For Quick Alerts
  ALLOW NOTIFICATIONS  
  For Daily Alerts

  ಹೋಗಿ ಹೋಗಿ ಹಳೇ ಫೋಟೋವನ್ನ ರಣ್ವೀರ್ ಸಿಂಗ್ ಶೇರ್ ಮಾಡಿದ್ಯಾಕೆ.?

  |
  Deepika Padukone Ranveer Singh Mumbai Reception : ದೀಪಿಕಾ ರಣ್ವೀರ್ ಮುಂಬೈ ರಿಸೆಪ್ಶನ್ ವಿಡಿಯೋ

  ಬಾಲಿವುಡ್ ನಟ ರಣ್ವೀರ್ ಸಿಂಗ್ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮದುವೆ ಆಗಿ ಇನ್ನೇನು ವರ್ಷ ಆಗುತ್ತಾ ಬಂತು. ಪ್ರೀತಿಸಿ ವಿವಾಹವಾಗಿರುವ ಈ ಜೋಡಿ ಎಲ್ಲೇ ಹೋದರೂ ಎಲ್ಲರ ಕಣ್ಣು ಕುಕ್ಕುತ್ತಲೇ ಇರುತ್ತಾರೆ.

  ಹೋದಲ್ಲೆಲ್ಲಾ ದೀಪಿಕಾ ಮತ್ತು ರಣ್ವೀರ್ ಸಿಂಗ್ ಕೆಮಿಸ್ಟ್ರಿ ಕ್ಯಾಮರಾ ಕಂಗಳಲ್ಲಿ ಸೆರೆ ಆಗುತ್ತಲೇ ಇರುತ್ತದೆ. ಸೋಷಿಯಲ್ ಮೀಡಿಯಾದಲ್ಲಂತೂ ಈ ಜೋಡಿ ಟ್ರೆಂಡಿಂಗ್ ನಲ್ಲೇ ಇರುತ್ತಾರೆ.

  ಹೀಗಿರುವಾಗಲೇ, ಇನ್ಸ್ಟಾಗ್ರಾಮ್ ನಲ್ಲಿ ರಣ್ವೀರ್ ಸಿಂಗ್ ಒಂದು ಫೋಟೋ ಶೇರ್ ಮಾಡಿದ್ದಾರೆ. ಅದು ಆರು ವರ್ಷಗಳ ಹಳೆಯ ಫೋಟೋ. 'ರಾಮ್-ಲೀಲಾ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಕ್ಲಿಕ್ ಆಗಿರುವ ಫೋಟೋವೊಂದನ್ನು ರಣ್ವೀರ್ ಸಿಂಗ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

  ಆ ಫೋಟೋದಲ್ಲಿ ದೀಪಿಕಾ ಸೊಂಟವನ್ನು ರಣ್ವೀರ್ ನೋಡುತ್ತಿರುವುದು ಸೆರೆಯಾಗಿದೆ. ಅದಕ್ಕೆ 'ಕ್ಯಾಪ್ಷನ್ ಕೊಡುವ ಅಗತ್ಯವಿಲ್ಲ' ಎನ್ನುತ್ತಾ ರಣ್ವೀರ್ ಶೇರ್ ಮಾಡಿದ್ದಾರೆ.

  View this post on Instagram

  No caption needed 😉 @deepikapadukone #RamLeela

  A post shared by Ranveer Singh (@ranveersingh) on

  ಅದನ್ನು ನೋಡಿ ದೀಪಿಕಾ ಪಡುಕೋಣೆ ''ಏಳು ವರ್ಷ ಆಯ್ತು. ಇನ್ನೂ ಏನೂ ಬದಲಾಗಿಲ್ಲ'' ಎಂದು ಕಾಮೆಂಟ್ ಮಾಡಿದ್ದಾರೆ.

  ಅಸಲಿಗೆ ವರ್ಷಗಳ ಹಿಂದಿನ ಈ ಫೋಟೋವನ್ನು ರಣ್ವೀರ್ ಈಗ ಯಾಕೆ ಶೇರ್ ಮಾಡಿದ್ರೋ, ಗೊತ್ತಿಲ್ಲ. ಆದ್ರೆ, ಇದನ್ನ ನೋಡಿದ ನೆಟ್ಟಿಗರು ಮಾತ್ರ ಬೇಜಾನ್ ಚರ್ಚೆ ಮಾಡುತ್ತಿದ್ದಾರೆ.

  English summary
  Bollywood Actor Ranveer Singh stares at Deepika Padukone on the sets of Ram Leela.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X