IMDB: ಅತಿ ಕಡಿಮೆ ರೇಟಿಂಗ್ ಪಡೆದ ಐದು ಬಾಲಿವುಡ್‌ ಚಿತ್ರಗಳು

ಐಎಂಡಿಬಿಯಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಚಿತ್ರ, ಅತಿ ಹೆಚ್ಚು ನಿರೀಕ್ಷಿತ ಚಿತ್ರ, ಅತಿ ಹೆಚ್ಚು ಸದ್ದು ಮಾಡುವ ಚಿತ್ರ ಯಾವುದು ಎಂಬ ಕುತೂಹಲ ಸಹಜವಾಗಿ ಸಿನಿ ಅಭಿಮಾನಿಗಳನ್ನು ಕಾಡುತ್ತದೆ. ಇದು ಅತಿ ಕಡಿಮೆ ರೇಟಿಂಗ್ ಪಡೆದ ಚಿತ್ರಗಳ ಸ್ಪೆಷಲ್ ಸ್ಟೋರಿ.

Recommended Video

ಓಂ ಆದ್ಮೇಲೆ ನಾನು ಎಂಜಾಯ್ ಮಾಡಿದ ಸಿನಿಮಾ ಇದು | Filmibeat Kannada

ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಬಾಲಿವುಡ್ ಇಂಡಸ್ಟ್ರಿ ಮೇಲೆ ಈ ಮಟ್ಟದ ಪರಿಣಾಮ ಬೀರುತ್ತೆ ಎಂದು ಯಾರೂ ಸಹ ಅಂದಾಜಿಸಿಲ್ಲ. ನೆಪೋಟಿಸಂ ಎಂಬ ವಿಷ್ಯ ಪ್ರಭಾವಿಗಳ ಚಿತ್ರಕ್ಕೆ ಈ ಮಟ್ಟದ ಹಿನ್ನಡೆ ತರುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಅಚ್ಚರಿ ಎಂಬಂತೆ ಸಿನಿಮಾ ರಿಲೀಸ್ ಆಗುವುದಕ್ಕೆ ಮೊದಲೇ ಸಡಕ್ 2 ಚಿತ್ರಕ್ಕೆ ಭಾರಿ ಹಿನ್ನಡೆ ಆಗಿದೆ. ಐಎಂಡಿಬಿ ರೇಟಿಂಗ್‌ನಲ್ಲಿ ಅತ್ಯಂತ ಕಡಿಮೆ ಅಂಕ ಪಡೆದುಕೊಂಡು ಕಳಪೆ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮುಂದೆ ಓದಿ...

'ಸಡಕ್-2' ಚಿತ್ರಕ್ಕೆ ಅತಿ ಕಡಿಮೆ ರೇಟಿಂಗ್

'ಸಡಕ್-2' ಚಿತ್ರಕ್ಕೆ ಅತಿ ಕಡಿಮೆ ರೇಟಿಂಗ್

ಭಾರತೀಯ ಚಿತ್ರಗಳಿಗೆ ಜನಪ್ರಿಯತೆ ಆಧಾರದಲ್ಲಿ ಅಭಿಮಾನಿಗಳ ಮತಗಳ ಮೂಲಕ ರೇಟಿಂಗ್ ನೀಡುವ ಐಎಂಡಿಬಿ ಪಟ್ಟಿಯಲ್ಲಿ ಸಡಕ್ 2 ಚಿತ್ರಕ್ಕೆ ಅತ್ಯಂತ ಕಡಿಮೆ ಅಂಕ ಸಿಕ್ಕಿದೆ. ಇನ್ನೂ ಬಿಡುಗಡೆಯಾಗದ ಸಡಕ್ 2 ಚಿತ್ರಕ್ಕೆ ಐಎಂಡಿಬಿಯಲ್ಲಿ ಕೇವಲ 1 ರೇಟಿಂಗ್ ಮಾತ್ರ ಸಿಕ್ಕಿದೆ. ಮಹೇಶ್ ಭಟ್ ನಿರ್ದೇಶನ, ಆಲಿಯಾ ಭಟ್, ಪೂಜಾ ಭಟ್, ಸಂಜಯ್ ದತ್, ಆದಿತ್ಯ ರಾಯ್ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಡಿಸ್‌ಲೈಕ್‌ನಲ್ಲಿ ಕೆಟ್ಟ ದಾಖಲೆ

ಡಿಸ್‌ಲೈಕ್‌ನಲ್ಲಿ ಕೆಟ್ಟ ದಾಖಲೆ

ಸಡಕ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಲೈಕ್ಸ್‌ಗಿಂತ ಡಿಸ್‌ಲೈಕ್ ಹೆಚ್ಚು ಸಿಕ್ಕಿದೆ. ಬಹುಶಃ ಇದುವರೆಗೂ ಯಾವ ಚಿತ್ರಕ್ಕೂ ಯೂಟ್ಯೂಬ್‌ನಲ್ಲಿ ಈ ರೀತಿ ರೆಸ್‌ಪಾನ್ಸ್ ಸಿಕ್ಕಿರಲ್ಲ. 71 ಮಿಲಿಯನ್ ವೀಕ್ಷಣೆ ಕಂಡಿದೆ. ಅದರಲ್ಲಿ 12 ಮಿಲಿಯನ್ ಜನರು ದ್ವೇಷಿಸಿದ್ದಾರೆ. ಕೇವಲ 70 ಸಾವಿರ ಜನರು ಮಾತ್ರ ಟ್ರೈಲರ್ ಇಷ್ಟಪಟ್ಟಿದ್ದಾರೆ.

ಬಿಡಗಡೆಗೂ ವಿರೋಧ!

ಬಿಡಗಡೆಗೂ ವಿರೋಧ!

ಸಡಕ್ 2 ಚಿತ್ರದ ಟ್ರೈಲರ್‌ಗೆ ಸಿಕ್ಕಿರುವ ಕಳಪೆ ರೆಸ್‌ಪಾನ್ಸ್ ಸಿನಿಮಾ ಬಿಡುಗಡೆ ಆದಾಗಲೂ ಬರಬಹುದು ಎಂಬ ನಿರೀಕ್ಷೆ ಇದೆ. ಸದ್ಯಕ್ಕೆ ಚಿತ್ರಮಂದಿರಗಳು ತೆರೆಯಲು ಅನುಮತಿ ಸಿಕ್ಕಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಕೊರೊನಾದಿಂದ ಲೆಕ್ಕಾಚಾರವೇ ತಲೆಕೆಳಗಾಗಿದೆ. ಪ್ರೇಕ್ಷಕರಿಂದ ವಿರೋಧ ಎದುರಿಸುತ್ತಿರುವ ಚಿತ್ರದ ಭವಿಷ್ಯ ಏನು ಎಂಬುದು ಸದ್ಯಕ್ಕೆ ಗೊಂದಲವಾಗಿಯೇ ಉಳಿದಿದೆ.

More from Filmibeat

English summary
Mahesh bhatt directorial movie sadak 2 is the lowest rated movie in IMDB. the film starring alia bhatt, pooja bhat, sanjay dutt and others.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X