»   » ಹಾಲಿವುಡ್ ನಟನ ಹಿಂದೆ ಬಿದ್ರಾ ಬಾರ್ಬಿ ಡಾಲ್ ಕತ್ರಿನಾ ಕೈಫ್.?

ಹಾಲಿವುಡ್ ನಟನ ಹಿಂದೆ ಬಿದ್ರಾ ಬಾರ್ಬಿ ಡಾಲ್ ಕತ್ರಿನಾ ಕೈಫ್.?

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಬಾರ್ಬಿ ಡಾಲ್ ಕತ್ರಿನಾ ಕೈಫ್ ಅವರು ನಟ ರಣಬೀರ್ ಕಪೂರ್ ಜೊತೆ ತಮ್ಮ ಲವ್ ಬ್ರೇಕ್ ಅಪ್ ಮಾಡಿಕೊಂಡ ಮೇಲೆ ಸಖತ್ ಖುಷ್-ಖುಷಿಯಾಗಿ ಎಲ್ಲರ ಜೊತೆ ಬೆರೆಯುತ್ತಿದ್ದಾರೆ.

ಇತ್ತೀಚೆಗಷ್ಟೇ 33ನೇ ವರ್ಷದ ಹುಟ್ಟುಹಬ್ಬವನ್ನು ಕೂಡ ತಮ್ಮ ಆಪ್ತ ಸ್ನೇಹಿತರ ಜೊತೆ ಆಚರಿಸಿಕೊಂಡು ಖುಷಿ ಪಟ್ಟಿರುವ ಕ್ಯಾಟ್ ಹುಟ್ಟುಹಬ್ಬದ ದಿನದಂದು ಫೇಸ್ ಬುಕ್ಕಿಗೂ ಎಂಟ್ರಿ ಕೊಟ್ಟಿದ್ದಾರೆ.[ಕತ್ರಿನಾ ಕೈಫ್ 33: ಏಳು-ಬೀಳುಗಳ ಜರ್ನಿಯ ಬಗ್ಗೆ ಒಂದಿಷ್ಟು]

ಇದೀಗ ಫೇಸ್ ಬುಕ್ಕಿನಲ್ಲಿ ದಿನಕ್ಕೊಂದು ಫೋಟೋ ಮತ್ತು ವಿಡಿಯೋ ಅಪ್ ಲೋಡ್ ಮಾಡುತ್ತಾ ಅಭಿಮಾನಿಗಳಿಗೆ ತಮ್ಮ ಇರುವಿಕೆಯನ್ನು ತೋರಿಸುತ್ತಿದ್ದಾರೆ.

ಅಂದಹಾಗೆ ನಟಿ ಕತ್ರಿನಾ ಅವರಿಗೆ ಹಾಲಿವುಡ್ ನಟರೆಂದರೆ ಎಷ್ಟು ಇಷ್ಟ ಅನ್ನೋ ವಿಚಾರ ಅವರ ಅಭಿಮಾನಿಗಳಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಇದೀಗ ಹಾಲಿವುಡ್ ನಟ ರಾಬರ್ಟ್ ಪಾಟ್ಟಿನ್ ಸನ್ ಅವರನ್ನು ತಬ್ಬಿಕೊಂಡಿರುವ ಫೋಟೋ ಒಂದನ್ನು ಫೇಸ್ ಬುಕ್ಕಿನಲ್ಲಿ ಅಲ್ ಲೋಡ್ ಮಾಡಿದ್ದಾರೆ.

ಅಯ್ಯೋ, ರಣಬೀರ್ ಕೈ ಬಿಟ್ಟ ತಕ್ಷಣ ಹಾಲಿವುಡ್ ನಟನ ಕೈ ಹಿಡ್ಕೊಂಡ್ರಾ ಅಂತ ನೀವು ಸೂಪರ್ ಎಕ್ಸೈಟ್ ಆಗಿ ಯೋಚನೆ ಮಾಡಬೇಡಿ. ಅಸಲಿ ವಿಷಯ ಬೇರೆ ಇದೆ, ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

ತಬ್ಬಿಕೊಂಡಿರೋದೇನು ನಿಜ.!

ಬಾರ್ಬಿ ಡಾಲ್ ಕತ್ರಿನಾ ಕೈಫ್ ಹಾಲಿವುಡ್ ನಟ ರಾಬರ್ಟ್ ಅವರನ್ನು ತಬ್ಬಿಕೊಂಡಿರೋದೇನು ನಿಜ. ಆದರೆ ನಿಜವಾಗ್ಲೂ ಅಲ್ಲ, ಬದ್ಲಾಗಿ ರಾಬರ್ಟ್ ಅವರ ಮೇಣದ ಪ್ರತಿಮೆಯನ್ನು ತಬ್ಬಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.[ಕೆಟ್ಟ ಮೇಲೆ ಬುದ್ದಿ ಬಂತು ನೋಡಿ ನಮ್ಮ ಕತ್ರಿನಾಗೆ]

