ಅದ್ಧೂರಿಯಾಗಿ ನಡೆದ ಪ್ರಿನ್ಸ್-ಯುವಿಕಾ ಚೌಧರಿ ಮೆಹಂದಿ ಸಮಾರಂಭ
ಹಿಂದಿ ಕಿರುತೆರೆಯ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪ್ರಿನ್ಸ್ ನರುಲಾ ಗೃಹಸ್ಥಾಶ್ರಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕನ್ನಡದ 'ಮಳೆಯಲಿ ಜೊತೆಯಲಿ' ಸೇರಿದಂತೆ ಹಲವು ಹಿಂದಿ ಹಾಗೂ ಪಂಜಾಬಿ ಸಿನಿಮಾಗಳಲ್ಲಿ ನಟಿಸಿರುವ ಯುವಿಕಾ ಚೌಧರಿಯನ್ನ ಪ್ರಿನ್ಸ್ ಮದುವೆ ಆಗುತ್ತಿದ್ದಾರೆ.
ಅಕ್ಟೋಬರ್ 12 ರಂದು ಪ್ರಿನ್ಸ್ ನರುಲಾ-ಯುವಿಕಾ ಚೌಧರಿ ವಿವಾಹ ಮಹೋತ್ಸವ ಪಂಜಾಬಿ ಸಂಪ್ರದಾಯದಂತೆ ನಡೆಯಲಿದ್ದು, ನಿನ್ನೆಯಷ್ಟೇ ಮೆಹಂದಿ ಹಾಗೂ ಉಂಗುರ ಬದಲಾವಣೆ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ.
ಮೂರು ದಿನಗಳ ಕಾಲ ಪ್ರಿನ್ಸ್ ನರುಲಾ-ಯುವಿಕಾ ಚೌಧರಿ ಮದುವೆ ಮುಂಬೈನಲ್ಲಿ ನಡೆಯಲಿದೆ. ನವ ಜೋಡಿಯ ಮೆಹಂದಿ ಸಮಾರಂಭದ ಫೋಟೋಗಳು ನಿಮ್ಮ ಫಿಲ್ಮಿಬೀಟ್ ಗೆ ಲಭ್ಯವಾಗಿದೆ. ಫೋಟೋ ಸ್ಲೈಡ್ ಗಳಲ್ಲಿ ನೋಡಿರಿ...
ವಿಡಿಯೋ ನೋಡಿ...
ನಿನ್ನೆಯಷ್ಟೇ (ಅಕ್ಟೋಬರ್ 10) ನೆರವೇರಿದ ಮೆಹಂದಿ ಸಮಾರಂಭದ ವಿಡಿಯೋನ ಸ್ವತಃ ವಧು ಯುವಿಕಾ ಚೌಧರಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಪ್ರಿನ್ಸ್-ಯುವಿಕಾ ಮೆಹಂದಿ ಸಂಭ್ರಮದ ವಿಡಿಯೋ ಝಲಕ್ ನ ನೀವೇ ಕಣ್ತುಂಬಿಕೊಳ್ಳಿ.

ಮಿರಿ ಮಿರಿ ಮಿಂಚುತ್ತಿದ್ದ ವಧು
ಮೆಹಂದಿ ಸಮಾರಂಭದಲ್ಲಿ ಹಸಿರು ಬಣ್ಣದ ಲೆಹಂಗಾ ತೊಟ್ಟು ಯುವಿಕಾ ಚೌಧರಿ ಮಿರಿಮಿರಿ ಮಿಂಚುತ್ತಿದ್ದರು. ಮೆಹಂದಿ ಸಮಾರಂಭಕ್ಕಾಗಿಯೇ ಸ್ಪೆಷಲ್ ಆಗಿ ತಯಾರಿಸಿದ್ದ ಹೂವಿನ ಆಭರಣವನ್ನ ತೊಟ್ಟು ಯುವಿಕಾ ಕಂಗೊಳಿಸಿದರು.

ಸಿಂಪಲ್ ಆಗಿ ಕಾಣುತ್ತಿದ್ದ ಪ್ರಿನ್ಸ್
ಬಳಿ ಬಣ್ಣದ ಕುರ್ತಾ ಧರಿಸಿ ಪ್ರಿನ್ಸ್ ಸಿಂಪಲ್ ಅಂಡ್ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದರು. ಮೆಹಂದಿ ಸಮಾರಂಭ ಮುಗಿಯುತ್ತಿದ್ದ ಹಾಗೆ, ಪಂಜಾಬಿ ಗೀತೆಗಳಿಗೆ ನವ ವಧು-ವರ ಹೆಜ್ಜೆ ಹಾಕಿದರು.

ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡ ಜೋಡಿ
ಮೆಹಂದಿ ಸಮಾರಂಭ ಮುಗಿದ ಬಳಿಕ ಜೋಡಿ ಉಂಗುರ ಬದಲಾಯಿಸಿಕೊಂಡರು. ನಾಳೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಹೊಸ ಬಾಳಿನ ಹೊಸ್ತಿಲಲ್ಲಿ ಇರುವ ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.


Click it and Unblock the Notifications











