For Quick Alerts
  ALLOW NOTIFICATIONS  
  For Daily Alerts

  ಚಿತ್ರಪುಟ; ನಿಮ್ಮನ್ನ ಬೆಕ್ಕಸ ಬೆರಗಾಗಿಸುವ ಆಮಿರ್ ಖಾನ್ ಹೊಸ ಲುಕ್!

  By Harshitha
  |

  'ಘಜಿನಿ', 'ಧೂಮ್ 3' ಚಿತ್ರದಲ್ಲಿ ಆಮಿರ್ ಖಾನ್ ರವರ ಕಟ್ಟುಮಸ್ತಾದ ದೇಹ ನೋಡಿ, ನೀವೆಲ್ಲಾ ಕಣ್ಣು ಬಾಯಿ ಬಿಟ್ಟಿರ್ತೀರಾ. ಈಗ ಆಮಿರ್ ಖಾನ್ ರವರ ಹೊಸ ಲುಕ್ ನೋಡಿದ್ರೆ, ನೀವು ಬೆಕ್ಕಸ ಬೆರಗಾಗುವುದು ಖಂಡಿತ.

  ತಮ್ಮ ಹೊಸ ಸಿನಿಮಾ 'Dangal' ಗಾಗಿ ಹೊಸ ಅವತಾರ ತಾಳುತ್ತಿರುವ ಆಮಿರ್ ಖಾನ್, ಕೇವಲ ಮೂರು ವಾರಗಳಲ್ಲಿ ಬರೋಬ್ಬರಿ 13 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.! [ಪಾತ್ರಕ್ಕಾಗಿ 18 ಕೆಜಿ ತೂಕ ಇಳಿಸಿಕೊಂಡ ನಟ ಹೂಡಾ]

  ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ರವರ ಜೀವನ ಚರಿತ್ರೆ ಆಧಾರಿತ ಚಿತ್ರ 'Dangal'. ಇದರಲ್ಲಿ ಮಹಾವೀರ್ ಸಿಂಗ್ ಫೋಗಟ್ ರವರ ಪಾತ್ರ ನಿರ್ವಹಿಸುತ್ತಿರುವ ಆಮಿರ್, ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಉದ್ದೇಶದಿಂದ 25 ಕೆ.ಜಿ ತೂಕ ಇಳಿಸಲು ಮನಸ್ಸು ಮಾಡಿದ್ದಾರೆ.

  95 ಕೆ.ಜಿ ತೂಗುತ್ತಿದ್ದ ಆಮಿರ್ ಖಾನ್, 25 ಕೆ.ಜಿ ತೂಕ ಇಳಿಸಲು ಹಗಲು ರಾತ್ರಿ ಎನ್ನದೆ, ಕಳೆದ ಕೆಲ ದಿನಗಳಿಂದ ಫಿಟ್ನೆಸ್ ಎಕ್ಸ್ ಪರ್ಟ್ ಗಳ ಮಾರ್ಗದರ್ಶನದಲ್ಲಿ ಅಮೇರಿಕದ ಅರಿಝೋನಾ ನಗರದಲ್ಲಿ ಟ್ರೆಕ್ಕಿಂಗ್, ಸ್ಕೈಕ್ಲಿಂಗ್, ಸ್ವಿಮ್ಮಿಂಗ್ ಮಾಡಿ ಸದ್ಯಕ್ಕೆ 13 ಕೆ.ಜಿ ತೂಕ ಇಳಿಸಿದ್ದಾರೆ. ['ಭರ್ಜರಿ'ಗಾಗಿ 25 ಕೆಜಿ ತೂಕ ಕಳೆದುಕೊಂಡ ಧ್ರುವ ಸರ್ಜಾ]

  ಅಮೇರಿಕದ ಅರಿಝೋನಾ ನಗರದಲ್ಲಿ ಆಮಿರ್ ಖಾನ್ ಬೆವರು ಹರಿಸಿರುವ ಫೋಟೋಗಳು ನಿಮ್ಮ 'ಫಿಲ್ಮಿಬೀಟ್'ಗೆ ಲಭ್ಯವಾಗಿದೆ. ಕೆಳಗಿರುವ ಗ್ಯಾಲರಿ ನೋಡಿ.....

  English summary
  Bollywood Actor Aamir Khan has shed his extra kilos from 95 to 82 kilos in just three weeks for his upcoming film 'Dangal'. Check out the pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X