»   » ಹಾಟ್ ಪೀಸ್ ಇಲಿಯಾನಾ ಟೂ ಪೀಸ್ ಲುಕ್

ಹಾಟ್ ಪೀಸ್ ಇಲಿಯಾನಾ ಟೂ ಪೀಸ್ ಲುಕ್

By: ರವಿಕಿಶೋರ್
Subscribe to Filmibeat Kannada

ದಕ್ಷಿಣ ಭಾರತದಲ್ಲಿ ತಮ್ಮ ಅಂದಚೆಂದ ವೈಯಾರದ ಮೂಲಕ ಅಪಾರ ಅಭಿಮಾನಿಗಳ ನಿದ್ದೆಗೆಡಿಸಿದ್ದ ತಾರೆ ಇಲಿಯಾನಾ ಡಿ'ಕ್ರೂಸ್. ಈಗ ದಕ್ಷಿಣ ಬಿಟ್ಟು ಉತ್ತರಕ್ಕೆ ಹೋಗಿರುವ ಇಲಿಯಾನಾ ಅಲ್ಲೂ ತಮ್ಮ ಮ್ಯಾಜಿಕ್ ಮುಂದುವರಿಸಿದ್ದಾರೆ. ಸದ್ಯಕ್ಕೆ ಅವರು ದಕ್ಷಿಣದ ಕಡೆ ಮುಖ ಮಾಡುತ್ತಿಲ್ಲ. ತಮ್ಮ ಸಂಪೂರ್ಣ ದೃಷ್ಟಿಯನ್ನು ಕೇವಲ ಬಾಲಿವುಡ್ ಚಿತ್ರಗಳತ್ತ ಹರಿಸಿದ್ದಾರೆ.

ಇತ್ತೀಚೆಗೆ ಮೆನ್ಸ್ ವರ್ಲ್ಡ್ ನಿಯತಕಾಲಿಕೆ ಮುಖಪುಟಕ್ಕಾಗಿ ಟೂ ಪೀಸ್ ಬಿಕಿನಿಯಲ್ಲಿ ತಮ್ಮ ಮೈಸಿರಿಯನ್ನು ಅನಾವರಣಗೊಳಿಸಿದ್ದಾರೆ. ಇದು ಕೇವಲ ಆರಂಭ ಮಾತ್ರ ಎಂದಿರುವ ಇಲಿಯಾನಾ, ತೆರೆಯ ಮೇಲೆ ಕಿಸ್ಸಿಂಗ್ ಸೀನ್ ಆದರೂ ಸರಿ ಶೃಂಗಾರಭರಿತ ಸನ್ನಿವೇಶಗಳಾದರೂ ಸರಿ ಒಟ್ಟಾರೆಯಾಗಿ ಎಕ್ಸ್ ಫೋಸಿಂಗ್ ಗೆ ತಾವು ರೆಡಿ ಎಂದಿದ್ದಾರೆ. [ಬೇಕಿದ್ದರೆ ಪ್ಯಾಂಟ್ ಕೊಡ್ತೇನೆ ಸೈಜ್ ಚೆಕ್ ಮಾಡಿಕೊಳ್ಳಿ]

ಇತ್ತೀಚೆಗೆ ಇಲಿಯಾನಾ ಅಭಿನಯದ ಬಾಲಿವುಡ್ ಚಿತ್ರ 'ಮೇ ತೇರಾ ಹೀರೋ' ಬಿಡುಗಡೆಯಾಗಿ ಪ್ರೇಕ್ಷಕರ ಮನ್ನಣೆಗೂ ಪಾತ್ರವಾಯಿತು. ಬಾಕ್ಸ್ ಆಫೀಸಲ್ಲೂ ಒಂಚೂರು ಸದ್ದು ಮಾಡಿತು. ಆದರೆ ಅವಕಾಶಗಳು ಮಾತ್ರ ಇಲಿಯಾನಾಗೆ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ.

