ನಾಗ ಸಾಧು ವೇಷದಲ್ಲಿರುವ ಈ ನಟ ಯಾರೆಂದು ಗುರುತಿಸಿ ನೋಡೋಣ...

By Harshitha

ಉದ್ದ ಕೂದಲು, ಗಡ್ಡ, ಕೊಳೆಯಾಗಿರುವ ಕೆಂಪು ಕೋಟು ಧರಿಸಿ... ಥೇಟ್ ನಾಗ ಸಾಧುವಿನಂತೆ ಕಾಣಿಸುತ್ತಿರುವ ಈ ನಟ ಯಾರೆಂದು ಹೇಳಿ ನೋಡೋಣ...

ಗೊತ್ತಾಗ್ಲಿಲ್ವಾ.? ಹೋಗಲಿ ಬಿಡಿ... ನಾವೇ ಹೇಳ್ತೀವಿ... ನಾಗ ಸಾಧು ವೇಷದಲ್ಲಿ ಇರುವವರು ಬೇರೆ ಯಾರೂ ಅಲ್ಲ. ಬಾಲಿವುಡ್ ನಟ ಸೈಫ್ ಅಲಿ ಖಾನ್.

In pic: Saif Ali Khan as Naga Sadhu in Hunter

ಹೌದು, ನಟ ಸೈಫ್ ಅಲಿ ಖಾನ್ ನಾಗ ಸಾಧು ಅವತಾರ ಎತ್ತಿದ್ದಾರೆ. ಅದು ತಮ್ಮ ಹೊಸ ಸಿನಿಮಾ 'ಹಂಟರ್' ಗಾಗಿ. 'ಹಂಟರ್' ಸಿನಿಮಾದಲ್ಲಿನ ತಮ್ಮ ಈ ವಿಶಿಷ್ಟ ಪಾತ್ರಕ್ಕೆ ಸೈಫ್ ಅಲಿ ಖಾನ್ ಸಕಲ ತಯಾರಿ ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ, 'ಹಂಟರ್' ಸಿನಿಮಾದಲ್ಲಿ ಸೈಫ್ ಅಲಿ ಖಾನ್ ರವರದ್ದು ಪರಾಭವಿ ನಾಗ ಸಾಧುವಿನ ಪಾತ್ರ. ಇದಕ್ಕಾಗಿ ತಮ್ಮ ಕಿವಿ ಚುಚ್ಚಿಸಿಕೊಂಡಿದ್ದಾರೆ ಸೈಫ್. ಅಲ್ಲದೇ, ಉದ್ದ ಕೂದಲು ಹಾಗೂ ಗಡ್ಡ ಕೂಡ ಬಿಟ್ಟಿದ್ದಾರೆ. ಪ್ರತಿ ದಿನ ಶೂಟಿಂಗ್ ಗೆ ತೆರಳುವ ಮುನ್ನ ಎರಡು ಗಂಟೆ ಮೇಕಪ್ ಮಾಡಿಕೊಳ್ಳುತ್ತಾರಂತೆ ಸೈಫ್ ಅಲಿ ಖಾನ್.

ಇದೇ ಸಿನಿಮಾಗಾಗಿ ಕತ್ತಿ ವರಸೆ ಸೇರಿದಂತೆ ಹಲವು ಮಾರ್ಷಲ್ ಆರ್ಟ್ಸ್ ಗಳನ್ನೂ ಕರಗತ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಯುದ್ಧ ಸನ್ನಿವೇಶಗಳು ಇರುವ ಕಾರಣ ಇವೆಲ್ಲ ಅವಶ್ಯಕವಾಗಿತ್ತಂತೆ.

ಅಣ್ಣ-ತಮ್ಮ ನಡುವಿನ ಸಮರದ ಕಥೆ ಇದಾಗಿದ್ದು, 'ಹಂಟರ್' ಚಿತ್ರಕ್ಕೆ ನವದೀಪ್ ಸಿಂಗ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯಕ್ಕೆ, 'ಹಂಟರ್' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಬಹುತೇಕ ರಾಜಸ್ಥಾನದಲ್ಲಿಯೇ ಚಿತ್ರದ ಶೂಟಿಂಗ್ ನಡೆಯುತ್ತಿದೆ.

More from Filmibeat

English summary
Bollywood Actor Saif Ali Khan as Naga Sadhu in Hunter film. Have a look at the picture.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X