ತಮ್ಮ ದೇಹದ ಅಂಗಗಳ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ನಟಿ ಇಲಿಯಾನಾ!

ನಟಿ ಇಲಿಯಾನಾ ಡಿಕ್ರೂಜ್ ಸಪೂರ ಸುಂದರಿ. ಕೃಷ್ಣ ವರ್ಣ, ಬಳುಕುವ ಸಣ್ಣ ನಡು, ಮುದ್ದಾದ ಮುಖದಿಂದ ಪಡ್ಡೆಗಳ ಎದೆಗೆ ಬೆಂಕಿ ಹಚ್ಚಿದ್ದ ಇಲಿಯಾನಾ, ತಮ್ಮದೇ ದೇಹದ ಅಂಗಗಳ ಬಗ್ಗೆ ದ್ವೇಷ ಬೆಳೆಸಿಕೊಂಡಿದ್ದರಂತೆ.

ಹೌದು, ಇಲಿಯಾನಾಗೆ ತಮ್ಮ ದೇಹದ ಬಗ್ಗೆ ಪ್ರೀತಿ ಇರಲಿಲ್ಲವಂತೆ, ನನ್ನ ನಡು ಅಗಲ, ಹೊಟ್ಟೆ ಸಪಾಟಾಗಿಲ್ಲ, ಎದೆ ಉಬ್ಬಿಲ್ಲ, ಮೂಗು ನೆಟ್ಟಗಿಲ್ಲ, ನಿತಂಬಗಳು ಹೆಚ್ಚು ದೊಡ್ಡವು ಹೀಗೆ ಹಲವು ದೂರುಗಳು ತಮ್ಮ ದೇಹ ಭಾಗಗಳ ಮೇಲೆ ಇದ್ದುವಂತೆ ಇಲಿಯಾನಾಗೆ.

ತಮ್ಮ ದೇಹ ಭಾಗಗಳ ಮೇಲೆ ಇಲಿಯಾಗೆ ಇದ್ದ ಅಸಮಾಧಾನ, ಬೇಸರ, ದ್ವೇಷದ ಬಗ್ಗೆ ಸ್ವತಃ ಅವರೇ ಇನ್‌ಸ್ಟಾಗ್ರಾಂ ನಲ್ಲಿ ಉದ್ದದ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇಲಿಯಾನ ಹೇಳಲು ಹೊರಟಿರುವ ಮಾತುಗಳು ದೇಹದ ಬಗ್ಗೆ ಕೀಳರಿಮೆ ಹೊಂದಿರುವ ಹಲವು ಯುವತಿ-ಯುವಕರ ಕಣ್ಣು ತೆರೆಸುವಂತಿದೆ.

ಹೇಗೆ ಕಾಣುತ್ತೇನೆ ಎಂದು ಸದಾ ಚಿಂತೆ ಪಡುತ್ತಿದ್ದೆ: ಇಲಿಯಾನಾ

ಹೇಗೆ ಕಾಣುತ್ತೇನೆ ಎಂದು ಸದಾ ಚಿಂತೆ ಪಡುತ್ತಿದ್ದೆ: ಇಲಿಯಾನಾ

'ನಾನು ಹೇಗೆ ಕಾಣುತ್ತೇನೆ ಎಂದು ಸದಾ ಚಿಂತೆ ಪಡುತ್ತಿದ್ದೆ. ನನ್ನ ದೇಹದ ಬಗ್ಗೆ ನನಗೇ ಸಮಾಧಾನವಿರಲಿಲ್ಲ. ನನ್ನ ದೇಹದ ಭಾಗಗಳು ಹೀಗಿರಬೇಕಿತ್ತು, ಹಾಗಿರಬೇಕಿತ್ತು ಎಂದು ಸದಾ ಯೋಚನೆ ಮಾಡುತ್ತಿದ್ದೆ. ನನ್ನ ದೇಹದ ಬಗ್ಗೆ ನನಗೆ ಪ್ರೀತಿಯೇ ಇರಲಿಲ್ಲ' ಎಂದಿದ್ದಾರೆ ನಟಿ ಇಲಿಯಾನಾ.

'ಎದೆ ಉಬ್ಬಿಲ್ಲ, ಹೊಟ್ಟೆ ಸಪಾಟಿಲ್ಲ, ನಡು ಅಗಲ, ಬಣ್ಣ ಬೆಳ್ಳಗಿಲ್ಲ'

'ಎದೆ ಉಬ್ಬಿಲ್ಲ, ಹೊಟ್ಟೆ ಸಪಾಟಿಲ್ಲ, ನಡು ಅಗಲ, ಬಣ್ಣ ಬೆಳ್ಳಗಿಲ್ಲ'

ನನ್ನ ಬಣ್ಣ ಬೆಳ್ಳಗಿಲ್ಲ, ತುಟಿ ಸಣ್ಣಗಿವೆ, ಎದೆ ಉಬ್ಬಿಲ್ಲ, ನಡುವು ಬಹಳ ಅಗಲ, ನಿತಂಬಗಳು ಹೆಚ್ಚು ದಪ್ಪಗಿವೆ, ಮೂಗು ನೆಟ್ಟಗಿಲ್ಲ, ನಾನು ಹೆಚ್ಚು ಎತ್ತರವಿಲ್ಲ, ನನ್ನ ಕಣ್ಣುಗಳು ದೊಡ್ಡದಾಗಿಲ್ಲ ಹೀಗೆ ಹಲವು ದೂರುಗಳು ನನ್ನ ದೇಹದ ಬಗ್ಗೆ ನನಗೆ ಇದ್ದವು ಎಂದಿದ್ದಾರೆ ಇಲಿಯಾನಾ.

ಪರಿಪೂರ್ಣವಾಗಿ ಇರಬೇಕೆಂದೇನೂ ಇಲ್ಲ: ಇಲಿಯಾನಾ

ಪರಿಪೂರ್ಣವಾಗಿ ಇರಬೇಕೆಂದೇನೂ ಇಲ್ಲ: ಇಲಿಯಾನಾ

ಆದರೆ ನನಗೆ ಅರ್ಥವಾಗಿರಲಿಲ್ಲ, ನಾನು ಪರಿಪೂರ್ಣವಾಗಿ ಇರಬೇಕು ಎಂದೇನೂ ಇಲ್ಲ, ದೋಷಪೂರಿತವಾಗಿಯೂ ಸುಂದರವಾಗಿರಬಹುದು ಎಂಬುದನ್ನು ನಾನು ಅರ್ಥಮಾಡಿಕೊಂಡಿರಲಿಲ್ಲ. ನನ್ನ ದೇಹದ ಮೇಲಿರುವ ಪ್ರತಿ ಮಚ್ಚೆ, ಪ್ರತಿ ಉಬ್ಬು-ತಗ್ಗು, ದೋಷಗಳು ಎಲ್ಲವೂ ಸೇರಿಯೇ ನಾನಾಗಿದ್ದೇನೆ ಎಂಬುದು ನನಗೆ ತಡವಾಗಿ ಅರ್ಥವಾಯಿತು ಎಂದಿದ್ದಾರೆ ಇಲಿಯಾನಾ.

Recommended Video

ಕರುಣೆ ಬರ್ಲಿ ನನ್ ಮೇಲೆ ಅಂತ ನಾನು ಈ ವಿಡಿಯೋ ಮಾಡ್ತಿಲ್ಲ | Anushree | Filmibeat Kannada
ದೇಹವನ್ನು ದ್ವೇಷಿಸುವುದನ್ನು ನಿಲ್ಲಿಸಿಬಿಟ್ಟೆ: ಇಲಿಯಾನಾ

ದೇಹವನ್ನು ದ್ವೇಷಿಸುವುದನ್ನು ನಿಲ್ಲಿಸಿಬಿಟ್ಟೆ: ಇಲಿಯಾನಾ

ಹಾಗಾಗಿ ನಾನು ನನ್ನ ದೇಹವನ್ನು ದ್ವೇಷಿಸುವುದನ್ನು ನಿಲ್ಲಿಸಿಬಿಟ್ಟಿ, ಜಗತ್ತು ಹೇಳುವ ಸುಂದರತೆಯ ನಿಯಮಗಳಲ್ಲಿ ನಾನು ಫಿಟ್ ಆಗದಿದ್ದರೇನಂತೆ, ನಾನು ಹುಟ್ಟಿರುವುದೇ ಭಿನ್ನವಾಗಿರಲು, ಹಾಗಿದ್ದಮೇಲೆ ಜಗತ್ತಿನ ನಿಯಮಗಳ ಬಗ್ಗೆ ನಾನೇಕೆ ಚಿಂತೆ ಮಾಡಲಿ ಎಂದಿದ್ದಾರೆ ಇಲಿಯಾನಾ.

More from Filmibeat

English summary
Actress Ileana D'cruz social media post about how she hated her body and how she over come inferiority complex.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X