»   » ಪತಿಗೆ ಕಿಸ್ ಕೊಟ್ಟ ನಟಿ ರಿಯಾ ಸೇನ್ ಫೋಟೋ ವೈರಲ್.!

ಪತಿಗೆ ಕಿಸ್ ಕೊಟ್ಟ ನಟಿ ರಿಯಾ ಸೇನ್ ಫೋಟೋ ವೈರಲ್.!

Posted By:
Subscribe to Filmibeat Kannada

ಬಾಲಿವುಡ್ ನಟಿ ರಿಯಾ ಸೇನ್ ಮದುವೆ ಆಗಿದ್ದು ತೀರಾ ಇತ್ತೀಚೆಗಷ್ಟೆ. ತಮ್ಮ ಬಾಯ್ ಫ್ರೆಂಡ್ ಶಿವಂ ತೆವಾರಿ ಜೊತೆ ಆಗಸ್ಟ್ 12 ರಂದು ಹಸೆಮಣೆ ಏರಿದ್ದ ನಟಿ ರಿಯಾ ಸೇನ್ ಇದೀಗ ಹನಿಮೂನ್ ನಲ್ಲಿ ಬಿಜಿಯಾಗಿದ್ದಾರೆ.

ಹನಿಮೂನ್ ಗಾಗಿ ಪ್ರೇಗ್, ಜೆಕ್ ರಿಪಬ್ಲಿಕ್ ಗೆ ಹಾರಿರುವ ನವ ಜೋಡಿಯ 'ಕಿಸ್ಸಿಂಗ್' ಫೋಟೋ ಒಂದು ಲೀಕ್ ಆಗಿದೆ. ಹೋಟೆಲ್ ಒಂದರಲ್ಲಿ, ಓಪನ್ ಪ್ಲೇಸ್ ನಲ್ಲಿ ಪತಿ ಶಿವಂ ತೆವಾರಿ ತುಟಿಗೆ ತುಟಿ ಬೆರೆಸಿರುವ ನಟಿ ರಿಯಾ ಸೇನ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿದೆ.

In Pic: Bollywood Actress Riya Sen Honeymoon picture

ಚಿತ್ರಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೊಂಬೆ ರಿಯಾ ಸೇನ್

ಅಷ್ಟಕ್ಕೂ, ಪಬ್ಲಿಕ್ ನಲ್ಲಿ ಪತಿ-ಪತ್ನಿ ಕಿಸ್ ಮಾಡುತ್ತಿರುವ ಫೋಟೋನ ಬೇರೆ ಯಾರೋ ಕ್ಲಿಕ್ ಮಾಡಿ ಲೀಕ್ ಮಾಡಿಲ್ಲ. ಬದಲಾಗಿ ನಟಿ ರಿಯಾ ಸೇನ್ ಅವರೇ ತಮ್ಮ ಇನ್ಸ್ ಟಾಗ್ರಾಮ್ ಅಕೌಂಟ್ ನಲ್ಲಿ 'ಕಿಸ್ಸಿಂಗ್ ಫೋಟೋ'ನ ಶೇರ್ ಮಾಡಿದ್ದಾರೆ.

#kisses for #mrs and a #heart for #art ☮️

A post shared by Riya Sen (@riyasendv) on Sep 11, 2017 at 1:08am PDT

'ಮಿಸಸ್ ಗೆ ಕಿಸಸ್' ಎಂದು ಬರೆದುಕೊಂಡು, ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋನ ನಟಿ ರಿಯಾ ಸೇನ್ ಜಗಜ್ಜಾಹೀರು ಮಾಡಿದ್ದಾರೆ. ಈ ಫೋಟೋ ನೋಡಿದ ಕೆಲವರು ದಂಪತಿಗೆ ಶುಭ ಹಾರೈಸಿದ್ರೆ, ಹಲವರು ಕಿಡಿಕಾರಿದ್ದಾರೆ. ಬೆಡ್ ರೂಮ್ ನಲ್ಲಿ ಇರಬೇಕಾದ ಸಂಗತಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ರಿಯಾ ರನ್ನ ತರಾಟೆಗೆ ತೆಗೆದುಕೊಳ್ತಿದ್ದಾರೆ.

English summary
Bollywood Actress Riya Sen has taken her Instagram Account to share a picture of Lip-lock with her husband Shivam Tewari.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada