ಚಿತ್ರಗಳು: 'ತಾರೆ'ಗಳ ತೋಟದಲ್ಲಿ ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ಪಾರ್ಟಿ
ಅಂತೂ ಇಂತೂ ನಟಿ ಪ್ರಿಯಾಂಕಾ ಛೋಪ್ರಾ ನಿಶ್ಚಿತಾರ್ಥ ಮಾಡಿಕೊಂಡರು. ಇಷ್ಟು ದಿನ ತಮ್ಮ ಪ್ರೀತಿ-ಪ್ರೇಮದ ಬಗ್ಗೆ ತುಟಿ ಎರಡು ಮಾಡದ ನಟಿ ಪ್ರಿಯಾಂಕಾ ನಿನ್ನೆ (ಆಗಸ್ಟ್ 18) ಅಧಿಕೃತವಾಗಿ ನಿಕ್ ಜೊನಾಸ್ ಜೊತೆಗೆ ಎಂಗೇಜ್ ಆದರು.
ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಪ್ರೀತಿಗೆ ಇದೀಗ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಮೊದಲು ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಬಳಿಕ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ್ದರು.
ಭಾರತೀಯ ಸಂಸ್ಕೃತಿ, ಸಂಪ್ರದಾಯದಂತೆ ನಿಶ್ಚಿತಾರ್ಥ ಶಾಸ್ತ್ರ ನಡೆದ ಬಳಿಕ ಎಂಗೇಜ್ ಮೆಂಟ್ ಪಾರ್ಟಿಯಲ್ಲಿ ಬಾಲಿವುಡ್ ದಿಗ್ಗಜರು ಪಾಲ್ಗೊಂಡಿದ್ದರು. ನಟಿ ಆಲಿಯಾ ಭಟ್, ಪರಿಣಿತಿ ಛೋಪ್ರಾ, ಸಲ್ಮಾನ್ ಸಹೋದರಿ ಅರ್ಪಿತಾ, ಅಂಬಾನಿ ಕುಟುಂಬ ಸೇರಿದಂತೆ ಹಲವರು ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ಪಾರ್ಟಿಗೆ ಸಾಕ್ಷಿ ಆದರು. ಬೇಕಾದ್ರೆ, ನೀವೇ ಫೋಟೋಗಳನ್ನ ಒಮ್ಮೆ ನೋಡಿರಿ...

ತಾಯಿ ಮಧು ಛೋಪ್ರಾ
ಪುತ್ರಿ ಪ್ರಿಯಾಂಕಾ ನಿಶ್ಚಿತಾರ್ಥ ಮಾಡಿಕೊಂಡಿರುವುದು ತಾಯಿ ಮಧು ಛೋಪ್ರಾಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಹೀಗಾಗಿ, ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಸಂತಸದಿಂದಲೇ ಮಧು ಛೋಪ್ರಾ ಪಾಲ್ಗೊಂಡರು.

ನಟಿ ಆಲಿಯಾ ಭಟ್
ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದು ಹೀಗೆ...

ಆಯುಷ್ ಶರ್ಮಾ
'ಲವ್ ರಾತ್ರಿ' ಸಿನಿಮಾ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡುತ್ತಿರುವ ನಟ ಆಯುಷ್ ಶರ್ಮಾ ಕೂಡ ಪ್ರಿಯಾಂಕಾ-ನಿಶ್ಚಿತಾರ್ಥ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಭಾಗವಹಿಸಿದರು.

ಅನುಷಾ ದಾಂಡೇಕರ್
ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ಅನುಷಾ ದಾಂಡೇಕರ್ ಹೊಸ ಜೋಡಿ ಪ್ರಿಯಾಂಕಾ-ನಿಕ್ ಜೊನಾಸ್ ಗೆ ಶುಭ ಕೋರಿದರು.

ಅರ್ಪಿತಾ ಖಾನ್
'ಭಾರತ್' ಚಿತ್ರದಿಂದ ಪ್ರಿಯಾಂಕಾ ಛೋಪ್ರಾ ಹೊರಬಂದ್ಮೇಲೆ, ಪ್ರಿಯಾಂಕಾ-ಸಲ್ಮಾನ್ ನಡುವಿನ ಸ್ನೇಹ ಹಳಸಿದೆ ಎಂದು ಗುಲ್ಲಬ್ಬಿತ್ತು. ಆದ್ರೆ, ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಸಲ್ಮಾನ್ ಸಹೋದರಿ ಅರ್ಪಿತಾ ಪಾಲ್ಗೊಂಡು ಎಲ್ಲರ ಕಣ್ಣರಳಿಸಿದರು.

ವಿಶಾಲ್ ಭಾರದ್ವಾಜ್
ಹಲವು ಸಿನಿಮಾಗಳಲ್ಲಿ ಪ್ರಿಯಾಂಕಾ ಛೋಪ್ರಾಗೆ ಆಕ್ಷನ್ ಕಟ್ ಹೇಳಿದ್ದ ವಿಶಾಲ್ ಭಾರದ್ವಾಜ್ ಕೂಡ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಹಾಜರ್ ಆದರು.

ಪರಿಣಿತಿ ಛೋಪ್ರಾ
ಸಹೋದರಿ ಪ್ರಿಯಾಂಕಾ ಛೋಪ್ರಾ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಪರಿಣಿತಿ ಛೋಪ್ರಾ ಮಿಂಚಿದ್ದು ಹೀಗೆ...

ಅಂಬಾನಿ ಕುಟುಂಬ
ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ಪಾರ್ಟಿಗೆ ಅಂಬಾನಿ ಮತ್ತು ಕುಟುಂಬ ಗ್ರ್ಯಾಂಡ್ ಆಗಿ ಎಂಟ್ರಿಕೊಟ್ಟರು.


Click it and Unblock the Notifications











