ಏನು.. ಬಚ್ಚನ್ ಬಹುರಾಣಿ ಐಶ್ವರ್ಯ ರೈ ಮತ್ತೆ ಗರ್ಭಿಣಿಯಂತೆ.! ಹೌದಾ.?

Recommended Video

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಐಶ್ವರ್ಯ ರೈ ಫೋಟೋ | FILMIBEAT KANNADA

ಬಚ್ಚನ್ ಬಹುರಾಣಿ.. ಮಾಜಿ ವಿಶ್ವಸುಂದರಿ.. ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿ ಆಗಿದ್ದಾರಾ.? ಹೀಗೊಂದು ಅನುಮಾನ ಬಿಟೌನ್ ಸಿನಿ ಪ್ರಿಯರು ಮತ್ತು ಐಶ್ವರ್ಯ ಅಭಿಮಾನಿಗಳನ್ನು ಕಾಡುತ್ತಿದೆ. ಅದಕ್ಕೆ ಕಾರಣವಾಗಿದ್ದು ಐಶ್ವರ್ಯ ರೈ ರವರ ಹೊಸ ಫೋಟೋ.

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕುಟುಂಬದ ಸದಸ್ಯರೊಬ್ಬರ ಮದುವೆ ಕಾರ್ಯಕ್ರಮ ಮೊನ್ನೆಮೊನ್ನೆಯಷ್ಟೇ ನಡೆಯಿತು. ಈ ಸಮಾರಂಭದಲ್ಲಿ ಪತಿ ಅಭಿಶೇಕ್ ಬಚ್ಚನ್ ಜೊತೆಗೆ ಐಶ್ವರ್ಯ ರೈ ಭಾಗವಹಿಸಿದ್ದರು. ಸಬ್ಯಸಾಚಿ ಮುಖರ್ಜಿ ಡಿಸೈನ್ ಮಾಡಿರುವ ಕೆಂಪು ಬಣ್ಣದ ಅನಾರ್ಕಲಿ, ಚೂರಿದಾರ್ ಮತ್ತು ದುಪ್ಪಟ್ಟವನ್ನ ಐಶ್ವರ್ಯ ರೈ ತೊಟ್ಟಿದ್ದರೆ, ಕಪ್ಪು ಬಣ್ಣದ ಸೂಟ್ ಧರಿಸಿದ್ದರು ಅಭಿಶೇಕ್ ಬಚ್ಚನ್.

ಮಿರಿ ಮಿರಿ ಮಿಂಚುತ್ತಿದ್ದ ಅಭಿಶೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಸಮಾರಂಭದಲ್ಲಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಿದ್ದರು. ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ್ಮೇಲೆ ಐಶ್ವರ್ಯ ಬಗ್ಗೆ ಹೊಸ ಗುಸುಗುಸು ಆರಂಭವಾಗಿದೆ.

ಕೆಂಪು ಬಣ್ಣದ ಅನಾರ್ಕಲಿ ಡ್ರೆಸ್ ನಲ್ಲಿ ಐಶ್ವರ್ಯ ರೈ ಗರ್ಭಿಣಿಯಂತೆ ಕಾಣುತ್ತಿದ್ದಾರೆ. ದುಪ್ಪಟ್ಟವನ್ನು ಸರಿಯಾಗಿ ಧರಿಸದ ಕಾರಣಕ್ಕೋ ಏನೋ ಐಶ್ವರ್ಯ ರೈ ಹೊಟ್ಟೆ ಉಬ್ಬಿದ ಹಾಗಿದೆ. ಇದನ್ನ ನೋಡಿದ ನೆಟ್ಟಿಗರು ''ಐಶ್ವರ್ಯ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಾ.?'' ಎಂದು ಪ್ರಶ್ನೆ ಮಾಡುತ್ತಿದ್ದಾರೆ.

In Pic: Is Aishwarya Rai Pregnant Again

ಕೆಲ ತಿಂಗಳ ಹಿಂದೆ ಐಶ್ವರ್ಯ ರೈ ಮತ್ತು ಅಭಿಶೇಕ್ ಬಚ್ಚನ್ ಗೋವಾದಲ್ಲಿ ಇದ್ದಾಗಲೂ ಇದೇ ರೀತಿಯ ಮಾತುಗಳು ಕೇಳಿಬಂದಿತ್ತು. ಅಂದು ಗೋವಾ ಬೀಚ್ ನಲ್ಲಿದ್ದ ಐಶ್ವರ್ಯ ರೈ ಫೋಟೋ ನೋಡಿ ನೆಟ್ಟಿಗರು ಐಶ್ವರ್ಯ ರೈ ಗರ್ಭಿಣಿ ಅಂತ ಮಾತನಾಡಿಕೊಂಡಿದ್ದರು. ಇದೀಗ ಮತ್ತೆ ಸೇಮ್ ಗಾಸಿಪ್ ಗೆ ಬಚ್ಚನ್ ಸೊಸೆ ಆಹಾರವಾಗಿದ್ದಾರೆ.

ಅಸಲಿಗೆ, ಐಶ್ವರ್ಯ ರೈ ಬಚ್ಚನ್ ನಿಜಕ್ಕೂ ಗರ್ಭಿಣಿನಾ.? ಅಥವಾ ಅನಾರ್ಕಲಿ ಡ್ರೆಸ್ ನಿಂದ ಹಾಗೆ ಕಾಣ್ತಿದ್ದಾರಾ ಅಂತ ಸ್ವತಃ ಅವರೇ ಸ್ಪಷ್ಟನೆ ಕೊಡಬೇಕು.

ಅಂದ್ಹಾಗೆ, ಅಭಿಶೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಮದುವೆ ಆಗಿದ್ದು ಹನ್ನೆರಡು ವರ್ಷಗಳ ಹಿಂದೆ.. ಅಂದ್ರೆ 2007 ರಲ್ಲಿ. 2011 ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿತು. ಮುದ್ದು ಮಗಳಿಗೆ ಆರಾಧ್ಯ ಬಚ್ಚನ್ ಅಂತ ಹೆಸರಿಡಲಾಗಿದೆ. 46 ವರ್ಷ ವಯಸ್ಸಿನ ಐಶ್ವರ್ಯ ರೈ ಸದ್ಯಕ್ಕಂತೂ ಚಿತ್ರರಂಗದಿಂದ ಬ್ರೇಕ್ ಪಡೆದು ಪತಿ, ಮಗಳ ಜೊತೆಗೆ ಹಾಯಾಗಿದ್ದಾರೆ.

More from Filmibeat

English summary
Is Aishwarya Rai Pregnant Again? Fans are speculating Aishwarya Rai's second pregnancy after looking at her apperance in Ambani Family's pre-wedding bash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X