»   » ಫೋಟೋ ಕಲೆಕ್ಷನ್ ; ಬಿಪಾಶಾ-ಕರಣ್ ಮದುವೆ ಸಂಭ್ರಮದ ಅದ್ಭುತ ಕ್ಷಣಗಳು

ಫೋಟೋ ಕಲೆಕ್ಷನ್ ; ಬಿಪಾಶಾ-ಕರಣ್ ಮದುವೆ ಸಂಭ್ರಮದ ಅದ್ಭುತ ಕ್ಷಣಗಳು

Posted By:
Subscribe to Filmibeat Kannada

ಬಾಲಿವುಡ್ ನಟಿ ಬಿಪಾಶಾ ಬಸು - ನಟ ಕರಣ್ ಸಿಂಗ್ ಗ್ರೋವರ್ ರವರ ಅದ್ಧೂರಿ ವಿವಾಹ ಮಹೋತ್ಸವಕ್ಕೆ ತೆರೆಬಿದ್ದಿದೆ. ಆ ಮೂಲಕ ಎರಡು ವರ್ಷಗಳ ಕಾಲ ಪ್ರೇಮದ ಅಮಲಿನಲ್ಲಿ ತೇಲುತ್ತಿದ್ದ ಈ ಜೋಡಿಯ ಪ್ರೀತಿಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.

ಮುಂಬೈನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಬೆಂಗಾಲಿ ಹಾಗೂ ಪಂಜಾಬಿ ಸಂಪ್ರದಾಯದಂತೆ ಏಪ್ರಿಲ್ 30 ರಂದು ಕರಣ್ ಸಿಂಗ್ ಗ್ರೋವರ್ ಜೊತೆ ಬಿಪಾಶಾ ಬಸು ನವ ಜೀವನಕ್ಕೆ ನಾಂದಿ ಹಾಡಿದರು. ಬಳಿಕ ಇಬ್ಬರ ರಿಸೆಪ್ಷನ್ ಕೂಡ ಗ್ರ್ಯಾಂಡ್ ಆಗಿ ನೆರವೇರಿತು.

in-pics-new-pictures-of-bipasha-basu-and-karan-singh-grover-wedding

ನಟಿ ಬಿಪಾಶಾ ಬಸುಗಿಂತ ಮೂರು ವರ್ಷ ಚಿಕ್ಕವನಾಗಿದ್ದರೂ, ಕರಣ್ ಸಿಂಗ್ ಗ್ರೋವರ್ ಗೆ ಇದು ಮೂರನೇ ವಿವಾಹ. ಎರಡು ಬಾರಿ ವಿಚ್ಛೇದನ ಪಡೆದಿರುವ 'ಅನುಭವಿ'.

ಈ ಹಿಂದೆ ಎರಡ್ಮೂರು ಬಾರಿ ಬ್ರೇಕಪ್ ಆಗಿದ್ದರೂ, ನಟಿ ಬಿಪಾಶಾ ಬಸು ಹಸೆಮಣೆ ಏರಿದ್ದು ಇದೇ ಮೊದಲು. ಹೀಗಾಗಿ, ನಗು ಮೊಗದಲ್ಲೇ ಬಿಪಾಶಾ ಕಂಗೊಳಿಸಿದರು. [ಬಿಪಾಶಾ ಬಸು - ಕರಣ್ ಸಿಂಗ್ ಗ್ರೋವರ್ ಮದುವೆ ಫೋಟೋ ಆಲ್ಬಂ]

ಬಿಗ್ ಬಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಬಚ್ಚನ್ ಸೇರಿದಂತೆ ಬಾಲಿವುಡ್ ನ ಅತಿರಥ ಮಹಾರಥರೇ ಬಿಪಾಶಾ - ಕರಣ್ ವಿವಾಹಕ್ಕೆ ಸಾಕ್ಷಿಯಾದರು. [ಬಿಪಾಶಾ-ಕರಣ್ ರಿಸೆಪ್ಷನ್ ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಕಲರ್ ಫುಲ್ ಚಿತ್ರಗಳು]

ಬಿಪಾಶಾ ಬಸು - ಕರಣ್ ಸಿಂಗ್ ಗ್ರೋವರ್ ಮದುವೆಯ ಅವಿಸ್ಮರಣೀಯ ಕ್ಷಣಗಳ ಫೋಟೋ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
Bollywood Actor Karan Singh Grover has tied knot with Bollywood Actress Bipasha Basu on Saturday (April 30th), in a private ceremony, in Mumbai. Check out the new pics of couple's wedding.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada