ಕರೀನಾ ಧರಿಸಿರುವ ಈ ಉಡುಪಿನ ತೂಕ ಬರೋಬ್ಬರಿ 30 ಕೆ.ಜಿ ಕಣ್ರೀ.!
Recommended Video

ಒಂದು ಉಡುಗೆ ತೊಡಬೇಕು ಅಂದ್ರೆ ಬಟ್ಟೆ ಚೆನ್ನಾಗಿರಬೇಕು, ಕಮ್ಫರ್ಟ್ ಆಗಿರಬೇಕು, ಬಾಳಿಕೆ ಬರಬೇಕು ಅಂತೆಲ್ಲಾ ನಾವು ಭಾವಿಸುತ್ತೇವೆ. ಆದ್ರೆ, ಫ್ಯಾಶನ್ ಲೋಕದಲ್ಲಿ ಹಾಗಿಲ್ಲ.! ಚೆನ್ನಾಗಿ ಕಾಣಬೇಕು, ಮಿರಿ ಮಿರಿ ಮಿಂಚಬೇಕು ಅಂದ್ರೆ ಭಿನ್ನ-ವಿಭಿನ್ನ ಉಡುಗೆಗಳನ್ನೆಲ್ಲಾ ತೊಡಲೇಬೇಕು.!
ಡಿಸೈನರ್ ಗಳಂತೂ ಪ್ರತಿದಿನ ಒಂದಲ್ಲಾ ಒಂದು ಪ್ರಯೋಗಗಳನ್ನ ಮಾಡ್ತಾನೇ ಇರ್ತಾರೆ. ಬರೀ ಪೇಪರ್ ನಿಂದಲೇ ಡ್ರೆಸ್ ತಯಾರಿಸುವುದರಿಂದ ಹಿಡಿದು ಚಿನ್ನ-ಬೆಳ್ಳಿ-ವಜ್ರ ಖಚಿತ ಉಡುಗೆಗಳನ್ನೂ ಫ್ಯಾಶನ್ ಡಿಸೈನರ್ ಗಳು ಸಿದ್ಧಪಡಿಸಿದ್ದಾರೆ. ಅದನ್ನೆಲ್ಲ ತೊಟ್ಟು ಮಾಡೆಲ್ ಗಳು ಮೆಲ್ಲನೆ ನಡೆದು ಬರ್ತಿದ್ರೆ, ಹರೆಯದ ಹುಡುಗರಿಗೆ ನೋಡಲು ಎರಡು ಕಣ್ಣು ಸಾಲದು.!
ಇದೀಗ ಉಡುಗೆ-ತೊಡುಗೆ ಬಗ್ಗೆ ನಾವು ಇಷ್ಟೆಲ್ಲಾ ಹೇಳಲು ಕಾರಣ ನಟಿ ಕರೀನಾ ಕಪೂರ್ ಖಾನ್. ಜುಲೈ 26 ರಂದು ನಡೆದ India Couture Week 2018 ರಲ್ಲಿ ನಟಿ ಕರೀನಾ ಕಪೂರ್ ಖಾನ್ ಭಾಗವಹಿಸಿದ್ದರು.

ರನ್ ವೇ ನಲ್ಲಿ ನಟಿ ಕರೀನಾ ಕಪೂರ್ ಖಾನ್ ಗೋಲ್ಡನ್ ಕಲರ್ ಲೆಹೆಂಗಾ ಧರಿಸಿ ಎಲ್ಲರ ಗಮನ ಸೆಳೆದರು. ಅಸಲಿಗೆ, ಶೇನ್ ಹಾಗೂ ಫಾಲ್ಗುಣಿ ಡಿಸೈನ್ ಮಾಡಿರುವ ಈ ಚಿನ್ನದ ಬಣ್ಣದ ಉಡುಪಿನ ತೂಕ ಎಷ್ಟು ಗೊತ್ತಾ.? ಬರೋಬ್ಬರಿ 30 ಕೆ.ಜಿ.!
30 ಕೆ.ಜಿ. ತೂಕದ ಯಾವುದೇ ವಸ್ತುವನ್ನ ಕೈಯಿಂದ ಮೇಲಕ್ಕೆ ಎತ್ತುವುದೇ ಕಷ್ಟ. ಅಂಥದ್ರಲ್ಲಿ, ಇಷ್ಟೊಂದು ತೂಕದ ಉಡುಪು ತೊಟ್ಟು ರನ್ ವೇ ನಲ್ಲಿ ಕ್ಯಾಟ್ ವಾಕ್ ಮಾಡಿದ್ದಾರೆ ನಟಿ ಕರೀನಾ ಕಪೂರ್ ಖಾನ್. ಈ ಗೋಲ್ಡನ್ ಕಲರ್ ಲೆಹಂಗಾ ಕರೀನಾ ಕಪೂರ್ ಖಾನ್ ಗೆ ಹೇಳಿ ಮಾಡಿಸಿದ ಹಾಗಿದೆ ಅಲ್ವಾ.?

ಹತ್ತು ವರ್ಷಗಳಿಂದ Ramp ವಾಕ್ ಮಾಡುತ್ತಿರುವ ಕರೀನಾ ಕಪೂರ್ ಇಷ್ಟೊಂದು ತೂಕದ ಉಡುಪು ತೊಟ್ಟಿದ್ದು ಇದೇ ಮೊದಲಂತೆ. ಸದ್ಯ India Couture Week 2018 ನಲ್ಲಿ ನಟಿ ಕರೀನಾ ಕಪೂರ್ ಖಾನ್ ಬಿಜಿಯಾಗಿದ್ದಾರೆ.


Click it and Unblock the Notifications











