»   » ಬಿಟೌನ್ ಮಂಚದ ಸಂಸ್ಕೃತಿ ರಹಸ್ಯ ಬಿಚ್ಚಿಟ್ರು ಇಲಿಯಾನಾ

ಬಿಟೌನ್ ಮಂಚದ ಸಂಸ್ಕೃತಿ ರಹಸ್ಯ ಬಿಚ್ಚಿಟ್ರು ಇಲಿಯಾನಾ

Posted By:
Subscribe to Filmibeat Kannada

ಸೌತ್ ಇಂಡಿಯಾದ ಸಖತ್ ಬೋಲ್ಡ್ ನಟಿಯರಲ್ಲಿ ಇಲಿಯಾನಾ ಡಿ'ಕ್ರೂಸ್ ಸಹ ಒಬ್ಬರು. ಈ ಬೋಲ್ಡ್ ನಟಿ ಬೋಲ್ಡ್ ಆಗಿಯೇ ಆಗಾಗ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ.

ಸಮುದ್ರತೀರದ ಸೆಕ್ಸ್ ಬಗ್ಗೆ ತಹತಹಿಸಿದ ಇಲಿಯಾನಾ

ಅಂದಹಾಗೆ ಈಗ ಇಲಿಯಾನಾ ಡಿ'ಕ್ರೂಸ್ ಬಗೆಗಿನ ಲೇಟೆಸ್ಟ್ ಸುದ್ದಿ ಏನಂದ್ರೆ, 'ಮುಬರಕನ್' ಚಿತ್ರದ ಪ್ರಮೋಷನ್ ಚಟುವಟಿಕೆಯಲ್ಲಿ ತೊಡಗಿರುವ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಬಾಲಿವುಡ್ ನಲ್ಲಿ ನೆಲೆ ಕಂಡುಕೊಳ್ಳಬೇಕಾದರೆ ಸ್ಟಾರ್ ಗಳಿಗೆ ಫೇವರ್ ಆಗಿ ನಡೆದುಕೊಳ್ಳಬೇಕು, ವೈಯಕ್ತಿಕ ಸಂಬಂಧ ಹೊಂದಬೇಕು ಎಂಬುದನ್ನು ಪರೋಕ್ಷವಾಗಿ ಹೇಳಿರುವ ಬಗ್ಗೆ ವರದಿಯಾಗಿದೆ. ಮುಂದೆ ಓದಿರಿ

ವೈಯಕ್ತಿಕ ಸಂಬಂಧ ಹೊಂದುವುದು ಮುಖ್ಯ

ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ 11 ವರ್ಷಗಳ ಸಿನಿಮಾ ಲೈಫ್ ಬಗ್ಗೆ ಮಾತನಾಡಿರುವ ಇಲಿಯಾನಾ ಡಿ'ಕ್ರೂಸ್, 'ಬಾಲಿವುಡ್ ನಲ್ಲಿ ಬಿಗ್ ಸ್ಟಾರ್ ಗಳ ಜೊತೆ ಮತ್ತೆ ಮತ್ತೆ ಸಿನಿಮಾ ಮಾಡಬೇಕೆಂದರೆ ಅವರ ಜೊತೆ ವೈಯಕ್ತಿಕ ಸಂಬಂಧ ಹೊಂದಬೇಕು. ಅವರಿಗೆ ಫೇವರ್ ಆಗಿ ನಡೆದುಕೊಳ್ಳಬೇಕು' ಎಂಬ ಕಟು ಸತ್ಯವನ್ನು ಬಿಚ್ಚಿಟ್ಟಿರುವುದು ವರದಿಯಾಗಿದೆ.

ಟ್ಯಾಲೆಂಟ್ ಇದ್ರು ರಿಲೇಶನ್‌ಶಿಪ್ ಮುಖ್ಯವೇ?

ಸಂದರ್ಶನದಲ್ಲಿ ಕೇಳಿದ ಈ ಪ್ರಶ್ನೆಗೆ, 'ನಾನು ರಿಲೇಶನ್‌ಶಿಪ್ ಹೊಂದಲು ಬಯಸುವುದಿಲ್ಲ, ನಾನ್ಯಾಕೆ ಹಾಗೆ ಮಾಡಬೇಕು. ನನ್ನ ಪ್ರತಿಭೆಗೆ ಅವಕಾಶಗಳು ಸಿಗುತ್ತವೆ' ಎಂದಿದ್ದಾರೆ ಇಲಿಯಾನ ಡಿ'ಕ್ರೂಸ್.

'ಮುಬಾರಕನ್' ಚಿತ್ರೀಕರಣ ವೇಳೆಯು ಸಮಸ್ಯೆ

ಅರ್ಜುನ್ ಕಪೂರ್ ಲೀಡ್ ರೋಲ್ ನಲ್ಲಿ ಅಭಿನಯಿಸಿರುವ 'ಮುಬಾರಕನ್' ಚಿತ್ರೀಕರಣದ ವೇಳೆಯು ಇದೇ ವಿಚಾರವಾಗಿ ಇಲಿಯಾನಾ ಡಿ'ಕ್ರೂಸ್ ಸಿನಿಮಾದಿಂದ ಬ್ರೇಕ್ ಡೌನ್ ಆಗಿದ್ದರಂತೆ. ಈ ಘಟನೆ ಬಗ್ಗೆ ದೂರಿದ ಅವರು 'ಚಿತ್ರ ಜಗತ್ತಿನಲ್ಲಿ 11 ವರ್ಷಗಳ ಅನುಭವ ಇದ್ದರು ಈಗಲು ಅದರ ಬಗ್ಗೆ ಅಲೋಚಿಸುತ್ತೇನೆ. ನಾನು ಆ ಸಿನಿಮಾಗೆ ಕಟ್‌ಔಟ್‌ ಅಲ್ಲ. ಚಿತ್ರಕ್ಕಾಗಿ ಯಾರಿಗಾದರೂ ಗರ್ಲ್ ಫ್ರೆಂಡ್ ಆಗ ಬೇಕಾಗಿ ಬಂದಲ್ಲಿ ಆ ಚಿತ್ರವನ್ನು ಕಳೆದುಕೊಂಡೆ ಎಂದು ಫೀಲ್ ಮಾಡುತ್ತೇನೆ' ಎಂದಿದ್ದಾರೆ.

ಅಪ್ಪನಿಂದ ಮೆಚ್ಚುಗೆ ಪಡೆದ ಇಲಿಯಾನಾ

ತಮ್ಮ ನಿರ್ಧಾರ ಮತ್ತು ಚಿತ್ರರಂಗದಲ್ಲಿನ ನಿಲುವಿನ ಬಗ್ಗೆ ತಂದೆಯಿಂದ ಮೆಚ್ಚುಗೆ ಪಡೆದಿರುವ ಇಲಿಯಾನಾ ಅವರ ಅಪ್ಪ 'ನಿನ್ನ ವೃತ್ತಿ ವೈಖರಿ ನನಗೆ ಬಹಳ ಇಷ್ಟ' ಎಂದಿದ್ದನ್ನು ಸಂದರ್ಶನದ ವೇಳೆಯಲ್ಲಿ ನೆನೆಸಿಕೊಂಡಿದ್ದಾರೆ. ಅಲ್ಲದೇ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಅವರು ಇಂಡಸ್ಟ್ರಿಯಲ್ಲಿ ಹೆಚ್ಚು ಸೊಶಿಯಾಲೈಜ್ ಆಗಿರುವುದನ್ನು ಅವಾಯ್ಡ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

'ಮುಬಾರಕನ್' ಸಿನಿಮಾ

ಅನಿಲ್ ಕಪೂರ್, ಅರ್ಜುನ್ ಕಪೂರ್, ಇಲಿಯಾನಾ ಡಿ'ಕ್ರೂಸ್, ಅಥಿಯ ಶೆಟ್ಟಿ ಅಭಿನಯದ 'ಮುಬಾರಕನ್' ಚಿತ್ರವನ್ನು ಅನೀಶ್ ಬಾಝ್ಮೀ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಜುಲೈ 28 ರಂದು ವರ್ಲ್ಡ್ ವೈಡ್ ಬಿಡುಗಡೆ ಆಗುತ್ತಿದೆ.

English summary
Actress Ileana D’ Cruz has revealed one of the ugliest realities about Bollywood. She highlighted the tactful need of personal relationships to land a role in the Indian movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada