ಕೂಸು ಹುಟ್ಟುವ ಮುನ್ನ ಗೋವಾ ಬ್ಯೂಟಿಯ ಸೆಲ್ಫಿ ಸಂಭ್ರಮ: ಗರ್ಭಿಣಿ ಇಲಿಯಾನಾ ಹೆಂಗೆಂಗೆ ಕಾಣಿಸ್ತಾರೆ ನೋಡಿ

By ಫಿಲ್ಮಿಬೀಟ್ ಡೆಸ್ಕ್

ಬಹುಭಾಷಾ ನಟಿ ಇಲಿಯಾನಾ ಡಿ ಕ್ರೂಸ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ದಿಢೀರನೇ ತಮ್ಮ ಅಭಿಮಾನಿಗಳಿಗೆ ಗರ್ಭಿಣಿ ಅನ್ನೋ ಸುದ್ದಿ ಮುಟ್ಟಿಸಿ ಶಾಕಿಂಗ್ ನ್ಯೂಸ್ ಕೊಟ್ಟಿದ್ದರು. ಚಿಕ್ಕದೊಂದು ಸುದ್ದಿ ಹರಿಬಿಟ್ಟು ಗರ್ಭಾವಸ್ಥೆಯನ್ನು ಎಂಜಾಯ್ ಮಾಡುತ್ತಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಅನೌನ್ಸ್ ಮಾಡಿದ ದಿನದಿಂದ ಹಲವು ಫೋಟೊಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಚಿಕ್ಕದೊಂದು ಕಮೆಂಟ್ ಕೊಟ್ಟು ಪ್ರೆಗ್ನೆನ್ಸಿ ದಿನಗಳನ್ನು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಳ್ಳುತ್ತಿದ್ದಾರೆ.

Ileana DCruz shares her baby bump photos and says It is all about the angles

ಇಂದು (ಮೇ 26) ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಇನ್ನೂ ಹಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಮಿರರ್ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡಿರೋ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಗರ್ಭಿಣಿ ಇಲಿಯಾನಾ ಸೆಲ್ಫಿ ಫೋಟೊ

ಗೋವಾ ಬ್ಯೂಟಿ ಇಲಿಯಾನಾ ತಾಯಿಯಾಗುತ್ತಿರುವ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ತಾನೆಷ್ಟು ಎಂಜಾಯ್ ಮಾಡುತ್ತಿದ್ದೇನೆ ಅನ್ನೋದನ್ನು ಇನ್‌ಸ್ಟಾಗ್ರಾಂ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸುತ್ತಿದ್ದಾರೆ. ಈಗ ಮಿರರ್ ಮುಂದೆ ನಿಂತುಕೊಂಡು ಬೇಬಿ ಬಂಪ್ ತೋರಿಸಿದ್ದಾರೆ.

ಬಾತ್ ರೂಮ್ ಮಿರರ್ ಮುಂದೆ ನಿಂತ ಎರಡು ಸೆಲ್ಪಿ ಫೋಟೊಗಳನ್ನು ಇಲಿಯಾನಾ ಡಿ ಕ್ರೂಸ್ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳಿಗೆ ಕ್ಯಾಪ್ಟನ್ ಕೂಡ ಕೊಟ್ಟಿದ್ದಾರೆ. " ಇದೆಲ್ಲವೂ ಬೇರೆ ಬೇರೆ ಆಂಗಲ್‌ನಲ್ಲಿ" ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಪ್ರೆಗ್ನೆನ್ಸಿ ದಿನಗಳನ್ನು ಸಖತ್ತಾಗಿ ಎಂಜಾಯ್ ಮಾಡುತ್ತಿದ್ದಾರೆ.

