Ileana D'Cruz: ಮುದ್ದಾದ ಮಗುವಿಗೆ ಜನ್ಮ ನೀಡಿದ ಇಲಿಯಾನ: ನಾಮಕರಣ ಮಾಡಿದ್ರು ಆ ಗುಟ್ಟು ಬಿಟ್ಟುಕೊಟ್ಟಿಲ್ಲ
ಬಹುಭಾಷಾ ನಟಿ ಇಲಿಯಾನಾ ತಾಯಿಯಾಗಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಫೋಟೊ ಜೊತೆಗೆ ಹೆಸರನ್ನು ಕೂಡ ರಿವೀಲ್ ಮಾಡಿದ್ದಾರೆ. ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿರುವ ಗೋವಾ ಬ್ಯೂಟಿ ಮಗನ ಹೆಸರು ಕೋವಾ ಫೀನಕ್ಸ್ ಡೋಲನ್ ಎಂದು ಪರಿಚಯಿಸಿದ್ದಾರೆ. ಆದರೆ ಮಗುವಿನ ತಂದೆ ಯಾರು ಎನ್ನುವುದು ಗುಟ್ಟಾಗಿಯೇ ಇದೆ.
ಇಲಿಯಾನ ಕೆಲ ದಿನಗಳ ಹಿಂದೆ ತಾವಯ ಗರ್ಭಿಣಿ ಆಗಿರುವ ವಿಚಾರ ಬಹಿರಂಗ ಪಡಿಸಿದ್ದರು. ಮದುವೆಗೂ ಮುನ್ನ ಮಗುನಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಆದರೆ ಆಕೆ ಮಾತ್ರ ಕ್ಯಾರೇ ಎನ್ನಲಿಲ್ಲ. ಆಗಿಂದಾಗ್ಗೆ ಫೋಟೊಗಳನ್ನು ಶೇರ್ ಮಾಡಿ ಮನೆಗೆ ಹೊಸ ಅತಿಥಿಯ ನಿರೀಕ್ಷೆಯಲ್ಲಿರುವ ಸಂತಸವನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಮಗುವಿನ ತಂದೆ ಯಾರು ಅನ್ನೋದನ್ನು ಮಾತ್ರ ಹೇಳಲೇ ಇಲ್ಲ.

ತನ್ನ ಮಗುವಿನ ತಂದೆ ಯಾರು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಒಂದಷ್ಟು ಫೋಟೊಗಳನ್ನು ಇಲಿಯಾನ ಪೋಸ್ಟ್ ಮಾಡಿ ಹಿಂಟ್ ನೀಡಿದ್ದರು. ಫೋಟೊ ರಿವೀಲ್ ಮಾಡಿದರೂ ಆತನ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ. ಇನ್ನು ಆಗಸ್ಟ್ 1ರಂದು ಗಂಡು ಮಗುವಿಗೆ ಜನ್ಮ ನೀಡಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಹುಟ್ಟಿದ ಕೂಡಲೇ ಮಗುವಿನ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಯಾರು ಪೋಸ್ಟ್ ಮಾಡಲ್ಲ. ಆದರೆ ಇಲಿಯಾನ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಇಲಿಯಾನ ಗಂಡು ಮಗುವಿಗೆ ಜನ್ಮ ನೀಡಿದ ಸಂಗತಿ ತಿಳಿದು ಅಭಿಮಾನಿಗಳು ಖುಷಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ. ಆದರೆ ಮಗುವಿನ ತಂದೆ ಯಾರು ಅನ್ನೋದನ್ನು ಗುಟ್ಟಾಗಿ ಇಡಲಿ ಕಾರಣ ಏನು ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. ತೆಲುಗಿನ 'ದೇವದಾಸು' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಇಲಿಯಾನಾ ಮುಂದೆ ತಮಿಳು, ಹಿಂದೆ, ಕನ್ನಡ ಸಿನಿಮಾಗಳಲ್ಲೂ ನಟಿಸಿದರು.
ಮಹೇಶ್ ಬಾಬು ಜೊತೆ ಇಲಿಯಾನ ನಟಿಸಿದ 'ಪೋಕಿರಿ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಬಾಲಿವುಡ್ ಮಂದಿ ಕೂಡ ಕರೆದು ಅವಕಾಶ ಕೊಟ್ಟಿರು. ತನ್ನ ಬಳಕುವ ಬಳ್ಳಿಯಂತ ಮೈಮಾಟದಿಂದ ಇಲಿಯಾನ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು. ಇತ್ತೀಚಿನ ವರ್ಷಗಳಲ್ಲಿ ಬಿಂದಾಸ್ ಚೆಲುವೆ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿತ್ತು. ಮೈಕೆಲ್ ಡೋಲನ್ ಎಂಬುವವರನ್ನು ಇಲಿಯಾನಾ ಮದುವೆ ಆಗಿದ್ದಾರೆ ಎನ್ನಲಾಗ್ತಿದೆ. ದಂಪತಿ ಈಗ ಮಗುವನ್ನು ಸ್ವಾಗತಿಸಿದ್ದಾರೆ ಎಂದು ಚರ್ಚೆ ಆಗುತ್ತಿದೆ.
ಈ ಹಿಂದೆ ಇಲಿಯಾನ ಆಸ್ಟ್ರೇಲಿಯಾ ಮೂಲದ ಫೋಟೊಗ್ರಾಫರ್ ಆಂಡ್ರ್ಯೂ ನೀಬೋನ್ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗಿತ್ತು. ಇಬ್ಬರು ಮದುವೆ ಕೂಡ ಆಗಿದ್ದರು ಎನ್ನುವ ವದಂತಿ ಇದೆ. 4 ವರ್ಷಗಳ ಹಿಂದೆ ಇಬ್ಬರು ದೂರಾಗಿದ್ದರು ಎನ್ನುವ ಗುಸುಗುಸು ಕೇಳಿಬಂದಿತ್ತು.


Click it and Unblock the Notifications











