ಚಿತ್ರಗಳು: ಧಾಂ ಧೂಂ ಆಗಿ ನಡೆಯಿತು ಪ್ರಿನ್ಸ್ ನರುಲಾ-ಯುವಿಕಾ ಚೌಧರಿ ಮದುವೆ

ಹಿಂದಿ ಕಿರುತೆರೆಯ ಹ್ಯಾಂಡ್ಸಮ್ ಹಂಕ್... ಮೂರ್ಮೂರು ರಿಯಾಲಿಟಿ ಶೋಗಳ ವಿಜೇತ ಪ್ರಿನ್ಸ್ ನರುಲಾ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ನಟಿ ಯುವಿಕಾ ಚೌಧರಿ ಜೊತೆಗೆ ಪ್ರಿನ್ಸ್ ನರುಲಾ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ.

ನಿನ್ನೆ (ಅಕ್ಟೋಬರ್ 12) ಮುಂಬೈನ ಪ್ರತಿಷ್ಟಿತ ಹೋಟೆಲ್ ವೊಂದರಲ್ಲಿ ಪ್ರಿನ್ಸ್ ನರುಲಾ-ಯುವಿಕಾ ಚೌಧರಿ ವಿವಾಹ ಮಹೋತ್ಸವ ನಡೆಯಿತು. ಪಂಜಾಬಿ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಪ್ರಿನ್ಸ್ ನರುಲಾ-ಯುವಿಕಾ ಚೌಧರಿಯ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಬೇಕಾದ್ರೆ, ನೀವೇ ಒಮ್ಮೆ ಫೋಟೋಗಳನ್ನ ನೋಡಿಕೊಂಡ್ ಬನ್ನಿ...

ಮಿರಿ ಮಿರಿ ಮಿಂಚಿದ ವಧು ಯುವಿಕಾ ಚೌಧರಿ

ಮಿರಿ ಮಿರಿ ಮಿಂಚಿದ ವಧು ಯುವಿಕಾ ಚೌಧರಿ

ವಿವಾಹ ಮಹೋತ್ಸವಕ್ಕೆ ಕೆಂಪು ಬಣ್ಣದ ಗಾಘ್ರಾ ತೊಟ್ಟಿದ್ದ ಯುವಿಕಾ ಚೌಧರಿ ಮಿರಿ ಮಿರಿ ಮಿಂಚುತ್ತಿದ್ದರು. ಇನ್ನೂ ಕ್ರೀಮ್ ಬಣ್ಣದ ಶೇರ್ವಾನಿ ತೊಟ್ಟಿದ್ದರು ವರ ಪ್ರಿನ್ಸ್ ನರುಲಾ.

ಪ್ರಿನ್ಸ್-ಯುವಿಕಾ ಲವ್ ಸ್ಟೋರಿ

ಪ್ರಿನ್ಸ್-ಯುವಿಕಾ ಲವ್ ಸ್ಟೋರಿ

ಪ್ರಿನ್ಸ್ ನರುಲಾ ಹಾಗೂ ಯುವಿಕಾ ಚೌಧರಿ ಮಧ್ಯೆ ಪ್ರೇಮಾಂಕುರವಾಗಿದ್ದು 'ಬಿಗ್ ಬಾಸ್' ಮನೆಯಲ್ಲಿ. 'ಬಿಗ್ ಬಾಸ್-9' ಕಾರ್ಯಕ್ರಮದಲ್ಲಿ ಪ್ರಿನ್ಸ್ ಹಾಗೂ ಯುವಿಕಾ ಸ್ಪರ್ಧಿಗಳಾಗಿದ್ದರು. 'ಬಿಗ್ ಬಾಸ್' ಮನೆಯಲ್ಲಿ ಇದ್ದಾಗಲೇ, ಯುವಿಕಾಗೆ ಪ್ರಿನ್ಸ್ ಪ್ರಪೋಸ್ ಮಾಡಿದ್ದರು.

ಲವ್ ಕಮ್ ಅರೇಂಜ್ಡ್ ಮ್ಯಾರೇಜ್

ಲವ್ ಕಮ್ ಅರೇಂಜ್ಡ್ ಮ್ಯಾರೇಜ್

ಪ್ರಿನ್ಸ್ ನರುಲಾ ಹಾಗೂ ಯುವಿಕಾ ಚೌಧರಿ ಮದುವೆಗೆ ಕುಟುಂಬದವರೂ ಸಮ್ಮತಿ ಸೂಚಿಸಿದರು. ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ರೋಡೀಸ್ ತಂಡ

ರೋಡೀಸ್ ತಂಡ

ಹಾಗ್ನೋಡಿದ್ರೆ, ಪ್ರಿನ್ಸ್ ನರುಲಾ ಜನಪ್ರಿಯತೆ ಪಡೆದಿದ್ದೇ ಎಂಟಿವಿ ರೋಡೀಸ್ ರಿಯಾಲಿಟಿ ಶೋನಿಂದ. ರೋಡೀಸ್ ನಲ್ಲಿ ಗೆಲುವಿನ ನಗೆ ಬೀರಿದ್ಮೇಲೆ, ಅದೇ ಕಾರ್ಯಕ್ರಮದಲ್ಲಿ ಪ್ರಿನ್ಸ್ ಗ್ಯಾಂಗ್ ಲೀಡರ್ ಆಗಿದ್ದಾರೆ. ನವ ಜೀವನ ಆರಂಭಿಸಿರುವ ಪ್ರಿನ್ಸ್ ಹಾಗೂ ಯುವಿಕಾಗೆ ಶುಭ ಕೋರಲು ರೋಡೀಸ್ ತಂಡದಿಂದ ರಣ್ ವಿಜಯ್ ಹಾಗೂ ನಿಖಿಲ್ ಚಿನ್ನಪ್ಪ ಆಗಮಿಸಿದ್ದರು.

ನಟಿ ನೇಹಾ ಧೂಪಿಯಾ

ನಟಿ ನೇಹಾ ಧೂಪಿಯಾ

ರೋಡೀಸ್ ನಲ್ಲಿ ಗ್ಯಾಂಗ್ ಲೀಡರ್ ಆಗಿದ್ದ ನಟಿ ನೇಹಾ ಧೂಪಿಯಾ ಕೂಡ ಪ್ರಿನ್ಸ್ ನರುಲಾ-ಯುವಿಕಾ ಮದುವೆಗೆ ಸಾಕ್ಷಿ ಆಗಿದ್ದರು. ಇವರಿಷ್ಟೇ ಅಲ್ಲ, ಬಾಲಿವುಡ್ ನ ಹಲವು ನಟ-ನಟಿಯರು ಪ್ರಿನ್ಸ್-ಯುವಿಕಾ ಮದುವೆಗೆ ಆಗಮಿಸಿ ಶುಭ ಕೋರಿದ್ದಾರೆ.

More from Filmibeat

English summary
Bigg Boss 9 Winner Prince Narula and Yuvika Chaudhary's wedding took place on October 12th in Mumbai. Have a look at the pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X