ಚಿತ್ರಗಳು: ಸೋನಿಯಾ ಕಪೂರ್ ಜೊತೆಗೆ ಹಿಮೇಶ್ ರೇಶಮ್ಮಿಯಾ ವಿವಾಹ

By Harshitha

ಮುಂಬೈನಲ್ಲಿ ಇರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿಯೇ ಗಾಯಕ, ಸಂಗೀತ ನಿರ್ದೇಶಕ ಹಿಮೇಶ್ ರೇಶಮ್ಮಿಯಾ ಹಾಗೂ ಸೋನಿಯಾ ಕಪೂರ್ ವಿವಾಹ ಗುಟ್ಟಾಗಿ ನಡೆದಿದೆ ಎಂದು ನಿನ್ನೆಯಷ್ಟೇ ವರದಿ ಆಗಿತ್ತು.

ಈಗ ನಟ, ಗಾಯಕ, ಮ್ಯೂಸಿಕ್ ಕಂಪೋಸರ್ ಹಿಮೇಶ್ ರೇಶಮ್ಮಿಯಾ ಮದುವೆ ಆಗಿರುವ ಫೋಟೋಗಳು ನಿಮ್ಮ 'ಫಿಲ್ಮಿಬೀಟ್'ಗೆ ಲಭ್ಯವಾಗಿದೆ. ಸಿಖ್ ಸಂಪ್ರದಾಯದಂತೆ ಹಿಮೇಶ್-ಸೋನಿಯಾ ವಿವಾಹ ಜರುಗಿದೆ.

ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಹಿಮೇಶ್-ಸೋನಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶೇರ್ವಾನಿ ತೊಟ್ಟು ಹಿಮೇಶ್ ರೇಶಮ್ಮಿಯಾ ಮಿಂಚಿದರೆ, ಪಿಂಕ್ ಕಲರ್ ಲೆಹಂಗಾ ತೊಟ್ಟು ಸೋನಿಯಾ ಕಪೂರ್ ಕಂಗೊಳಿಸಿದರು.

In pics: Himesh Reshammiya marries Sonia Kapoor

ಕೆಲಕಾಲದಿಂದ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದ ಈ ಜೋಡಿ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಈ ಜೋಡಿಯ ಪ್ರೀತಿಗೆ ಇದೀಗ ಅಧಿಕೃತ ಮುದ್ರೆ ಬಿದ್ದಿದೆ.

ಹಾಗ್ನೋಡಿದ್ರೆ, ಹಿಮೇಶ್ ಗಿದು ಎರಡನೇ ವಿವಾಹ. ತಮಗೆ 21 ವರ್ಷ ವಯಸ್ಸಾಗಿದ್ದಾಗ, ಕೋಮಲ್ ಎಂಬುವರನ್ನು ಮದುವೆ ಆಗಿದ್ದ ಹಿಮೇಶ್ ರೇಶಮ್ಮಿಯಾಗೆ ಸ್ವಯಂ ಎಂಬ ಪುತ್ರನಿದ್ದಾನೆ. 22 ವರ್ಷಗಳ ತಮ್ಮ ದಾಂಪತ್ಯ ಜೀವನವನ್ನ ಹಿಮೇಶ್ ರೇಶಮ್ಮಿಯಾ-ಕೋಮಲ್ ಕಳೆದ ವರ್ಷ ಅಂತ್ಯಗೊಳಿಸಿದ್ದರು.

ಸೋನಿಯಾ ಜೊತೆಗೆ ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿರುವ ಹಿಮ್ಮೇಶ್ ಇದೇ ಭಾನುವಾರ ಹನಿಮೂನ್ ಗೆ ತೆರಳಲಿದ್ದಾರೆ.

More from Filmibeat

English summary
Bollywood Music Composer Himesh Reshammiya married Sonia Kapoor in an intimate ceremony on May 11th. Take a look at the pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X