For Quick Alerts
  ALLOW NOTIFICATIONS  
  For Daily Alerts

  ಈ ಫೋಟೋದಲ್ಲಿ ಇರುವ ಬೆಂಗಳೂರು ಬಾಲೆ ಯಾರು ಅಂತ ಹೇಳಿ...

  By Harshitha
  |

  ಜುಲೈ 4... ಮಂಗಳವಾರ ನಮ್ಮ 'ಫಿಲ್ಮಿಬೀಟ್ ಕನ್ನಡ' ಓದುಗರಿಗಾಗಿ ಒಂದು ಅಪರೂಪದ ಫೋಟೋ ಹೊತ್ತು ತಂದಿದ್ದೀವಿ ನೋಡಿ...

  ಒಮ್ಮೆ ಈ ಫೋಟೋ ಕಡೆ ಕಣ್ಣಾಡಿಸಿ... ಗ್ರೇ ಕಲರ್ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಟಾಪ್ ತೊಟ್ಟಿರುವ ಬಾಲಕಿ ಯಾರು ಅಂತ ಹೇಳಿ ನೋಡೋಣ...

  ತನ್ನ ತಂಗಿ ಜೊತೆ ಕೂತು ಕ್ಯಾಮರಾಗೆ ಪೋಸ್ ನೀಡಿರುವ ಈ ಬಾಲಕಿ ಬೇರೆ ಯಾರೂ ಅಲ್ಲ... ಬೆಂಗಳೂರಿನಲ್ಲಿ ಬೆಳೆದ... ಖ್ಯಾತ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಪುತ್ರಿ... ಬಾಲಿವುಡ್ ನಟಿ... ದೀಪಿಕಾ ಪಡುಕೋಣೆ.

  ದೀಪಿಕಾ ಪಡುಕೋಣೆ ಪಕ್ಕ ಕೆಂಪು ಪ್ಯಾಂಟ್ ಹಾಗೂ ಟಿ-ಶರ್ಟ್ ಧರಿಸಿ ಕೂತಿರುವ ಪುಟಾಣಿ ಸಹೋದರಿ ಅನೀಶಾ ಪಡುಕೋಣೆ.

  ದೀಪಿಕಾ ಹನ್ನೆರಡು ವರ್ಷದವಳಿದ್ದಾಗ ತೆಗೆದ ಫೋಟೋ ಇದು. ದೀಪಿಕಾ ಹಾಗೂ ಅನೀಶಾ.. ಇಬ್ಬರಿಗೂ ಹಾಲಿವುಡ್ ನಟ ಲಿಯೋನಾರ್ಡೋ ಡಿಕಾಪ್ರಿಯೋ ಅಂದ್ರೆ ಪಂಚ ಪ್ರಾಣ. ಹೀಗಾಗಿಯೇ, ತಮ್ಮ ಬೆಡ್ ರೂಮ್ ಗೋಡೆಗಳ ಮೇಲೆ ದೀಪಿಕಾ ಹಾಗೂ ಅನೀಶಾ ಲಿಯೋನಾರ್ಡೋ ಡಿಕಾಪ್ರಿಯೋ ರವರ ಪೋಸ್ಟರ್ ಗಳನ್ನ ಅಂಟಿಸಿಕೊಂಡಿದ್ದರಂತೆ. (ಪೋಸ್ಟರ್ ಗಳನ್ನ ನೀವು ಚಿತ್ರದಲ್ಲಿ ಕಾಣಬಹುದು)

  ವರ್ಷಗಳ ಹಿಂದೆ ಕ್ಲಿಕ್ ಆಗಿದ್ದ ಈ ಫೋಟೋವನ್ನ ನಟಿ ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರವನ್ನ ಐದುವರೆ ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

  English summary
  Bollywood Actress Deepika Padukone has taken her Instagram account to share her childhood picture. Take a look at the picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X