ಕಿರುಕುಳ ನೀಡಿ ಇಸ್ಲಾಂ ಗೆ ಮತಾಂತರಿಸಲು ಯತ್ನಿಸಿದ್ದರು: ವಾಜಿದ್ ಖಾನ್ ಪತ್ನಿ

ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ಇದೇ ವರ್ಷದ ಜೂನ್ 1 ನಿಧನಹೊಂದಿದರು. ವಾಜಿದ್ ಖಾನ್ ಪತ್ನಿ ಕಮಲ್‌ರುಖ್ ಖಾನ್ ಇದೀಗ, ಆಘಾತಕಾರಿ ಸಂಗತಿಯೊಂದನ್ನು ಹೊರಹಾಕಿದ್ದಾರೆ.

ವಾಜಿದ್ ಖಾನ್ ಕುಟುಂಬದವರು , ಕಮಲ್‌ರುಖ್ ಅವರನ್ನು ಇಸ್ಲಾಂ ಗೆ ಮತಾಂತರವಾಗುವಂತೆ ಒತ್ತಾಯ ಹೇರಿದ್ದರಂತೆ, ಅಷ್ಟೆ ಅಲ್ಲ ಮಾನಸಿಕ ಕಿರುಕುಳವನ್ನು ಸಹ ನೀಡಿದ್ದರಂತೆ. ಲವ್ ಜಿಹಾದ್ ವಿರುದ್ಧ ಕಾನೂನು ರಚನೆ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಕಮಲ್‌ರುಖ್ ತಮ್ಮ ಅನುಭವವನ್ನು ಸುದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವಾಜಿದ್ ಖಾನ್ ಹಾಗೂ ಪಾರ್ಸಿ ಸಮುದಾಯಕ್ಕೆ ಸೇರಿದ್ದ ಕಮಲ್‌ರುಖ್ ಸ್ಪೆಷಲ್ ಮ್ಯಾರೇಜ್ ಆಕ್ಟ್‌ ಅಡಿಯಲ್ಲಿ ವಿವಾಹವಾಗಿದ್ದರು. ಈ ಕಾಯ್ದೆಯ ಪ್ರಕಾರ, ಇಬ್ಬರೂ ಮದುವೆಯ ನಂತರ ಅವರವರ ಧರ್ಮಗಳನ್ನು ಪಾಲಿಸಬಹುದಾಗಿರುತ್ತದೆ.

ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಯತ್ನ

ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಯತ್ನ

ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ವಾಜಿದ್ ಖಾನ್ ಕುಟುಂಬವು ಕಮಲ್‌ರುಖ್ ಅನ್ನು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ ಹೇರಲಾರಂಭಿಸಿತಂತೆ. ಈ ಬಗ್ಗೆ ವಾಜಿದ್ ಖಾನ್ ಹಾಗೂ ಪತ್ನಿ ಕಮಲ್‌ರುಖ್ ನಡುವೆಯೂ ಸಾಕಷ್ಟು ವಾದ ವಿವಾದಗಳು ನಡೆಯುತ್ತಿದ್ದವಂತೆ.

ಸ್ವತಂತ್ರ್ಯ ಚಿಂತನೆಯ, ಶಿಕ್ಷಿತ ಹೆಣ್ಣುಮಗಳು ನಾನು: ಕಮಲ್‌ರುಖ್

ಸ್ವತಂತ್ರ್ಯ ಚಿಂತನೆಯ, ಶಿಕ್ಷಿತ ಹೆಣ್ಣುಮಗಳು ನಾನು: ಕಮಲ್‌ರುಖ್

'ನಾನೊಬ್ಬ ಸ್ವತಂತ್ರ್ಯ ಚಿಂತನೆಯ, ಶಿಕ್ಷಿತ, ಸ್ವತಂತ್ರ್ಯ ವ್ಯಕ್ತಿತ್ವದ ಪಾರ್ಸಿ ಧರ್ಮಕ್ಕೆ ಸೇರಿದ ಹೆಣ್ಣುಮಗಳಾಗಿದ್ದೆ. ಪಾರ್ಸಿ ಧರ್ಮದ ಪ್ರಕಾರ ನನ್ನನ್ನು ಬೆಳೆಸಲಾಗಿತ್ತು, ಮನೆಯಲ್ಲಿ ಪ್ರಜಾಪ್ರಭುತ್ವ ರೀತಿಯ ವಾತಾವರಣವಿತ್ತು, ಶಿಕ್ಷಣ ಎಲ್ಲರಿಗೂ ಖಡ್ಡಾಯವಾಗಿತ್ತು, ಆದರೆ ನನ್ನ ಸ್ವತಂತ್ರ್ಯ ಚಿಂತನೆ, ಶಿಕ್ಷಣ, ಸ್ವಾತಂತ್ರ್ಯ ಇವೆಲ್ಲವು ವಾಜಿದ್ ಖಾನ್ ಮನೆಯವರಿಗೆ ಹಿಡಿಸಲಿಲ್ಲ, ಅವರು ನನ್ನನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ' ಎಂದಿದ್ದಾರೆ ಕಮಲ್‌ರುಖ್.

