»   » ಬಾಯ್ ಫ್ರೆಂಡ್ ತುಟಿಗೆ ತುಟಿ ಒತ್ತಿದ ನಟಿ ಇಲಿಯಾನಾ ಫೋಟೋ ಸಖತ್ ವೈರಲ್!

ಬಾಯ್ ಫ್ರೆಂಡ್ ತುಟಿಗೆ ತುಟಿ ಒತ್ತಿದ ನಟಿ ಇಲಿಯಾನಾ ಫೋಟೋ ಸಖತ್ ವೈರಲ್!

Posted By:
Subscribe to Filmibeat Kannada

ಬೇರೆ ನಟಿಯರ ಹಾಗೆ ನಟಿ ಇಲಿಯಾನಾ ತಮ್ಮ 'ಸ್ಟೇಟಸ್' ಬಗ್ಗೆ ಎಂದೂ ಮುಚ್ಚು ಮರೆ ಮಾಡಿಲ್ಲ. ತಮ್ಮ ಇನಿಯನ ಜೊತೆ ಎಂದೂ ಕದ್ದು ಮುಚ್ಚಿ ಓಡಾಡಿಲ್ಲ. ಫೋಟೋಗ್ರಾಫರ್ ಆಂಡ್ರ್ಯೂ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಖುಲ್ಲಾಂಖುಲ್ಲ ಹೇಳಿಕೊಂಡಿದ್ದ ನಟಿ ಇಲಿಯಾನಾ ರವರ ಹೊಚ್ಚ ಹೊಸ ಫೋಟೋ ನೋಡಿದ್ರೆ ನೀವು ಏನಂತೀರೋ..!?

ದೀರ್ಘಕಾಲದ ಗೆಳೆಯ ಆಂಡ್ರ್ಯೂ ತುಟಿಗೆ ನಟಿ ಇಲಿಯಾನಾ ತುಟಿ ಬೆರೆಸಿದ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗಂತ ಯಾರೋ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿರಬೇಕು ಅಂದುಕೊಳ್ಳಬೇಡಿ.

In pic: Ileana DCruz kisses Andrew Kneebone

ಪತಿಗೆ ಕಿಸ್ ಕೊಟ್ಟ ನಟಿ ರಿಯಾ ಸೇನ್ ಫೋಟೋ ವೈರಲ್.!

ಬಾಯ್ ಫ್ರೆಂಡ್ ಆಂಡ್ರ್ಯೂ ಜೊತೆ ಕಳೆದ ಖಾಸಗಿ ಕ್ಷಣದ ಫೋಟೋ ಇಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಕಾರಣ ಸ್ವತಃ ನಟಿ ಇಲಿಯಾನಾ.

ಅಭಿಮಾನಿಗಳ ಅನುಚಿತ ವರ್ತನೆ: ಟ್ವಿಟ್ಟರ್ ನಲ್ಲಿ ಗುಡುಗಿದ ನಟಿ ಇಲಿಯಾನಾ

A moment. In a world of madness.

A post shared by Ileana D'Cruz (@ileana_official) on Sep 17, 2017 at 2:29am PDT

ಕ್ಯಾಮರಾ ಕಣ್ಣುಗಳಲ್ಲಿ ಸೆರೆ ಆಗಿರುವ ತಮ್ಮ ಮುತ್ತು-ಗಮ್ಮತ್ತಿನ ಕ್ಷಣವನ್ನ ನಟಿ ಇಲಿಯಾನಾ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲಕ್ಷಕ್ಕೂ ಅಧಿಕ ಮಂದಿ ಈ ಫೋಟೋ ನೋಡಿ ಲೈಕ್ ಬಟನ್ ಒತ್ತಿದ್ದಾರೆ.

English summary
Actress Ileana DCruz kisses Andrew Kneebone in her latest Instagram picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada