ರಾಯಲ್ ಲುಕ್ ನಲ್ಲಿ ಮಿರ ಮಿರ ಮಿಂಚಿದ ದೀಪಿಕಾ ಪಡುಕೋಣೆ

By Harshitha

Recommended Video

ದೀಪಿಕಾ ಪಡುಕೋಣೆ ರಾಯಲ್ ಲುಕ್ ನಲ್ಲಿ ಫುಲ್ ಮಿಂಚಿಂಗ್ | FIlmibeat Kannada

ಜೀನ್ಸ್ ಪ್ಯಾಂಟ್ ಟಿ-ಶರ್ಟ್, ಸ್ಕರ್ಟ್, ಗೌನ್ ಹೀಗೆ ಯಾವುದೇ ಮಾರ್ಡನ್ ಉಡುಗೆ ತೊಟ್ಟರೂ ದೀಪಿಕಾ ಪಡುಕೋಣೆ ಅಂದ-ಚೆಂದಕ್ಕೆ ಸರಿಸಾಟಿ ಯಾರೂ ಇಲ್ಲ. ಇನ್ನೂ ಸೀರೆ, ಗಾಘ್ರಾ ದಂತಹ ಅಪ್ಪಟ ದೇಸಿ ಉಡುಗೆ ತೊಟ್ಟರೂ, ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಅಕ್ಷರಶಃ ಚೆಂದುಳ್ಳಿ ಚೆಲುವೆ. ಅದಕ್ಕೆ ಸಾಕ್ಷಿ 'ಪದ್ಮಾವತ್' ಸಿನಿಮಾ.

'ಪದ್ಮಾವತ್' ಸಿನಿಮಾದಲ್ಲಿ ಸುರಸುಂದರಿ ರಾಣಿ ಪದ್ಮಾವತಿ ಆಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದರು. ತೆರೆಮೇಲೆ ರಾಣಿ ಪದ್ಮಾವತಿ ಆಗಿ ಮನಮೋಹಕವಾಗಿ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ ಇದೀಗ ರಾಯಲ್ ಲುಕ್ ನಲ್ಲಿ ಎಲ್ಲರ ಕಣ್ಣು ಕುಕ್ಕಿದ್ದಾರೆ.

'ಪದ್ಮಾವತ್' ಸಿನಿಮಾ ಬಿಡುಗಡೆ ಆದ್ಮೇಲೆ ಫೋಟೋಶೂಟ್ ಒಂದರಲ್ಲಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ರಾಯಲ್ ಲುಕ್ ನಲ್ಲಿ ದೀಪಿಕಾ ಇರುವ ಫೋಟೋಗಳನ್ನ ನೋಡಿದ್ರೆ, ನೀವು ವಾವ್ ಎನ್ನುವುದು ಖಂಡಿತ. ಬೇಕಾದ್ರೆ ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

ರಾಯಲ್ ಲುಕ್ ನಲ್ಲಿ ದೀಪಿಕಾ

ರಾಯಲ್ ಲುಕ್ ನಲ್ಲಿ ದೀಪಿಕಾ

ಬಿಳಿ ಬಣ್ಣದ ಪಾರದರ್ಶಕ ಸೀರೆ, ಅದಕ್ಕೆ ಹಸಿರು ನೆಕ್ಲೇಸ್ ಧರಿಸಿರುವ ದೀಪಿಕಾ ಪಡುಕೋಣೆ ರಾಣಿ ಅಂತೆ ಕಾಣಲ್ವಾ.?

ಕೆಂಪು ಸೀರೆಯಲ್ಲಿ...

ಕೆಂಪು ಸೀರೆಯಲ್ಲಿ...

ಕೆಂಪು ಸೀರೆ, ಕಿವಿಗೆ ಜುಮ್ಕಿ, ಹಣೆಗೆ ಬೊಟ್ಟು ಇಟ್ಟಿರುವ ದೀಪಿಕಾ ಫೋಟೋಶೂಟ್ ನಲ್ಲಿ ಮಿರಿ ಮಿರಿ ಮಿಂಚಿದ್ದಾರೆ.

ಚೆಂದುಳ್ಳಿ ಚೆಲುವೆ ದೀಪಿಕಾ

ಚೆಂದುಳ್ಳಿ ಚೆಲುವೆ ದೀಪಿಕಾ

ರತ್ನ ಖಚಿತ ಕಂಠಿಹಾರ ಹಾಗೂ ಬಯ್ತಲೆ ಬೊಟ್ಟು ತೊಟ್ಟಿರುವ ದೀಪಿಕಾ ರ ಈ ಲುಕ್ ಯಾರಿಗ್ತಾನೆ ಇಷ್ಟ ಆಗಲ್ಲ ಹೇಳಿ.?

ಡಿಸೈನರ್ ಯಾರು.?

ಡಿಸೈನರ್ ಯಾರು.?

ಅಷ್ಟಕ್ಕೂ, ದೀಪಿಕಾ ಪಡುಕೋಣೆ ಹೀಗೆ ಕಾಣಿಸಿಕೊಂಡಿರುವುದು ಏಷಿಯನ್ ಪೇಂಟ್ಸ್ ರವರ ನಿಲಯ ವಾಲ್ ಪೇಪರ್ ಗಾಗಿ. ದೀಪಿಕಾ ಇಷ್ಟು ಸುಂದರವಾಗಿ ಕಾಣುವಂತೆ ಸ್ಟೈಲ್ ಮಾಡಿರುವುದು ಡಿಸೈನರ್ ಸಬ್ಯಸಾಚಿ ಮುಖರ್ಜಿ.

More from Filmibeat

English summary
Bollywood Actress Deepika Padukone's royal look for new photo shoot will leave you spellbound. Take a look at the pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X