ಇಸ್ಲಾಂ ಗೆ ಮತಾಂತರವಾಗಲು ಇಷ್ಟವಿರಲಿಲ್ಲ: ಕಮಲ್‌ರುಖ್

ಇಸ್ಲಾಂ ಗೆ ಮತಾಂತರವಾಗಲು ಇಷ್ಟವಿರಲಿಲ್ಲ: ಕಮಲ್‌ರುಖ್

ನಾನು ಇಸ್ಲಾಂ ಗೆ ಮತಾಂತರವಾಗಲು ಸುತಾರಂ ಒಪ್ಪಲಿಲ್ಲ, ಅದನ್ನು ಪ್ರತಿಭಟಿಸಿದೆ. ಇದು ನನ್ನ ಹಾಗೂ ವಾಜಿದ್ ಸಂಬಂಧದ ನಡುವೆ ಬಿರುಕು ಮೂಡಿಸಿತು. ವಾಜಿದ್ ಕುಟುಂಬದವರು ನನಗೆ ಮಾನಸಿಕ ಕಿರುಕುಳ ಕೊಡಲು ಪ್ರಾರಂಭಿಸಿದರು. ನನ್ನನ್ನು ನ್ಯಾಯಾಲಯಕ್ಕೆ ಎಳೆದರು, ಬೇರೆ ರೀತಿಯ ಕಿರುಕುಳ ನೀಡಿದರು, ಆದರೆ ನಾನು ಇಸ್ಲಾಂ ಗೆ ಮತಾಂತರವಾಗಲು ಸುತಾರಾಂ ಒಪ್ಪಲಿಲ್ಲ' ಎಂದು ಬರೆದುಕೊಂಡಿದ್ದಾರೆ ಕಮಲ್‌ರುಖ್.

'ಹಲವು ತಂತ್ರಗಳನ್ನು ವಾಜಿದ್ ಸಹೋದರರು ಬಳಿಸಿದರು'

'ಹಲವು ತಂತ್ರಗಳನ್ನು ವಾಜಿದ್ ಸಹೋದರರು ಬಳಿಸಿದರು'

ಮಕ್ಕಳನ್ನು ಇಸ್ಲಾಂ ಗೆ ಮತಾಂತರಗೊಳಿಸಲು ವಾಜಿದ್ ಖಾನ್ ಸಹೋದರರು ಬಹುವಾಗಿ ಪ್ರಯತ್ನಪಟ್ಟರು, ಭಯಗೊಳಿಸುವಂತಹಾ ಕೆಲವು ತಂತ್ರಗಳನ್ನು ಬಳಸಿದರು, ಆದರೆ ನಾನು ಮತ್ತು ನನ್ನ ಮಕ್ಕಳು ಇಸ್ಲಾಂ ಗೆ ಮತಾಂತರವಾಗಬಾರದೆಂಬ ಅಚಲ ನಿರ್ಧಾರಕ್ಕೆ ಬಂದಿದ್ದೆವು ಎಂದಿದ್ದಾರೆ ಕಮಲ್‌ರುಖ್.

Recommended Video

Sushant Singh Rajput:ಸುಶಾಂತ್ ಸಿಂಗ್ ಸಾವಿನ ಕೇಸಿಗೆ ತಿರುವು ನೀಡಿದ ವರದಿ! | Filmibeat Kannada
ನಾನು ಎಲ್ಲ ಧರ್ಮವನ್ನೂ ಗೌರವಿಸುತ್ತೇನೆ: ಕಮಲ್‌ರುಖ್

ನಾನು ಎಲ್ಲ ಧರ್ಮವನ್ನೂ ಗೌರವಿಸುತ್ತೇನೆ: ಕಮಲ್‌ರುಖ್

ನಾನು ಮತ್ತು ನನ್ನ ಇಬ್ಬರು ಮಕ್ಕಳು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇವೆ. ಧರ್ಮವು ಭಿನ್ನತೆಯನ್ನು ಸಂಭ್ರಮಿಸುವುದ್ದಾಗಿರಬೇಕೆ ವಿನಃ ಕುಟುಂಬಗಳನ್ನು ಬೇರ್ಪಡಿಸುವುದಾಗಿರಬಾರದು. ಎಲ್ಲಾ ಧರ್ಮಗಳ ಗುರಿಯು ಮಾನವೀಯತೆ ಒಂದೇ. 'ಬದುಕು-ಬದುಕಲುಬಿಡು' ಎಂಬ ಏಕ ಧರ್ಮವನ್ನಷ್ಟೆ ಎಲ್ಲರೂ ಪಾಲಿಸಬೇಕು ಎಂದಿದ್ದಾರೆ ಕಮಲ್‌ರುಖ್.

More from Filmibeat

English summary
Wajid Khan's wife Kamalrukh Khan said she and her children were forced to convert to Islam by her late husband's family members.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X