»   » ಚಿತ್ರಗಳು: ಕರೀನಾ ಜೊತೆ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಕಂಗೊಳಿಸಿದ ತೈಮೂರ್!

ಚಿತ್ರಗಳು: ಕರೀನಾ ಜೊತೆ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಕಂಗೊಳಿಸಿದ ತೈಮೂರ್!

Posted By:
Subscribe to Filmibeat Kannada

ಬಾಲಿವುಡ್ ನಟ ಸೈಫ್ ಅಲಿ ಖಾನ್, ಪತ್ನಿ ಕರೀನಾ ಕಪೂರ್ ಮತ್ತು ಮಗ ತೈಮೂರ್ ಅಲಿ ಖಾನ್ ಮೂವರು ಸ್ವಿಟ್ಜರ್ಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದಾರೆ. ಅಲ್ಲಿ ಅವರು ರಜೆಯನ್ನು ಎಂಜಾಯ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳ ಮೂಲಕ ಹೊರಬಿದ್ದಿವೆ.

ಕರೀನಾ ಕಪೂರ್ ಮಗನ ಈ ಎಕ್ಸ್ ಪ್ರೆಶನ್ ಗೆ ಎಷ್ಟು ಮಾರ್ಕ್ಸ್ ಕೊಡ್ತೀರ?

ಸ್ವಿಟ್ಜರ್ಲ್ಯಾಂಡ್ ನಲ್ಲಿ ಬೇಬೋ ಫ್ಯಾಮಿಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣ ಇನ್‌ಸ್ಟಗ್ರಾಂನಲ್ಲಿ ಫೋಟೋಗಳು ಹರಿದಾಡುತ್ತಿವೆ. ಸೈಫ್ ಮತ್ತು ಕರೀನಾ ದಂಪತಿಯ ಮಗ ತೈಮುರ್ ಫೋಟೋಗ್ರಫಿ ಬಗ್ಗೆ ತಿಳಿದಿರುವಂತೆ ಮುದ್ದು ಮುದ್ದಾಗಿ ಪೋಸ್ ಕೊಟ್ಟಿದ್ದಾನೆ. ಅವರ ಪ್ರವಾಸದ ಅದ್ಭುತ ಕ್ಷಣಗಳು ಚಿತ್ರಗಳಲ್ಲಿ ಈ ಕೆಳಗಿನಂತಿವೆ ನೋಡಿ..

ಕ್ಯೂಟ್ ಫ್ಯಾಮಿಲಿ

ಸೈಫ್ ಅಲಿ ಖಾನ್ ಫ್ಯಾಮಿಲಿ ಈಗ ಹಾಲಿಡೇ ಎಂಜಾಯ್‌ಗಾಗಿ ಸ್ವಿಟ್ಜರ್ಲ್ಯಾಂಡ್ ಗೆ ಹೋಗಿದ್ದು, Swiss Alps ನಲ್ಲಿನ Gstaas ರೆಸಾರ್ಟ್ಸ್‌ ನಲ್ಲಿ ಉಳಿದುಕೊಂಡಿದ್ದಾರೆ. ಅಲ್ಲಿ ಅವರು ಕುಟುಂಬ ಸಮೇತ ತೆಗೆಸಿಕೊಂಡ ಈ ಮೇಲಿನ ಫೋಟೋದಲ್ಲಿ ತೈಮೂರ್ ಅಲಿ ಖಾನ್ ಅತೀ ಕ್ಯೂಟ್ ಮತ್ತು ಸ್ವೀಟ್ ಆಗಿ ಪೋಸ್ ಕೊಟ್ಟಿದ್ದಾನೆ ನೋಡಿ..

ಸೈಫ್ ಮತ್ತು ತೈಮೂರ್

ತಂದೆ ಸೈಫ್ ಅಲಿ ಖಾನ್, ಮಗ ತೈಮೂರ್ ಅಲಿ ಖಾನ್‌'ನನ್ನು ಎತ್ತಿಕೊಂಡು ಅವನ ಹಣೆಗೆ ಮುತ್ತಿಟ್ಟ ತಂದೆ-ಮಗನ ಬಾಂಧವ್ಯದ ಅಪರೂಪದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾದ ಕ್ಷಣ.

ಕರಿನಾ ಕಪೂರ್

ಬಾಲಿವುಡ್ ಬೇಬೋ ಕರೀನಾ ಕಪೂರ್ ಲಿಟ್ಲು ಬಾಯ್ ತೈಮೂರ್ ಜೊತೆ Swiss Alps ನ ಬ್ಯಾಕ್‌ಡ್ರಾಪ್ ನಲ್ಲಿ ಪೋಸ್ ಕೊಟ್ಟ ಫೋಟೋ ಇದು.

ಉಡುಗೊರೆ

ಸ್ವಿಟ್ಜರ್ಲ್ಯಾಂಡ್‌ ನಲ್ಲೂ ಸೈಫ್ ಅಲಿ ಖಾನ್ ಗೆ ಅಭಿಮಾನಿಗಳಿದ್ದಾರೆ. ಅಲ್ಲಿನ ಅಭಿಮಾನಿಯೊಬ್ಬರು ಸೈಫ್ ಗೆ ತೈಮೂರ್ ಚಿತ್ರವನ್ನು ಸ್ಕೆಚ್ ಮಾಡಿ ನೀಡಿದ್ದಾರೆ.

English summary
In Pics: Kareena Kapoor, Saif Ali Khan & Taimur Look Adorable In Their Switzerland Holiday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada