಘಕಾಲದ ಗೆಳೆಯ ಆಂಡ್ರ್ಯೂ ಅವರ ಜೊತೆಗಿನ ಲವ್ ಬಗ್ಗೆ ಇಲಿಯಾನಾ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಇವರಿಬ್ಬರ ಆತ್ಮೀಯತೆಯ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಸೀಕ್ರೆಟ್ ಮದುವೆ?

ಇಲಿಯಾನಾ ಮತ್ತು ಆಂಡ್ರ್ಯೂ ಇಬ್ಬರು ರಿಲೆಶನ್ ಷಿಪ್ ನಲ್ಲಿರುವುದು ಗೊತ್ತಿರುವ ವಿಚಾರ. ಬಹುಶಃ ಇವರಿಬ್ಬರ ಪ್ರೀತಿ, ಮದುವೆಗೆ ತಿರುಗಿರಬಹುದು. ಅದು ಸೀಕ್ರೆಟ್ ಆಗಿ ಉಳಿದಿರಬಹುದು ಎಂಬ ಮಾತಗಳು ಬಾಲಿವುಡ್ ವಲಯದಲ್ಲಿ ಕೇಳಿಬರುತ್ತಿದೆ. ಅದಕ್ಕೆ ಇಲಿಯಾನಾ ಅವರೇ ಸ್ಪಷ್ಟನೆ ನೀಡಬೇಕು.

English summary
We are not saying it, but Bollywood actress Ileana D’Cruz has shared a picture on Instagram that was clicked by “hubby”. Now, while her relationship with Andrew Kneebones is known, her marriage is not. Did she secretly tie the knot with her long-time Australian boyfriend?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X