ಟ್ರೋಲ್ ಆಗಿದ್ದ ಇಲಿಯಾನಾ ಡಿ ಕ್ರೂಸ್

ಇಲಿಯಾನಾ ಡಿ ಕ್ರೂಸ್ ಇದೂವರೆಗೂ ಪ್ರೆಗ್ನೆನ್ಸಿ ಸೀಕ್ರೆಟ್ ಅನ್ನು ರಿವೀಲ್ ಮಾಡಿಲ್ಲ. ಮಗುವಿನ ತಂದೆಯ ಬಗ್ಗೆ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಕೆಲ ನೆಟ್ಟಿಗರು ಇಲಿಯಾನಾ ಪ್ರೆಗ್ನೆನ್ಸಿ ಬಗ್ಗೆ ಟೀಕೆ ಮಾಡಿದ್ದರು. ಆದರೆ, ಗೋವಾ ಬ್ಯೂಟಿ ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ತನ್ನ ಪ್ರೆಗ್ನೆನ್ಸಿ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

ಇಲಿಯಾನಾ ಪ್ರೆಗ್ನೆನ್ಸಿ ಅನೌನ್ಸ್ ಮಾಡುತ್ತಿದ್ದಂತೆ ಟ್ರೋಲ್‌ ಒಳಗಾದಾಗ ಹಲವು ಅವರ ಬೆಂಬಲಕ್ಕೆ ನಿಂತಿದ್ದರು. ಮಗುವಿನ ತಂದೆಯ ಬಗ್ಗೆ ಮಾಹಿತಿ ಕೊಡುವುದು ಬಿಡುವುದು ಅವರಿಗೆ ಇಚ್ಛೆಗೆ ಬಿಟ್ಟ ವಿಚಾರ ಎಂದು ನಟಿಯ ಬೆಂಬಲಕ್ಕೆ ನಿಂತಿದ್ದರು. ಅಲ್ಲದೆ ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಅವರ ಇಲಿಯಾನಾಗೆ ಶುಭಾಶಯಗಳನ್ನು ತಿಳಿಸಿದ್ದರು.

ರಿಲೀಸ್‌ಗೆ ಬಾಕಿದೆ ಒಂದು ಸಿನಿಮಾ

ಇಲಿಯಾನಾ ಡಿ ಕ್ರೂಸ್ ಏಪ್ರಿಲ್ 18ರಂದು ಎರಡು ಫೋಟೊಗಳನ್ನು ಶೇರ್ ಮಾಡಿ ಪ್ರೆಗ್ನೆನ್ಸಿಯನ್ನು ಅನೌನ್ಸ್ ಮಾಡಿದ್ದರು. " ಅಂಡ್ವೆಂಚರ್ ಶುರುವಾಗಿದೆ" ಎಂದು ಬರೆದುಕೊಂಡಿದ್ದರು. ಹಾಗೇ 'ಮಾಮಾ' ಎಂದು ಕ್ಯಾಪ್ಷನ್ ಕೊಟ್ಟಿದ್ದರು. ಜೊತೆಗೆ " ನನ್ನ ಪುಟ್ಟ ಡಾರ್ಲಿಂಗ್ ಅನ್ನು ಭೇಟಿ ಮಾಡುವುದಕ್ಕೆ ಕಾಯುತ್ತಿದ್ದೇನೆ" ಎಂದು ಹೇಳಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬರೋದಾದರೆ, ರಾಪರ್ ಬಾದ್‌ಷಾ ಅವರ ಮ್ಯೂಸಿಕ್ ವಿಡಿಯೋ "ಸಬ್ ಗಜಬ್.." ಅನ್ನೋದರಲ್ಲಿ ಇಲಿಯಾನಾ ಹೆಜ್ಜೆ ಹಾಕಿದ್ದರು. ಅಭಿಷೇಕ್ ಬಚ್ಚನ್ ನಟಿಸಿದ 'ಬಿಗ್ ಬುಲ್'ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಸದ್ಯ ರಣ್‌ದೀಪ್ ಹೂಡಾ ಜೊತೆ 'ಅನ್‌ಫೇರ್ ಅಂಡ್ ಲವ್ಲೀ' ಸಿನಿಮಾ ಬಿಡುಗಡೆಯಾಗಬೇಕಿದೆ.

More from Filmibeat

English summary
Ileana D'Cruz shares her baby bump photos and says, "It is all about the angles", know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X