ದೀಪಿಕಾ-ರಣ್ವೀರ್ ಸಿಂಧಿ ಮದುವೆಯ ಫೋಟೋ ಆಲ್ಬಂ ಇಲ್ಲಿದೆ ನೋಡಿ
ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ - ಬಾಲಿವುಡ್ ನಟ ರಣ್ವೀರ್ ಸಿಂಗ್ ವೈವಾಹಿಕ ಬದುಕಿಗೆ ಅಡಿಯಿಟ್ಟಿದ್ದಾರೆ. ನವೆಂಬರ್ 14-15 ರಂದು ಇಟಲಿಯ ಲೇಕ್ ಕೋಮೋದಲ್ಲಿ ದೀಪಿಕಾ-ರಣ್ವೀರ್ ವಿವಾಹ ಮಹೋತ್ಸವ ನಡೆಯಿತು. ಕೊಂಕಣಿ ಮತ್ತು ಸಿಂಧಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ದೀಪಿಕಾ-ರಣ್ವೀರ್ ಕಾಲಿಟ್ಟಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಮದುವೆಗೆ ಪತ್ರಿಕಾ-ಮಾಧ್ಯಮಗಳಿಗೆ ಆಹ್ವಾನ ಇರಲಿಲ್ಲ. ವಿವಾಹಕ್ಕೆ ಬಂದ ಅತಿಥಿಗಳಿಗೂ ಫೋಟೋ ತೆಗೆಯದಂತೆ ವಧು-ವರ ಮನವಿ ಮಾಡಿದ್ದರಿಂದ ಮದುವೆಯ ಫೋಟೋಗಳು ಲೀಕ್ ಆಗಲಿಲ್ಲ.
ಇದೀಗ ಸ್ವತಃ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ಮೂಲಕ ಅಭಿಮಾನಿಗಳೊಂದಿಗೆ ತಮ್ಮ ಮದುವೆಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಸಿಖ್ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ದೀಪಿಕಾ-ರಣ್ವೀರ್ ಹೇಗೆ ಕಂಗೊಳಿಸಿದ್ರು ಅಂತ ನೀವೇ ನೋಡಿ ಫೋಟೋ ಸ್ಲೈಡ್ ಗಳಲ್ಲಿ...

ಮೇಡ್ ಫಾರ್ ಈಚ್ ಅದರ್
ಆನಂದ್ ಕಾರಜ್ ಶಾಸ್ತ್ರಕ್ಕಾಗಿ ವಧು ದೀಪಿಕಾ ಪಡುಕೋಣೆ ಮತ್ತು ವರ ರಣ್ವೀರ್ ಸಿಂಗ್ ಕೆಂಪು ಬಣ್ಣದ ಉಡುಗೆಯಲ್ಲಿ ಮಿಂಚಿದರು. ತೆರೆಮೇಲೆ ಬೆಸ್ಟ್ ಕಪಲ್ ಆಗಿ ಕಾಣುವ ಈ ಜೋಡಿ ನಿಜ ಜೀವನದಲ್ಲೂ ಮೇಡ್ ಫಾರ್ ಈಚ್ ಅದರ್.

ಕಂಗೊಳಿಸಿದ ವಧು
ಸಿಂಧಿ ಸಂಪ್ರದಾಯದಂತೆ ನಡೆದ ಆನಂದ್ ಕಾರಜ್ ಶಾಸ್ತ್ರಕ್ಕಾಗಿ ವಧು ದೀಪಿಕಾ ಪಡುಕೋಣೆ ಕೆಂಪು ಬಣ್ಣದ ಲೆಹಂಗಾ ಧರಿಸಿದ್ದರು. ಖ್ಯಾತ ಡಿಸೈನರ್ ಸಭ್ಯಸಾಚಿ ಮುಖರ್ಜಿ ಡಿಸೈನ್ ಮಾಡಿರುವ ಈ ಲೆಹಂಗಾದ ಬೆಲೆ 8.95 ಲಕ್ಷ ರೂಪಾಯಿ.!

ಸದಾ ಸೌಭಾಗ್ಯವತಿ ಭವ
ಕೆಂಪು ಬಣ್ಣದ ಲೆಹಂಗಾ ಮೇಲೆ ಗೋಲ್ಡನ್ ಎಂಬ್ರಾಯಿಡರಿ ಮಾಡಲಾಗಿದ್ದು, ದುಪ್ಪಟದ ತುದಿಯಲ್ಲಿ ಸಂಸ್ಕೃತ ಶ್ಲೋಕ 'ಸದಾ ಸೌಭಾಗ್ಯವತಿ ಭವ' ಎಂದು ಚಿನ್ನದ ಎಳೆಗಳಿಂದ ಬರೆಯಲಾಗಿದೆ.

ಮಿರಿ ಮಿರಿ ಮಿಂಚಿದ ವರ
ವರ ರಣ್ವೀರ್ ಸಿಂಗ್ ಕೂಡ ಸಿಖ್ ಸಾಂಪ್ರದಾಯಿಕ ಉಡುಗೆ ತೊಟ್ಟು ವಿವಾಹ ಶಾಸ್ತ್ರದಲ್ಲಿ ಮಿರಿ ಮಿರಿ ಮಿಂಚಿದರು.

ನಲವತ್ತು ಜನರಿಗೆ ಮಾತ್ರ ಆಹ್ವಾನ
ಇಟಲಿಯ ಲೇಕ್ ಕೋಮೋದಲ್ಲಿ ನಡೆದ ದೀಪಿಕಾ-ರಣ್ವೀರ್ ವಿವಾಹಕ್ಕೆ ಕೇವಲ ನಲವತ್ತು ಜನರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು.


Click it and Unblock the Notifications











