ಸದ್ದಿಲ್ಲದೆ ಮದುವೆ ಆದ ಮಿಥುನ್ ಚಕ್ರವರ್ತಿ ಪುತ್ರ ಮಿಮೋಹ್.!
ಕಡೆಗೂ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಚಕ್ರವರ್ತಿ ಅಲಿಯಾಸ್ ಮಿಮೋಹ್ ಚಕ್ರವರ್ತಿ ವಿವಾಹ ಇಂದು ನೆರವೇರಿದೆ.
ಹಾಗ್ನೋಡಿದ್ರೆ, ಕಳೆದ ಶನಿವಾರ (ಜುಲೈ 7) ಮಿಮೋಹ್ ಚಕ್ರವರ್ತಿ - ಮಾದಲಸಾ ಶರ್ಮಾ ವಿವಾಹ ನಡೆಯಬೇಕಿತ್ತು. ಆದ್ರೆ, ಅಷ್ಟರೊಳಗೆ ಮಿಮೋಹ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂತು. ಅತ್ಯಾಚಾರ ಆರೋಪದ ಬಗ್ಗೆ ತನಿಖೆ ನಡೆಸಲು ಮದುವೆ ನಡೆಯಬೇಕಿದ್ದ ಜಾಗಕ್ಕೆ ಪೊಲೀಸರು ಎಂಟ್ರಿ ಕೊಟ್ಟ ಕಾರಣ ಅಂದು ವಿವಾಹ ಮಹೋತ್ಸವ ನಡೆಯಲಿಲ್ಲ.
ಜುಲೈ 7 ರಂದು ಪೊಲೀಸರು ಬಂದು ಹೋದ್ಮೇಲೆ, ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಮಿಮೋಹ್ ಚಕ್ರವರ್ತಿ - ಮಾದಲಸಾ ಶರ್ಮಾ ಇಂದು ಸಂಪ್ರದಾಯ ಬದ್ಧವಾಗಿ ಸಪ್ತಪದಿ ತುಳಿದಿದ್ದಾರೆ. ಮುಂದೆ ಓದಿರಿ....

ಊಟಿಯಲ್ಲಿ ಮಿಮೋಹ್ ಮದುವೆ
ಊಟಿಯಲ್ಲಿ ಇರುವ ಮಿಥುನ್ ಚಕ್ರವರ್ತಿ ಒಡೆತನದ ಐಷಾರಾಮಿ ಹೋಟೆಲ್ ನಲ್ಲಿ ಮಿಮೋಹ್ ಚಕ್ರವರ್ತಿ - ಮಾದಲಸಾ ಶರ್ಮಾ ವಿವಾಹ ಮಹೋತ್ಸವ ಸರಳವಾಗಿ ನೆರವೇರಿದೆ.

ಆಪ್ತರಿಗೆ ಮಾತ್ರ ಆಹ್ವಾನ
ಮಿಮೋಹ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ರಿಂದ, ಆಪ್ತರು ಹಾಗೂ ಕುಟುಂಬಸ್ತರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿತ್ತು.

ಲವ್ ಕಮ್ ಅರೇಂಜ್ಡ್ ಮ್ಯಾರೇಜ್
ಎರಡ್ಮೂರು ವರ್ಷಗಳಿಂದ ಮಿಮೋಹ್-ಮಾದಲಸಾ ಲವ್ ಮಾಡುತ್ತಿದ್ದರು. ಇಬ್ಬರ ಪ್ರೀತಿಗೆ ಉಭಯ ಕುಟುಂಬಗಳೂ ಸಮ್ಮತಿ ಸೂಚಿಸಿದ್ರಿಂದ ಇಂದು ಮದುವೆ ನೆರವೇರಿದೆ.

ಏನಿದು ಅತ್ಯಾಚಾರ ಆರೋಪ ಪ್ರಕರಣ.?
''ಮಿಥುನ್ ಚಕ್ರವರ್ತಿ ಪುತ್ರ ಮಿಮೋಹ್ ನನ್ನನ್ನ ಪ್ರೀತಿಸುತ್ತಿದ್ದ. ಮದುವೆ ಆಗುವುದಾಗಿ ನಂಬಿಸಿ, ವಂಚಿಸಿದ್ದಾನೆ'' ಎಂದು ನಟಿಯೊಬ್ಬರು ದೂರು ನೀಡಿದ್ದರು. ಆ ನಟಿಯ ಜೊತೆಗೆ ಮಿಮೋಹ್ ನಾಲ್ಕು ವರ್ಷಗಳಿಂದ ರಿಲೇಶನ್ ಶಿಪ್ ನಲ್ಲಿದ್ದರಂತೆ. ಒಂದು ಬಾರಿ ಆಕೆಗೆ ಗರ್ಭಪಾತ ಆಗಲು ಮಿಮೋಹ್ ಕಾರಣ ಎಂದು ದೂರಿನಲ್ಲಿ ಆ ನಟಿ ತಿಳಿಸಿದ್ದಾರೆ. ಆ ನಟಿಗೆ ಮಿಮೋಹ್ ತಾಯಿ ಯೋಗಿತಾ ಬಾಲಿ ಕೂಡ ಬೆದರಿಕೆ ಹಾಕಿದ್ರಿಂದ, ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಮಿಮೋಹ್ ಹಾಗೂ ತಾಯಿ ಯೋಗಿತಾ ಬಾಲಿಗೆ ಸದ್ಯ ಜಾಮೀನು ಲಭಿಸಿದೆ.


Click it and Unblock the Notifications











