»   » ಎಕ್ಸ್ ಕ್ಲೂಸಿವ್ ಫೋಟೋ ; ಒಂದಾದ ಜೋಡಿ ಹಕ್ಕಿ ವಿರಾಟ್-ಅನುಷ್ಕಾ!

ಎಕ್ಸ್ ಕ್ಲೂಸಿವ್ ಫೋಟೋ ; ಒಂದಾದ ಜೋಡಿ ಹಕ್ಕಿ ವಿರಾಟ್-ಅನುಷ್ಕಾ!

Posted By:
Subscribe to Filmibeat Kannada

'ಅವನಲ್ಲಿ...ಇವಳಿಲ್ಲಿ...ಮಾತಿಲ್ಲ...ಕತೆಯಿಲ್ಲ...ಎದುರೆದುರು ಬಂದಾಗ...ಹೆದರೆದರಿ ನಿಂತಾಗ...ಅಲ್ಲೇ ಆರಂಭ ಪ್ರೇಮ...' ಎಂಬಂತಾಗಿದೆ ಟೀಮ್ ಇಂಡಿಯಾದ ಸಿಡಿಲಮರಿ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮ ಲವ್ ಸ್ಟೋರಿ.

ಒಂದ್ಕಾಲದಲ್ಲಿ 'ನೀನೆಲ್ಲೋ...ನಾನಲ್ಲಿ...' ಅಂತ ಎಲ್ಲೇ ಹೋದರೂ, ಜೊತೆಯಾಗಿ ಒಲುಮೆಯ ಕಡಲಿನಲ್ಲಿ ತೇಲಾಡುತ್ತಿದ್ದ ಈ ಜೋಡಿಯ ಬದುಕಿನಲ್ಲಿ ಇದ್ದಕ್ಕಿದ್ದಂತೆ 'ಸಣ್ಣ ಅಲೆಯೊಂದು ಮೂಡಿ...' ಪ್ರೇಮದ ಚಂದ್ರ ಚೂರಾಗಿತ್ತು. [ವಿರಾಟ್ ಕೊಹ್ಲಿ-ಅನುಷ್ಕಾ ಬ್ರೇಕ್ ಅಪ್ ರಹಸ್ಯ ಬಹಿರಂಗ]

ಈಗ ಅದೆಲ್ಲಾ ಫ್ಲ್ಯಾಶ್ ಬ್ಯಾಕ್ ಬಿಡಿ. ಹಳೆದ್ದನ್ನೆಲ್ಲಾ ಮರೆತು 'ನಿನ್ನ ಬಿಟ್ಟು ನನ್ನ...ನನ್ನ ಬಿಟ್ಟು ನಿನ್ನ...ಜೀವನ ಸಾಗದು..' ಅಂತ ವಿರಾಟ್ - ಅನುಷ್ಕಾ ಹಾಡಿದ್ರೆ ಹೇಗೆ?

in-pics-anushka-sharma-virat-kohli-spotted-together-in-bandra

ಕಹಿ ಘಟನೆಗಳನ್ನೆಲ್ಲಾ ಮರೆತು ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ ಒಂದಾಗ್ತಾರೋ, ಇಲ್ವೋ ಗೊತ್ತಿಲ್ಲ. ಆದ್ರೆ, ಇಬ್ಬರೂ ಇತ್ತೀಚೆಗಷ್ಟೆ ಹೋಟೆಲ್ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. [ಅನುಷ್ಕಾ ಮೇಲೆ ಗೂಬೆ ಕೂರಿಸ್ಬೇಡಿ ಪ್ಲೀಸ್: ವಿರಾಟ್ ತರಾಟೆ]

'ಟಿ-20 ವಿಶ್ವ ಕಪ್' ಮುಗಿದ ಬಳಿಕ ಕೊಂಚ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ವಿರಾಟ್ ಕೊಹ್ಲಿ, ಮುಂಬೈನ ಬಾಂದ್ರಾದಲ್ಲಿರುವ ಐಶಾರಾಮಿ ಹೋಟೆಲ್ ವೊಂದರಲ್ಲಿ ಅನುಷ್ಕಾ ಶರ್ಮಾ ಜೊತೆ ಡಿನ್ನರ್ ಮಾಡಿದ್ದಾರೆ.

ಊಟದ ಬಳಿಕ ಹೋಟೆಲ್ ನಿಂದ ಜೋಡಿ ಹಕ್ಕಿ ಹೊರಬರುತ್ತಿರುವ ಎಕ್ಸ್ ಕ್ಲೂಸಿವ್ ಫೋಟೋಗಳು 'ಫಿಲ್ಮಿಬೀಟ್'ಗೆ ಲಭ್ಯವಾಗಿದೆ. ಈ ಫೋಟೋ ಗ್ಯಾಲರಿಯಲ್ಲಿ ನೋಡಿ....

-
-
-
-
-
-
-
-
-
-
English summary
Looks like, Cricketer Virat Kohli and Actress Anushka Sharma have patched up. We have exclusive pictures of Anushka Sharma and Virat Kohli coming out from Hakkasan Restaurant in Bandra! Check them out here!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada