ಬಿಪಾಶಾ ಬಸು - ಕರಣ್ ಮದುವೆ ಆಮಂತ್ರಣ ಪತ್ರಿಕೆ ಹಿಂಗಿದೆ.!
ಬಾಲಿವುಡ್ ನಟ ಕಮ್ ಮಾಡೆಲ್ ಕರಣ್ ಸಿಂಗ್ ಗ್ರೋವರ್ ಜೊತೆ ಹೊಸ ಜೀವನದ ಹೊಸ್ತಿಲಿಗೆ ನಟಿ ಬಿಪಾಶಾ ಬಸು ಅಡಿಯಿಡುತ್ತಿದ್ದಾರೆ.
ಏಪ್ರಿಲ್ 30 ರಂದು ಮುಂಬೈನಲ್ಲಿ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ.
ಅಂದ್ಹಾಗೆ, ಬಿಪಾಶಾ ಬಸು - ಕರಣ್ ಮದುವೆಯ ಮಮತೆಯ ಕರೆಯೋಲೆ ಹೇಗಿದೆ ಗೊತ್ತಾ?

ಇತ್ತೀಚೆಗಷ್ಟೆ ಭಾವಿ ಪತಿ ಕರಣ್ ಸಿಂಗ್ ಗ್ರೋವರ್ ಜೊತೆ ನಟಿ ಬಿಪಾಶಾ ಬಸು ಒಂದು ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದರು. ಆ ಫೋಟೋಗಳೇ ನವ ಜೋಡಿಯ ಮದುವೆ ಆಮಂತ್ರಣ ಪತ್ರಿಕೆಯ ಹೈಲೈಟ್. [ಕಪ್ಪು-ಬಿಳುಪಿನ ಫೋಟೋಶೂಟ್ ನಲ್ಲಿ ನವ ಜೋಡಿ ಬಿಪಾಶಾ-ಕರಣ್]
ವಧು-ವರರ ರೋಮ್ಯಾಂಟಿಕ್ ಫೋಟೋ ಇರುವ ವೆಡ್ಡಿಂಗ್ ಕಾರ್ಡ್ ಸಿಂಪಲ್ ಆಗಿ, ಅಷ್ಟೆ ಬ್ಯೂಟಿಫುಲ್ ಆಗಿದೆ ಅನ್ನೋದ್ರಲ್ಲಿ ದೂಸ್ರಾ ಮಾತೇ ಇಲ್ಲ ಬಿಡಿ.
ಏಪ್ರಿಲ್ 30, Lower Parel, ಮುಂಬೈನ Pallazio Banquet ಹಾಲ್ ನಲ್ಲಿ ಸಂಜೆ 6.30ಕ್ಕೆ ವಿವಾಹ ಮಹೋತ್ಸವ ನಡೆದರೆ, ರಾತ್ರಿ 10 ಗಂಟೆಯಿಂದ ಇಂಪೀರಿಯಲ್ ಹಾಲ್ ನಲ್ಲಿ ಪಾರ್ಟಿ ಏರ್ಪಡಿಸಲಾಗಿದೆ. ವಧು-ವರರ ಆಪ್ತರಿಗಷ್ಟೇ ಮದುವೆಗೆ ಆಹ್ವಾನ ಇದೆ. ['ಮದುವೆಯ ಕರೆಯೋಲೆ' ಹಂಚಲು ಶುರುಮಾಡಿದ ಬಿಪಾಶಾ-ಕರಣ್]
ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್ ರವರ ಮದುವೆ ಆಮಂತ್ರಣ ಪತ್ರಿಕೆ ಹಾಗೂ ನವ ಜೋಡಿಯ ಹೊಸ ಫೋಟೋಶೂಟ್ ಗ್ಯಾಲರಿ ಇಲ್ಲಿದೆ....ಒಂದೊಂದೇ ಸ್ಲೈಡ್ ಕ್ಲಿಕ್ಕಿಸಿ....


Click it and Unblock the Notifications











