For Quick Alerts
  ALLOW NOTIFICATIONS  
  For Daily Alerts

  ಹಿಂದೆಂದೂ ಕಂಡಿರದ ರಾಯಲ್ ಲುಕ್‌ನಲ್ಲಿ ದೀಪಿಕಾ ಹೇಗಿದ್ದಾರೆ ನೋಡಿ..

  By Suneel
  |

  ಬೆಂಗಳೂರು ಮೂಲದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಾಡೆಲ್ ಕಮ್ ನಟಿ ಅನ್ನೋದು ನಿಮಗೆಲ್ಲಾ ತಿಳಿದಿರುವ ವಿಷಯ. ಇಂದಿಗೂ ಸಹ ಅವರು ಮಾಡೆಲ್ ಆಗಿ ಕಾಣಿಸಿಕೊಳ್ಳಲು ಸಿಗುವ ಯಾವುದೇ ಅವಕಾಶಗಳನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಅಂತೆಯೇ ಈಗ ಲೇಟೆಸ್ಟ್ ಆಗಿ ಡಿಪ್ಪಿ ಒಂದು ಜ್ಯುವೆಲರಿ ಬ್ರ್ಯಾಂಡ್‌ಗಾಗಿ ಫೋಟೋಶೂಟ್ ಮಾಡಿಸಿ ಈಗ ಸುದ್ದಿಯಾಗಿದ್ದಾರೆ.

  ಹೌದು, ದೀಪಿಕಾ ಪಡುಕೋಣೆ ಮಾರ್ಡನ್ ಜ್ಯುವೆಲರಿ ಬ್ರ್ಯಾಂಡ್ ಒಂದಕ್ಕಾಗಿ ವಿವಿಧ ರೀತಿಯಲ್ಲಿ ಈ ಹಿಂದೆ ಎಂದೂ ಕಂಡಿರದ ರೀತಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ರೀಗಲ್ ಡ್ರೆಸ್ ಮತ್ತು ಗೌನ್ ಜೊತೆಗೆ ಆಧುನಿಕ ಶೈಲಿಯ ಆಭರಣಗಳನ್ನು ಧರಿಸಿ ಎಲ್ಲರ ಗಮನಸೆಳೆದಿದ್ದಾರೆ. ಅಲ್ಲದೇ ಬಗೆಬಗೆಯ ಸಾಂಪ್ರದಾಯಿಕ ಮತ್ತು ಮಾರ್ಡನ್ ಆಭರಣಗಳನ್ನು ತೊಟ್ಟಿ ಮಿಂಚಿದ್ದಾರೆ.

  ದೀಪಿಕಾ ಪಡುಕೋಣೆ ತಾನಿಷ್ಕ್(Tanishq) ಆಭರಣಕ್ಕಾಗಿ ಪಾಲ್ಗೊಂಡಿರುವ ಫೋಟೋಶೂಟ್ ನಲ್ಲಿ ಡೈಮೆಂಡ್ ನೆಕ್ಲೆಸ್ ತೊಟ್ಟಿರುವ ಈ ಮೇಲಿನ ಫೋಟೋದಲ್ಲಿ 'ಬ್ಯೂಟಿ ಅಂಡ್ ದಿ ಬೀಸ್ಟ್' ನ ಬೆಲ್ಲೆ ರೀತಿಯಲ್ಲಿ ಕಂಗೊಳಿಸಿದ್ದಾರೆ. ಇವರ ಈ ಫೋಟೋಗಳು ಸಾಮಾಜಿಕ ಜಾಲತಾಣ ಇನ್‌ಸ್ಟಗ್ರಾಂ ನಲ್ಲಿ ಕಾಣಿಸಿಕೊಂಡಿದ್ದು, ಈಗ ನೋಡುಗರ ಕಣ್ಣು ಕೋರೈಸಿವೆ.

  ದೀಪಿಕಾ ಪಡುಕೋಣೆ ಕೊನೆಯದಾಗಿ ಹಾಲಿವುಡ್ ಚಿತ್ರ 'XXX: ರಿಟರ್ನ್ ಆಫ್ ಕ್ಸಾಂಡರ್ ಕೇಜ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಾಲಿವುಡ್ ಚಿತ್ರ 'ಪದ್ಮಾವತಿ' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

  English summary
  In Pics :Deepika Padukone is at her most beautiful ever in new photoshoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X