ಬಾಲಿವುಡ್ ನಲ್ಲಿ ಇಲಿಯಾನ ಲಕ್ ಬದಲಾಗಿದೆ

ಬಹುಶಃ ಇದೇ ಕಾರಣಕ್ಕೋ ಏನೋ ನಿಯತಕಾಲಿಕೆಯ ಮೂಲಕ ತಾವೇನು ತಮ್ಮ ಅಭಿರುಚಿ ಏನು ಎಂಬುದನ್ನು ತೋರಿಸಿದ್ದಾರೆ. ಇನ್ನಾದರೂ ನಿರ್ಮಾಪಕರು ಸೂಟ್ ಕೇಸ್ ಹಿಡಿದು ಇಲಿಯಾನಾ ಮನೆ ಕಡೆಗೆ ಹೆಜ್ಜೆ ಹಾಕುತ್ತಾರಾ ಕಾದು ನೋಡಬೇಕು, ಕಾಲ್ ಶೀಟ್ ಗಾಗಿ ಎಂಬುದನ್ನು ಸೇರಿಸಿಕೊಳ್ಳಿ.

ತೀವ್ರ ಸ್ಪರ್ಧೆಗೆ ಇಲಿಯಾನಾ ಹೊಸ ವರಸೆ

ಬಾಲಿವುಡ್ ಚಿತ್ರರಂಗ ಮಹಾ ಸಾಗರವಿದ್ದಂತೆ. ಅಲ್ಲಿ ಗಮನಸೆಳೆಯಬೇಕಾದರೆ ಈ ರೀತಿಯ ಪ್ರದರ್ಶನ ತಪ್ಪಿದ್ದಲ್ಲ. ಸ್ಪರ್ಧೆ ತೀವ್ರವಾಗಿದೆ.

ಇದೇ ಮೊದಲ ಬಾರಿಗೆ ಬಿಕಿನಿ ಗರ್ಲ್

ಇಷ್ಟು ದಿನ ಇಲಿಯಾನಾ ಬಿಕಿನಿ ತೊಟ್ಟಿದ್ದಿಲ್ಲ. ಇದೇ ಮೊದಲ ಬಾರಿಗೆ ಬಿಕಿನಿಗೆ ತೊಟ್ಟು ಅಭಿಮಾನಿಗಳ ಕಣ್ಣು ಕುಕ್ಕಿದ್ದಾರೆ.

ಗ್ಲಾಮರ್ ಡಾಲ್ ಬಿರುದಿಗಾಗಿ ಈ ಚೆಲ್ಲಾಟವೇ?

ಬಾಲಿವುಡ್ ಚಿತ್ರರಂಗದಲ್ಲಿ ಮಿಂಚಬೇಕಾದರೆ ಗ್ಲಾಮರ್ ಡಾಲ್ ಎನ್ನಿಸಿಕೊಳ್ಳಬೇಕು. ಇಲ್ಲದಿದ್ದರೆ ಅಲ್ಲಿ ಅವಕಾಶಗಳು ಕಷ್ಟಕಷ್ಟ.

ಎರಡು ಹಿಟ್ ನೀಡಿರುವ ಇಲಿಯಾನಾ

ಇಲಿಯಾನಾ ಅಭಿನಯದ ಮೊದಲ ಬಾಲಿವುಡ್ ಚಿತ್ರ ಬರ್ಫಿ ಹಿಟ್ ಆಯಿತು. ಅದಾದ ಬಳಿ ಮೈ ತೇರಾ ಹೀರೋ ಚಿತ್ರವೂ ಹಿಟ್ ಲಿಸ್ಟ್ ಸೇರಿತು. ಈಗ ಇನ್ನಷ್ಟು ಚಿತ್ರಗಳಿಗೆ ಅವರು ತಯಾರಾಗಿದ್ದಾರೆ.

ಗಾಳಿ ಬಂದಾಗ ತೂರಿಕೊಂಡ ಚೆಲುವೆ

ಗಾಳಿ ಬಂದಾಗ ತೂರಿಕೋ ಎಂಬ ಮಾತಿದೆ. ಈಗ ಗಾಳಿ ಇಲಿಯಾನಾ ಕಡೆ ಬೀಸುತ್ತಿದೆ. ಈಗಲೇ ತೂರಿಕೊಂಡರೆ ಅನುಕೂಲ ಅಲ್ಲವೆ?

English summary
Ileana D'Cruz, the 'Main Tera Hero' girl covers Man's World magazine for the April 2014 issue. Termed as the 'summer scorcher', Ileana looks stunning in a Nikhil Thampi creation.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada