ಚಿತ್ರಪಟ: ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಕೊಂಕಣಿ ವಿವಾಹ

ದೂರದ ಇಟಲಿಯ ಲೇಕ್ ಕೋಮೋದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ವಿವಾಹ ಮಹೋತ್ಸವ ಜರುಗಿತು. ನವೆಂಬರ್ 14 ರಂದು ಕೊಂಕಣಿ ಸಂಪ್ರದಾಯದಂತೆ ದೀಪಿಕಾ-ರಣ್ವೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ, ನವೆಂಬರ್ 15 ರಂದು ಸಿಖ್ ಸಂಪ್ರದಾಯದಂತೆ ಮದುವೆ ಮಾಡಿಕೊಂಡರು.

ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಮದುವೆಗೆ ಪತ್ರಿಕಾ-ಮಾಧ್ಯಮಗಳಿಗೆ ಆಹ್ವಾನ ಇರಲಿಲ್ಲ. ವಿವಾಹಕ್ಕೆ ಬಂದಿದ್ದ ಅತಿಥಿಗಳಿಗೂ ಫೋಟೋ ತೆಗೆಯದಂತೆ ವಧು-ವರ ಮನವಿ ಮಾಡಿದ್ದರಿಂದ ಮದುವೆಯ ಫೋಟೋಗಳು ಲೀಕ್ ಆಗಲಿಲ್ಲ.

ಇದೀಗ ಸ್ವತಃ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ಮೂಲಕ ಅಭಿಮಾನಿಗಳೊಂದಿಗೆ ತಮ್ಮ ಮದುವೆಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕೊಂಕಣಿ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ದೀಪಿಕಾ-ರಣ್ವೀರ್ ಹೇಗೆ ಕಂಗೊಳಿಸಿದರು ಅಂತ ನೀವೇ ನೋಡಿರಿ ಫೋಟೋ ಸ್ಲೈಡ್ ಗಳಲ್ಲಿ...

ಕಣ್ಮನ ಸೆಳೆದ ವಧು ದೀಪಿಕಾ ಪಡುಕೋಣೆ

ಕಣ್ಮನ ಸೆಳೆದ ವಧು ದೀಪಿಕಾ ಪಡುಕೋಣೆ

ಕೊಂಕಣಿ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ನಟಿ ದೀಪಿಕಾ ಪಡುಕೋಣೆ ಅಪ್ಪಟ ದಕ್ಷಿಣ ಭಾರತದ ಹುಡುಗಿಯಂತೆ ಕಣ್ಮನ ಸೆಳೆದರು.

ಕೆಂಪು ಸೀರೆಯಲ್ಲಿ ಮಿಂಚಿದ ದೀಪಿಕಾ

ಕೆಂಪು ಸೀರೆಯಲ್ಲಿ ಮಿಂಚಿದ ದೀಪಿಕಾ

ಕೊಂಕಣಿ-ಬ್ರಾಹ್ಮಣ ಸಂಪ್ರದಾಯದಂತೆ ನಡೆದ ವಿವಾಹದಲ್ಲಿ ವಧು ದೀಪಿಕಾ ಪಡುಕೋಣೆ ಕೆಂಪು-ಗೋಲ್ಡನ್ ಬಣ್ಣ ಮಿಶ್ರಿತ ಸೀರೆಯಲ್ಲಿ ಮಿಂಚಿದರು. ಇನ್ನೂ ಬಿಳಿ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ರಣ್ವೀರ್ ಕಂಗೊಳಿಸಿದರು.

ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ

ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ

ನವೆಂಬರ್ 14 ರಂದು ಬೆಳಗ್ಗೆ ಏಳು ಗಂಟೆಗೆ ಇದ್ದ ಶುಭ ಮುಹೂರ್ತದಲ್ಲಿ ದೀಪಿಕಾ ಪಡುಕೋಣೆ ಕೊರಳಿಗೆ ರಣ್ವೀರ್ ಸಿಂಗ್ ಮಾಂಗಲ್ಯಧಾರಣೆ ಮಾಡಿದರು.

ನಾಲ್ಕು ಗಂಟೆಗಳ ಕಾಲ ನಡೆದ ಶಾಸ್ತ್ರ

ನಾಲ್ಕು ಗಂಟೆಗಳ ಕಾಲ ನಡೆದ ಶಾಸ್ತ್ರ

ಕೊಂಕಣಿ ಸಂಪ್ರದಾಯದಂತೆ ನಾಲ್ಕು ಗಂಟೆಗಳ ಕಾಲ ಮದುವೆ ಶಾಸ್ತ್ರ ನಡೆಯಿತು. ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ವಧು ದೀಪಿಕಾ-ವರ ರಣ್ವೀರ್ ಖುಷಿ ಖುಷಿಯಿಂದಲೇ ಕಳೆದರು.

ಬಾಳೆ ಎಲೆ ಊಟ

ಬಾಳೆ ಎಲೆ ಊಟ

ಮದುವೆ ಬಳಿಕ ಬಾಳೆ ಎಲೆ ಊಟ ಬಡಿಸಲಾಯಿತು. ಪತಿಗೆ ದೀಪಿಕಾ ಸಿಹಿ ತಿನಿಸುತ್ತಿರುವ ಫೋಟೋ ಇದು.

ನಲವತ್ತು ಜನರಿಗೆ ಮಾತ್ರ ಆಹ್ವಾನ

ನಲವತ್ತು ಜನರಿಗೆ ಮಾತ್ರ ಆಹ್ವಾನ

ಇಟಲಿಯ ಲೇಕ್ ಕೋಮೋದಲ್ಲಿ ನಡೆದ ದೀಪಿಕಾ-ರಣ್ವೀರ್ ವಿವಾಹಕ್ಕೆ ಕೇವಲ ನಲವತ್ತು ಜನರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು.

More from Filmibeat

English summary
Have a look at the pictures of Deepika Padukone-Ranveer Singh Konkani marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X