ಬೀದಿಬದಿಯಲ್ಲಿ ತರಕಾರಿ ಮಾರಿದ ಪುನೀತ್ ರಾಜ್ ಕುಮಾರ್ ನಾಯಕಿ.!
Recommended Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 2015 ರಲ್ಲಿ ತೆರೆಕಂಡ 'ರಣವಿಕ್ರಮ' ಚಿತ್ರವನ್ನ ನೀವು ನೋಡಿದ್ದೀರಾ.? ನೋಡಿದ್ರೆ, ನಿಮಗೆ ಅದಾ ಶರ್ಮಾ ಪರಿಚಯ ಇದ್ದೇ ಇರುತ್ತೆ.
'ರಣವಿಕ್ರಮ' ಸಿನಿಮಾದಲ್ಲಿ ಹಾಲು ಗಲ್ಲದ ಸುಂದರಿ ಆಗಿ ಕಾಣಿಸಿಕೊಂಡಿದ್ದ ಅದಾ ಶರ್ಮಾ ಮೂಲತಃ ಮುಂಬೈನವರು. ಬಾಲಿವುಡ್ ನ '1920' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಅದಾ ಶರ್ಮಾ, ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿಯೂ ಅಷ್ಟೇ ಜನಪ್ರಿಯತೆ ಪಡೆದಿದ್ದಾರೆ.
ಇಂತಿಪ್ಪ ಅದಾ ಶರ್ಮಾ ಬೀದಿಬದಿಯಲ್ಲಿ ತರಕಾರಿ ಮಾರಾಟ ಮಾಡಿದ್ದಾರೆ. ಬೇಕಾದ್ರೆ, ನೀವೇ ಈ ಫೋಟೋ ನೋಡಿ...

ಹಳೇ ಸೀರೆ ತೊಟ್ಟು, ಫುಟ್ ಪಾತ್ ನಲ್ಲಿ ಅದಾ ಶರ್ಮಾ ತರಕಾರಿ ಮಾರಿರುವ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಷ್ಟಕ್ಕೂ, ನಟಿ ಅದಾ ಶರ್ಮಾ ಹೀಗೆ ಮಾಡಿದ್ದು ಯಾಕೆ ಅಂದ್ರೆ, ಇಂಟರ್ ನ್ಯಾಷನಲ್ ಪ್ರಾಜೆಕ್ಟ್ ಒಂದರ ಲುಕ್ ಟೆಸ್ಟ್ ಗಾಗಿ. ಅದಾ ಶರ್ಮಾ ರವರ ಈ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
'ಹಾರ್ಟ್ ಅಟ್ಯಾಕ್', 'ಸನ್ ಆಫ್ ಸತ್ಯಮೂರ್ತಿ', 'ಗರಂ', 'ಕ್ಷಣಂ' ಮುಂತಾದ ಸಿನಿಮಾಗಳಿಂದ ಖ್ಯಾತಿ ಪಡೆದಿದ್ದ ಅದಾ ಶರ್ಮಾ ರವರ ಮುಂದಿನ ಪ್ರಾಜೆಕ್ಟ್ ಸದ್ಯದಲ್ಲೇ ಘೋಷಣೆ ಆಗಲಿದೆ.


Click it and Unblock the Notifications










