ಸದ್ದು ಮಾಡದೆ, ಸುದ್ದಿ ಆಗದೆ, ಸೈಲೆಂಟ್ ಆಗಿ ಮದುವೆ ಆದ ನೇಹಾ ಧೂಪಿಯಾ.!

By Harshitha

ಕಳೆದ ಒಂದು ವಾರದಿಂದ ಬಾಲಿವುಡ್ ಅಂಗಳದಲ್ಲಿ ನಟಿ ಸೋನಂ ಕಪೂರ್ ಮದುವೆಯದ್ದೇ ಸುದ್ದಿ. ಇಡೀ ಬಾಲಿವುಡ್ಡಿಗೆ ಬಾಲಿವುಡ್ಡೇ ಅನಿಲ್ ಕಪೂರ್ ಮಗಳ ಮದುವೆಯ ಸಂಭ್ರಮದಲ್ಲಿ ನಿನ್ನೆಯವರೆಗೂ ಮುಳುಗಿತ್ತು. ಉದ್ಯಮಿ ಆನಂದ್ ಅಹುಜಾ ಜೊತೆಗೆ ಮದುವೆ ಆಗಿ ಸೋನಂ ಕಪೂರ್ ಇದೀಗ ಮಿಸಸ್ ಅಹುಜಾ ಆಗಿದ್ದಾಗಿದೆ.

ಈಗ ಸೋನಂ ಕಪೂರ್ ಹಾದಿಯಲ್ಲೇ ನಟಿ ನೇಹಾ ಧೂಪಿಯಾ ಸಾಗಿದ್ದಾರೆ. ಅರ್ಥಾತ್ ಬಾಲಿವುಡ್ ನಟಿ ನೇಹಾ ಧೂಪಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಮ್ಮ ಗೆಳೆಯ, ನಟ ಅಂಗದ್ ಸಿಂಗ್ ಬೇಡಿ ಜೊತೆಗೆ ಇಂದು ಹೊಸ ಜೀವನ ಆರಂಭಿಸಿದ್ದಾರೆ ನಟಿ ನೇಹಾ ಧೂಪಿಯಾ. ಫೋಟೋ ಆಲ್ಬಂ ಇಲ್ಲಿದೆ ನೋಡಿ...

ಹ್ಯಾಪಿ ಮ್ಯಾರೀಡ್ ಲೈಫ್ ನೇಹಾ-ಅಂಗದ್ ಬೇಡಿ

ಹ್ಯಾಪಿ ಮ್ಯಾರೀಡ್ ಲೈಫ್ ನೇಹಾ-ಅಂಗದ್ ಬೇಡಿ

ಸಿಖ್ ಸಂಪ್ರದಾಯದಂತೆ ಇಂದು ಬಾಲಿವುಡ್ ನಟಿ ನೇಹಾ ಧೂಪಿಯಾ ಹಾಗೂ ನಟ ಅಂಗದ್ ಸಿಂಗ್ ಬೇಡಿ ನವ ಜೀವನಕ್ಕೆ ನಾಂದಿ ಹಾಡಿದರು.

ಲವ್ ಕಮ್ ಅರೇಂಜ್ಡ್ ಮ್ಯಾರೇಜ್

ಲವ್ ಕಮ್ ಅರೇಂಜ್ಡ್ ಮ್ಯಾರೇಜ್

ಅಂಗದ್ ಸಿಂಗ್ ಬೇಡಿ ಕೂಡ ಬಾಲಿವುಡ್ ನಟ. ಹೀಗಾಗಿ ಚಿತ್ರರಂಗದಲ್ಲೇ ನೇಹಾ ಹಾಗೂ ಅಂಗದ್ ಸಿಂಗ್ ಬೇಡಿಗೆ ಪರಿಚಯ ಆಗಿದೆ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೇಮಕ್ಕೆ ತಿರುಗಿ ಇಂದು ತಮ್ಮ ಪ್ರೇಮಕ್ಕೆ ಮದುವೆಯೆಂಬ ಅಧಿಕೃತ ಮುದ್ರೆ ಬಿದ್ದಿದೆ.

ಯಾರು ಈ ಅಂಗದ್ ಸಿಂಗ್ ಬೇಡಿ.?

ಯಾರು ಈ ಅಂಗದ್ ಸಿಂಗ್ ಬೇಡಿ.?

35 ವರ್ಷ ವಯಸ್ಸಿನ ಅಂಗದ್ ಸಿಂಗ್ ಬೇಡಿ ಮಾಡೆಲ್ ಹಾಗೂ ನಟ. ಬಾಲಿವುಡ್ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಅಂಗದ್ ಸಿಂಗ್ ಬೇಡಿ ಹೆಸರುವಾಸಿ. 2011 ರಲ್ಲಿ ಬಿಡುಗಡೆ ಆದ 'ಫಾಲ್ತು' ಸೇರಿದಂತೆ 'ಪಿಂಕ್', 'ಟೈಗರ್ ಜಿಂದಾ ಹೇ' ಚಿತ್ರಗಳಲ್ಲಿ ಅಂಗದ್ ಸಿಂಗ್ ಬೇಡಿ ಅಭಿನಯಿಸಿದ್ದಾರೆ. ಕಿರುತೆರೆಯ 'ಎಮೋಷನಲ್ ಅತ್ಯಾಚಾರ' ಸೇರಿದಂತೆ ಹಲವು ಶೋಗಳಿಗೆ ಹೋಸ್ಟ್ ಆಗಿದ್ದವರು ಅಂಗದ್ ಸಿಂಗ್ ಬೇಡಿ.

ನೇಹಾ ಧೂಪಿಯಾ ಕುರಿತು..

ನೇಹಾ ಧೂಪಿಯಾ ಕುರಿತು..

2002 ರಲ್ಲಿ ಮಿಸ್ ಇಂಡಿಯಾ ಕಿರೀಟ ತೊಟ್ಟ ನೇಹಾ ಧೂಪಿಯಾ 2003 ರಲ್ಲಿ ಬಾಲಿವುಡ್ ಗೆ ಪದಾರ್ಪಣೆ ಮಾಡಿದರು. 'ಕ್ಯಾ ಕೂಲ್ ಹೇ ಹಮ್', 'ದಸ್ ಕಹಾನಿಯಾ', 'ಚುಪ್ ಚುಪ್ ಕೇ', 'ಸಿಂಗ್ ಈಸ್ ಕಿಂಗ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನೇಹಾ ಧೂಪಿಯಾ ಅಭಿನಯಿಸಿದ್ದಾರೆ.

More from Filmibeat

English summary
Bollywood Actress Neha Dhupia got married to Angad Singh Bedi today (May 10th). Check out the pictures of Bride Neha Dhupia and Bridegroom Angad Singh Bedi here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X