ಕ್ಯಾಪ್ಶನ್ ಪ್ಲೀಸ್

ಹಾಲಿವುಡ್ ನಟನ ಮೇಣದ ಪ್ರತಿಮೆಯನ್ನು ತಬ್ಬಿಕೊಂಡು ಪೋಸ್ ನೀಡಿರುವ ಈ ಫೋಟೋಗೆ ಕತ್ರಿನಾ ಅವರು 'ಹೇಗೆ ಕಾಣುತ್ತಿದ್ದೇವೆ ನಾವಿಬ್ಬರು' ಎಂದು ಕ್ಯಾಪ್ಶನ್ ಕೂಡ ಹಾಕಿಕೊಂಡಿದ್ದಾರೆ. ನೀವು ಕೂಡ ಕ್ಯಾಪ್ಶನ್ ಅಥವಾ ಕಾಮೆಂಟ್ ಮಾಡಬಹುದು.[ಅಬ್ಬಾ! ಲವ್ ಬ್ರೇಕ್ ಅಪ್ ಆದ್ರೂ ಕ್ಯಾಟ್ ಹ್ಯಾಪಿ, ಹೇಗೆ]

ಕತ್ರಿನಾ ಅವರ ಫೇವರಿಟಿ ಯಾರು ಗೊತ್ತಾ.?

ನಿಮಗೆಲ್ಲರಿಗೂ ಕತ್ರಿನಾ ಅವರು ಫೇವರಿಟಿ ಹೀರೋಯಿನ್ ಆದ್ರೆ, ಕತ್ರಿನಾ ಅವರ ಫೇವರಿಟಿ ಯಾರಪ್ಪಾ ಅಂದ್ರೆ, ನಿರ್ದೇಶಕ ಕಬೀರ್ ಮತ್ತು ನಿರ್ದೇಶಕ ಅಲಿ ಅಬ್ಬಾಸ್ ಜಾಫರ್.['ದಿ ಕಪೂರ್ಸ್' ಖಾನ್ದಾನ್ ನಿಂದ ಕತ್ರೀನಾ ಕಿಕ್ ಔಟ್.!]

ಕತ್ರಿನಾ ಇಷ್ಟಪಟ್ಟ ಲುಕ್

ಕತ್ರಿನಾ ಅವರು ತಮ್ಮ ಸಿನಿಮಾ ಕೆರಿಯರ್ ನಲ್ಲಿ ಇಷ್ಟಪಟ್ಟ ಹಾಗೂ ಅವರಿಗೆ ತುಂಬಾನೇ ತೃಪ್ತಿ ನೀಡಿದ ಗೆಟಪ್/ಲುಕ್ ಇದಂತೆ. ಹೀಗಂತ ಖುದ್ದು ಕತ್ರಿನಾ ಅವರೇ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದಾರೆ.

ವೋಗ್ ನಲ್ಲಿ ಕತ್ರಿನಾ ಝಲಕ್

ಜೂನ್, 2016ರ 'ವೋಗ್' ಕವರ್ ಪೇಜ್ ನಲ್ಲಿ ಕತ್ರಿನಾ ಕೈಫ್ ನೀಡಿದ ಸಖತ್ ಸ್ಟೈಲಿಷ್ ಅಂಡ್ ಬೋಲ್ಡ್ ಲುಕ್.

ಕತ್ರಿನಾ ಬೆಸ್ಟ್ ಫ್ರೆಂಡ್ ಯಾರು?

ಸ್ವಭಾವದಲ್ಲಿ ಸಾಧು ಆಗಿರುವ ನಟಿ ಕ್ಯಾಟ್ ಅವರ ಬೆಸ್ಟ್ ಫ್ರೆಂಡ್ ಯಾರೆಂದ್ರೆ, ನಿರ್ದೇಶಕ ಕಬೀರ್ ಖಾನ್ ಅವರು.

ಬಾರ್ ಬಾರ್ ದೇಖೋ ದಲ್ಲಿ ಕತ್ರಿನಾ ಚಷ್ಮಾ

ನಟ ಸಿದ್ದಾರ್ಥ್ ಮಲ್ಲೋತ್ರಾ ಅವರ ಜೊತೆ ಕತ್ರಿನಾ ಅವರು 'ಬಾರ್ ಬಾರ್ ದೇಖೋ' ಚಿತ್ರದಲ್ಲಿ ಮಿಂಚುತ್ತಿದ್ದಾರೆ. ಚಿತ್ರದ ಪೋಸ್ಟರ್ ನಲ್ಲಿ ಕತ್ರಿನಾ ಸಖತ್ ಚಷ್ಮಾ ಲುಕ್.

English summary
Bollywood Actress Katrina Kaif has a huge crush on Hollywood hottie, Robert Pattinson. Now the actress posted a so hot picture of hers on Facebook, in which she can be seen hugging the actor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada