ಫೋಟೋ ನೋಡಿ: ಮಗು ತೈಮುರ್ ಜೊತೆ 'ಅಮ್ಮ' ಕರೀನಾ

By Suneel

ಬಾಲಿವುಡ್‌ ನ ಸ್ಟಾರ್ ಕಪಲ್ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ದಂಪತಿಗೆ ನಿನ್ನೆಯಷ್ಟೇ (ಡಿಸೆಂಬರ್ 20, 2016) ಗಂಡು ಮಗು ಜನನವಾಗಿದ್ದು, ಮಗುವಿಗೆ 'ತೈಮುರ್ ಅಲಿ ಖಾನ್‌ ಪಟೌಡಿ' ಅಂತ ನಾಮಕರಣ ಮಾಡಲಾಗಿರುವ ವಿಚಾರ ಪಟೌಡಿ ಕುಟುಂಬದಿಂದ ಹೊರಬಿದ್ದಿತ್ತೇ ಹೊರತು, 'ಅಮ್ಮ' ಕರೀನಾ ಮತ್ತು ಮಗುವಿನ ಫೋಟೋ ಬಿಡುಗಡೆ ಆಗಿರಲಿಲ್ಲ.[ಸೈಫ್ ಅಲಿ ಖಾನ್-ಕರೀನಾ ದಂಪತಿಗೆ ಗಂಡು ಮಗು]

ಆದ್ರೆ ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ಜೊತೆ ಕರೀನಾ ಇರುವ ಎರಡು ಫೋಟೋಗಳು ವೈರಲ್ ಆಗಿವೆ. ಅವು ರಿಯಲ್ಲೋ ಅಥವಾ ಫೇಕೋ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ.

ಇದೇ ನೋಡಿ ಆ ಫೋಟೋ

ಇದೇ ನೋಡಿ ಆ ಫೋಟೋ

ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ಫೋಟೋಗಳಲ್ಲಿ ಇದು ಮೊದಲನೇಯದ್ದು. ಕರೀನಾ ತನ್ನ ಮಗುವಿನ ಹಣೆಗೆ ಮುತ್ತಿಡುತ್ತಿರುವ ಫೋಟೋ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್.

ಮತ್ತೊಂದು ಫೋಟೋ

ಮತ್ತೊಂದು ಫೋಟೋ

ಮಗು ಜೊತೆ ತಾಯಿ ಕರೀನಾ ಕಪೂರ್ ಇರುವ ಮತ್ತೊಂದು ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

ಸೈಫ್ ಫುಲ್ ಖುಷ್

ಸೈಫ್ ಫುಲ್ ಖುಷ್

ಕರೀನಾ ಕಪೂರ್ ಗೆ ಹೆರಿಗೆ ಆದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಹೊರಗೆ ಸೈಫ್ ಅಲಿ ಖಾನ್ ಕಾಣಿಸಿಕೊಂಡ ದೃಶ್ಯವಿದು. ಸೈಫ್ ಕುರಿತು ಸಹೋದರಿ ಸೋಹಾ ಅಲಿ ಖಾನ್‌, "ಸೈಫ್ ಮತ್ತೊಮ್ಮೆ ತಂದೆ ಆದ ನಂತರ ಹೆಚ್ಚು ಸಂತೋಷವಾಗಿದ್ದಾರೆ" ಎಂದು ಹೇಳಿದ್ದಾರೆ.

ಕರಿಷ್ಮಾ ಕಪೂರ್ ಜೊತೆಯಲ್ಲಿ ಸೈಫ್

ಕರಿಷ್ಮಾ ಕಪೂರ್ ಜೊತೆಯಲ್ಲಿ ಸೈಫ್

ಕರೀನಾ ತಾಯಿ ಆಗಿರುವ ಸಂತಸದಲ್ಲಿದ್ದಾರೆ ಸಹೋದರಿ ಕರೀಷ್ಮಾ ಕಪೂರ್.

ಆಸ್ಪತ್ರೆಗೆ ಕರಿಷ್ಮಾ ಕಪೂರ್ ಭೇಟಿ

ಆಸ್ಪತ್ರೆಗೆ ಕರಿಷ್ಮಾ ಕಪೂರ್ ಭೇಟಿ

ಮಂಗಳವಾರ ಸಂಜೆ ಕರಿಷ್ಮಾ ಕಪೂರ್, ತನ್ನ ಸಹೋದರಿ ಕರೀನಾ ಕಪೂರ್ ಮತ್ತು ಮಗು ತೈಮುರ್ ಅಲಿ ಖಾನ್ ನೋಡಲು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕ್ಲಿಕ್ ಆಗಿರುವ ಫೋಟೋ ಇದು.

ಸೈಫ್ ಅಲಿ ಖಾನ್ ಮಾವನ ಜೊತೆ

ಸೈಫ್ ಅಲಿ ಖಾನ್ ಮಾವನ ಜೊತೆ

ತಮ್ಮ ಮಾವ ರಣಧೀರ್ ಕಪೂರ್ ರೊಂದಿಗೆ ಸೈಫ್ ಅಲಿ ಖಾನ್ ಆಸ್ಪತ್ರೆಯ ಹೊರಗಡೆ ಕಾಣಿಸಿಕೊಂಡ ದೃಶ್ಯವಿದು.

ಸಂತಸದಲ್ಲಿ ರಣಧೀರ್ ಕಪೂರ್

ಸಂತಸದಲ್ಲಿ ರಣಧೀರ್ ಕಪೂರ್

"ನಮ್ಮ ಇಡೀ ಕುಟುಂಬ ಸಂತೋಷದಲ್ಲಿದೆ. ನಮ್ಮ ಕುಟುಂಬಕ್ಕೆ ಹೊಸ ಸದಸ್ಯನನ್ನು ಸ್ವಾಗತಿಸುತ್ತಿದ್ದೇವೆ. ಎಲ್ಲರ ಶುಭ ಹಾರೈಕೆಗೆ ಧನ್ಯವಾದಗಳು'' ಎಂದು ಕರೀನಾ ಕಪೂರ್ ಖಾನ್‌ ತಂದೆ ರಣಧೀರ್ ಕಪೂರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

More from Filmibeat

English summary
Bollywood's star couple Saif Ali Khan and Kareena Kapoor Khan, was blessed with their first child, a son, whom they have named Taimur Ali Khan Pataudi and now the first picture of Kareena with her baby is going viral on the social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X