ಮೆಹಂದಿ ಶಾಸ್ತ್ರದಲ್ಲಿ ಕುಣಿದು ಕುಪ್ಪಳಿಸಿದ ದೀಪಿಕಾ-ರಣ್ವೀರ್
ನವೆಂಬರ್ 14 ಮತ್ತು 15, 2018... ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬದುಕಿನ ಅತ್ಯಮೂಲ್ಯ ದಿನ. ಯಾಕಂದ್ರೆ, ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅಂದೇ.!
ಕೊಂಕಣಿ ಮತ್ತು ಸಿಖ್ ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆಯುವ ಮುನ್ನ ವಧು ದೀಪಿಕಾ ಪಡುಕೋಣೆ ಕೈಗೆ ಮೆಹಂದಿ ಹಾಕುವ ಶಾಸ್ತ್ರ ಜರುಗಿತು. ಪಕ್ಕಾ ಪಂಜಾಬಿ ಸಂಪ್ರದಾಯದಂತೆ ಮದರಂಗಿ ಶಾಸ್ತ್ರ ಇಟಲಿಯಲ್ಲಿ ನಡೆಯಿತು.
ಮದರಂಗಿ ಶಾಸ್ತ್ರದ ಫೋಟೋಗಳನ್ನು ಸ್ವತಃ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ದೀಪಿಕಾ ಕೈಯಲ್ಲಿ ಮದರಂಗಿ ರಂಗು
ಪಂಜಾಬಿ ಸಂಪ್ರದಾಯದಂತೆ ಕೈ ಮೇಲೆ ಮದರಂಗಿಯ ಚಿತ್ತಾರದ ಜೊತೆಗೆ ವರ ರಣ್ವೀರ್ ಸಿಂಗ್ ಹೆಸರನ್ನೂ ಬರೆಯಿಸಿಕೊಂಡು ದೀಪಿಕಾ ಫುಲ್ ಖುಷಿಯಾಗಿದ್ದರೆ, ಅತ್ತ ರಣ್ವೀರ್ ಸಿಂಗ್ ಕೂಡ ತಮ್ಮ ಕೈಮೇಲೆ 'ದೀಪ'ದ ಚಿತ್ತಾರ ಬಿಡಿಸಿಕೊಂಡು ದೀಪಿಕಾಗೆ ಸರ್ಪ್ರೈಸ್ ಕೊಟ್ಟರು.

ಮದುಮಗಳ ಕಳೆ
ದೀಪಿಕಾ ಪಡುಕೋಣೆ ಕೈ ಮೇಲೆ ಮದರಂಗಿಯ ರಂಗಿದ್ದರೆ, ಮೊಗದಲ್ಲಿ ಮದುಮಗಳ ಕಳೆ ತುಂಬಿ ತುಳುಕುತ್ತಿತ್ತು. ಅದಕ್ಕೆ ಈ ಫೋಟೋನೇ ಸಾಕ್ಷಿ.

ಕುಣಿದು ಕುಪ್ಪಳಿಸಿದ ರಣ್ವೀರ್ ಸಿಂಗ್
ಮೆಹಂದಿ ಹಾಗೂ ಸಂಗೀತ ಸಮಾರಂಭದಲ್ಲಿ ವರ ರಣ್ವೀರ್ ಸಿಂಗ್ ಪಂಜಾಬಿ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು.

ಹೆಜ್ಜೆ ಹಾಕಿದ ವಧು ದೀಪಿಕಾ
ಇನ್ನೂ ವಧು ದೀಪಿಕಾ ಕೂಡ ಮೆಹಂದಿ ಹಾಕಿಸಿಕೊಂಡ ಬಳಿಕ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಭಾವುಕರಾದ ದೀಪಿಕಾ
ಮೆಹಂದಿ ಸಮಾರಂಭದಲ್ಲಿ ಗಾಯಕಿ ಶುಭ ಮುದ್ಗಲ್ ಹಾಡು ಹಾಡುತ್ತಿರುವಾಗ, ವಧು ದೀಪಿಕಾ ಪಡುಕೋಣೆ ಭಾವುಕರಾದರು. ದೀಪಿಕಾ ಕಣ್ಣೀರಿಟ್ಟಿದ್ದನ್ನ ನೋಡಿ ರಣ್ವೀರ್ ಸಿಂಗ್ ಬಿಗಿದಪ್ಪಿ ಸಮಾಧಾನ ಪಡಿಸಿದರು. ಬಳಿಕ ದೀಪಿಕಾ ಮೊಗದಲ್ಲಿ ಮಂದಹಾಸ ಮೂಡಿತು.

ಸಭ್ಯಸಾಚಿ ಉಡುಗೆ
ಮೆಹಂದಿ-ಸಂಗೀತ ಸಮಾರಂಭಕ್ಕೆ ವಧು ದೀಪಿಕಾ ಪಡುಕೋಣೆ ಮತ್ತು ವರ ರಣ್ವೀರ್ ಸಿಂಗ್ ಪಿಂಕ್ ಮತ್ತು ಕೆಂಪು ಬಣ್ಣದ ಸಭ್ಯಸಾಚಿ ಉಡುಗೆಗಳನ್ನು ತೊಟ್ಟಿದ್ದರು.


Click it and Unblock the Notifications











