»   » ಸಿಡ್ನಿಯಲ್ಲಿ ಕೊಹ್ಲಿ 'ಕಿಸ್'ಗೆ ಕಾದಿರುವ ಅನುಷ್ಕಾ.!

ಸಿಡ್ನಿಯಲ್ಲಿ ಕೊಹ್ಲಿ 'ಕಿಸ್'ಗೆ ಕಾದಿರುವ ಅನುಷ್ಕಾ.!

Posted By:
Subscribe to Filmibeat Kannada

ಟೀಮ್ ಇಂಡಿಯಾದ ಯಂಗ್ ಟೈಗರ್ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ನಡುವಿನ ಕುಚ್ ಕುಚ್ ಎಂಥದ್ದು ಅನ್ನುವುದಕ್ಕೆ ಬಾಲಿವುಡ್ ಗಲ್ಲಿಗಲ್ಲಿಗಳೇ ಸಾಕ್ಷಿ.

ಎಲ್ಲೇ ಹೋದರೂ, ಕೈಕೈ ಹಿಡಿದುಕೊಂಡು ಓಡಾಡುವ ಈ ಜೋಡಿಯ ಲವ್ವಿ ಡವ್ವಿ ಈಗ ಕೊಂಚ ಸೀರಿಯಸ್ ಆಗಿರುವುದರಲ್ಲಿ ಅನುಮಾನವೇ ಇಲ್ಲ.

In Pic ; Anushka Sharma Cheering Virat Kohli

ಅತ್ತ ಅನುಷ್ಕಾ ಅಭಿನಯದ ಸಿನಿಮಾ ರಿಲೀಸ್ ಆದ್ರೆ, ಗೆಳತಿಯ ನಟನಾಕೌಶಲ್ಯದ ಬಗ್ಗೆ ವಿರಾಟ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇತ್ತ ವಿರಾಟ್, ಮೈದಾನಕ್ಕಿಳಿಯುವ ಪ್ರತಿ ಪಂದ್ಯದಲ್ಲೂ ಅನುಷ್ಕಾ ಚಿಯರ್ ಮಾಡುತ್ತಿದ್ದಾರೆ. [ವಿಶ್ವಕಪ್ 2015 ವಿಶೇಷ ಪುಟ]

ಇವತ್ತು ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲೂ ಆಗುತ್ತಿರುವುದು ಇದೇ. ಆಸ್ಟ್ರೇಲಿಯಾ ತಂಡವನ್ನ ಬಗ್ಗು ಬಡಿಯುವುದಕ್ಕೆ ಫೀಲ್ಡಿಗಿಳಿದಿರುವ ಟೀಮ್ ಇಂಡಿಯಾ, ಅದ್ರಲ್ಲೂ ಸ್ಪೆಷಲ್ಲಾಗಿ ವಿರಾಟ್ ಆಟವನ್ನ ನೋಡೋಕೆ ಅನುಷ್ಕಾ ಶರ್ಮಾ ಹಾಜರಾಗಿದ್ದಾರೆ. [ಭಾರತ ಸೆಮೀಸ್ ಗೆಲ್ಲುತ್ತಾ? ಏನಂತಾರೆ ಕನ್ನಡ ತಾರೆಯರು]

In Pic ; Anushka Sharma Cheering Virat Kohli

ಸಾಮಾನ್ಯರಂತೆ ಸಿಡ್ನಿ ಕ್ರಿಕೆಟ್ ಗ್ರೌಂಡ್ ಗ್ಯಾಲರಿಯಲ್ಲಿ ಕೂತು ಪಂದ್ಯವನ್ನ ವೀಕ್ಷಿಸುತ್ತಿದ್ದಾರೆ ಅನುಷ್ಕಾ ಶರ್ಮಾ. ಆಸ್ಟ್ರೇಲಿಯಾ 300 ರ ಗಡಿ ದಾಟುತ್ತಿದ್ದಂತೆ ಅನುಷ್ಕಾ ಮುಖದಲ್ಲಿ ಟೆನ್ಷನ್ ಕಾಣೋಕೆ ಶುರುವಾಗಿದೆ. ಬಹುಶಃ ವಿರಾಟ್ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ ಮೇಲೆ ಮಂದಹಾಸ ಮೂಡಬಹುದೇನೋ...!?

English summary
Bollywood Actress Anushka Sharma has landed in Sydney, Australia to watch the Semi-Final match and cheer her beau Virat Kohli. In the latest pic, the Actress is seen sitting in the stadium and cheering.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada