ಮದುವೆ ಆಗಿದ್ದೀರಾ ಅಂತ ಕೇಳಿದ್ದಕ್ಕೆ ನಟಿ ಇಲಿಯಾನಾ ಹೀಗಾ ಹೇಳೋದು?!

By Harshitha

ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಮಿಂಚಿದ ಜನಪ್ರಿಯ ನಟಿ, ಬಾಲಿವುಡ್ ಬೊಂಬೆ ಇಲಿಯಾನಾ ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತ ವೈಯುಕ್ತಿಕ ವಿಚಾರಕ್ಕೆ ಹೆಚ್ಚು ಸೌಂಡ್ ಮಾಡ್ತಿದ್ದಾರೆ.

ಆಸ್ಟ್ರೇಲಿಯಾದ ಫೋಟೋಗ್ರಾಫರ್ ಆಂಡ್ರ್ಯೂ ನೀಬೋನ್ ಜೊತೆಗೆ ಇಲಿಯಾನಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಸಂಗತಿ ಸದ್ಯ ಗುಟ್ಟಾಗಿ ಉಳಿದಿಲ್ಲ. ಅಸಲಿಗೆ, ಆಂಡ್ರ್ಯೂ ಜೊತೆಗೆ ಕ್ಲಿಕ್ ಮಾಡಿಕೊಂಡಿರುವ ಹಲವು ಸೆಲ್ಫಿ ಮತ್ತು ಫೋಟೋಗಳನ್ನ ಖುದ್ದಾಗಿ ಇಲಿಯಾನಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಬರೀ ಇಷ್ಟೇ ಆಗಿದ್ದರೆ ಪರ್ವಾಗಿಲ್ಲ. ಆದ್ರೆ ಕಳೆದ ಕ್ರಿಸ್ಮಸ್ ಹಬ್ಬದಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಇಲಿಯಾನಾ ಪೋಸ್ಟ್ ಮಾಡಿದ ಒಂದು ಫೋಟೋ ಹಾಗೂ ಅದಕ್ಕೆ ಕೊಟ್ಟ ಕ್ಯಾಪ್ಷನ್ ಎಲ್ಲರ ಕಣ್ಣರಳಿಸುವಂತೆ ಮಾಡಿತ್ತು. ಆ ಫೋಟೋ ಮತ್ತು ಕ್ಯಾಪ್ಷನ್ ನೋಡಿ ಇಲಿಯಾನಾ ಗುಟ್ಟಾಗಿ ಮದುವೆ ಮಾಡಿಕೊಂಡ್ಬಿಟ್ಟಿದ್ದಾರೆ ಅಂತಲೇ ಎಲ್ಲರೂ ಭಾವಿಸಿದ್ದರು.

ತಮ್ಮ ಮದುವೆ 'ಗುಟ್ಟಿನ' ಬಗ್ಗೆ ಮೊನ್ನೆಯಷ್ಟೇ ಪತ್ರಿಕಾ ಹಾಗೂ ಮಾಧ್ಯಮ ಪ್ರತಿನಿಧಿಗಳ ಮುಂದೆ ಇಲಿಯಾನಾ ಹೇಳಿದ್ದು ಹೀಗೆ -

ಕ್ರಿಸ್ಮಸ್ ಹಬ್ಬದಂದು ಇಲಿಯಾನಾ ಹಾಕಿದ್ದ ಪೋಸ್ಟ್ ಏನು.?

ಕ್ರಿಸ್ಮಸ್ ಹಬ್ಬದಂದು ಇಲಿಯಾನಾ ಹಾಕಿದ್ದ ಪೋಸ್ಟ್ ಏನು.?

ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದ ಇಲಿಯಾನಾ, ''My favourite time of the year #love #family Photo by hubby @andrewkneebonephotography'' ಎಂದು ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಒಂದನ್ನು ಅಪ್ ಲೋಡ್ ಮಾಡಿದ್ದರು. ತಮ್ಮ ಪೋಸ್ಟ್ ನಲ್ಲಿ ''ಫೋಟೋ ಬೈ ಹಬ್ಬಿ (ಪತಿ) ಆಂಡ್ರ್ಯೂ'' ಎಂದು ಇಲಿಯಾನಾ ಹೇಳಿದ್ದರಿಂದ ಆಂಡ್ರ್ಯೂ ಜೊತೆಗೆ ಇಲಿಯಾನಾ ಮದುವೆ ಆಗಿದೆ ಅಂತ ಎಲ್ಲರೂ ಅಂದುಕೊಂಡರು.

ತುಟಿ ಎರಡು ಮಾಡದ ಇಲಿಯಾನಾ.!

ತುಟಿ ಎರಡು ಮಾಡದ ಇಲಿಯಾನಾ.!

ಇದೇ ಪೋಸ್ಟ್ ನೋಡಿ, ''ನಿಮಗೆ ಮದುವೆ ಆಯ್ತಾ.?'' ಎಂದು ಎಷ್ಟೋ ಅಭಿಮಾನಿಗಳು ಕಾಮೆಂಟ್ ಮಾಡಿದ್ರೂ, ಅದಕ್ಕೆ ಇಲಿಯಾನಾ ತುಟಿ ಎರಡು ಮಾಡಿರಲಿಲ್ಲ. ಮದುವೆ ಆಗಿರುವ ಬಗ್ಗೆ ಎಲ್ಲರೂ ಸ್ಪಷ್ಟನೆ ಕೂಡ ನೀಡಿರಲಿಲ್ಲ ಇಲಿಯಾನಾ.

ಸಿನಿಮಾ ಪ್ರಮೋಷನ್ ಗೆ ಬರಲೇಬೇಕಾಯ್ತು.!

ಸಿನಿಮಾ ಪ್ರಮೋಷನ್ ಗೆ ಬರಲೇಬೇಕಾಯ್ತು.!

ಅಜಯ್ ದೇವ್ಗನ್ ಜೊತೆಗೆ ಇಲಿಯಾನಾ ನಟಿಸಿರುವ 'ರೇಡ್' ಚಿತ್ರದ ಟ್ರೈಲರ್ ಲಾಂಚ್ ಸಮಾರಂಭದಲ್ಲಿ ಇಲಿಯಾನಾಗೆ ಪತ್ರಿಕಾ ಹಾಗೂ ಮಧ್ಯಮ ಮಿತ್ರರಿಂದ ಎದುರಾದ ಮೊದಲ ಪ್ರಶ್ನೆ ''ಮದುವೆ ಆಗಿದ್ಯಾ.?''

ಇಲಿಯಾನಾ ಕೊಟ್ಟ ಸ್ಪಷ್ಟನೆ ಏನು.?

ಇಲಿಯಾನಾ ಕೊಟ್ಟ ಸ್ಪಷ್ಟನೆ ಏನು.?

''ಏನಂತ ಕಾಮೆಂಟ್ ಮಾಡಬೇಕು ಎಂಬುದು ನನಗೆ ಗೊತ್ತಾಗುತ್ತಿಲ್ಲ. ವೃತ್ತಿ ಹಾಗೂ ವೈಯುಕ್ತಿಕ ಜೀವನದಲ್ಲಿ ನಾನು ಖುಷಿಯಾಗಿದ್ದೇನೆ. ನನ್ನ ವೈಯುಕ್ತಿಕ ಜೀವನದ ಬಗ್ಗೆ ಮಾತನಾಡಲು ನನಗೆ ಇಷ್ಟ ಇಲ್ಲ'' ಎಂದಷ್ಟೇ ಇಲಿಯಾನಾ ಹೇಳಿದ್ದಾರೆ.

ಸ್ಪಷ್ಟನೆ ಸಿಗಲೇ ಇಲ್ಲ

ಸ್ಪಷ್ಟನೆ ಸಿಗಲೇ ಇಲ್ಲ

ಕಡೆಗೂ ಇಲಿಯಾನಾ ತಮ್ಮ ಮದುವೆ ಬಗ್ಗೆ ಸ್ಪಷ್ಟ ಪಡಿಸಲೇ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿ (ಪತಿ) ಅಂತ ಬರೆದುಕೊಳ್ಳುವ ಇಲಿಯಾನಾ, ಮಾಧ್ಯಮಗಳ ಮುಂದೆ ''ಕಾಮೆಂಟ್ ಮಾಡಲ್ಲ'' ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

More from Filmibeat

English summary
Read the article to know Ileana's reply when asked if she was married to Andrew Kneebone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X