ಚಿತ್ರಗಳು: ಗೋವಾದಲ್ಲಿ ಪ್ರಿಯಾಂಕಾ-ನಿಕ್ ಜೊನಾಸ್ ಮೋಜು-ಮಸ್ತಿ
ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ಅಮೇರಿಕನ್ ಸಿಂಗರ್ ಕಮ್ ಆಕ್ಟರ್ ನಿಕ್ ಜೊನಾಸ್ ಬಗ್ಗೆ ದಿನಕ್ಕೊಂದು ಸುದ್ದಿ ಆಗುತ್ತಿದ್ದರೂ, ಇಲ್ಲಿಯವರೆಗೂ ತಮ್ಮ ನಡುವೆ ಇರುವ ಅನುಬಂಧದ ಬಗ್ಗೆ ಪ್ರಿಯಾಂಕಾ ಆಗಲಿ, ನಿಕ್ ಆಗಲಿ ಕ್ಲಾರಿಟಿ ಕೊಟ್ಟಿಲ್ಲ.
ಇಷ್ಟು ದಿನ ವಿದೇಶದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಇದೀಗ ಭಾರತದಲ್ಲೂ ಅಂಟಿಕೊಂಡೇ ಓಡಾಡುತ್ತಿದ್ದಾರೆ. ಮೊನ್ನೆಮೊನ್ನೆಯಷ್ಟೇ ಮುಂಬೈನಲ್ಲಿ ಕೈಕೈ ಹಿಡಿದುಕೊಂಡು ಓಡಾಡುತ್ತಿದ್ದ ಪ್ರಿಯಾಂಕಾ ಹಾಗೂ ನಿಕ್ ಸದ್ಯ ಗೋವಾದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ.
ಪ್ರಿಯಾಂಕಾ ಹಾಗೂ ನಿಕ್ ಮಾತ್ರ ಅಲ್ಲ... ಈ ಜೋಡಿ ಜೊತೆಗೆ ಪರಿಣಿತಿ ಛೋಪ್ರಾ ಸೇರಿದಂತೆ ಪ್ರಿಯಾಂಕಾ ಫ್ಯಾಮಿಲಿ ಕೂಡ ಗೋವಾ ಟ್ರಿಪ್ ನಲ್ಲಿದ್ದಾರೆ. ಬೇಕಾದ್ರೆ, ನೀವೇ ಫೋಟೋಗಳನ್ನು ನೋಡಿರಿ...

ಗೋವಾದಲ್ಲಿ ಪ್ರಿಯಾಂಕಾ 'ಕುಟುಂಬ'
ಇತ್ತೀಚೆಗಷ್ಟೇ ಹೊಸ ಮನೆ ಖರೀದಿ ಮಾಡಿ ಖುಷಿಯಾಗಿರುವ ನಟಿ ಪ್ರಿಯಾಂಕಾ ಛೋಪ್ರಾ ಇದೀಗ ಫ್ಯಾಮಿಲಿ ಜೊತೆಗೆ ಗೋವಾ ಟ್ರಿಪ್ ನಲ್ಲಿದ್ದಾರೆ. ಪ್ರಿಯಾಂಕಾ ಕುಟುಂಬದ ಜೊತೆಗೆ ನಿಕ್ ಜೊನಾಸ್ ಕೂಡ ಹೊಂದಿಕೊಂಡಿದ್ದಾರೆ. ಗೋವಾದ ಹೋಟೆಲ್ ಒಂದರಲ್ಲಿ ಪ್ರಿಯಾಂಕಾ ಫ್ಯಾಮಿಲಿ ಜೊತೆಗೆ ನಿಕ್ ಊಟ ಮಾಡುತ್ತಿರುವ ಫೋಟೋ ಇಲ್ಲಿದೆ ನೋಡಿ...

ಇನ್ನೊಂದು ಫೋಟೋ ಇಲ್ಲಿದೆ
ಪ್ರಿಯಾಂಕಾ ಛೋಪ್ರಾ ಕುಟುಂಬಕ್ಕೆ ನಿಕ್ ಜೊನಾಸ್ ಆಪ್ತವಾಗಿದ್ದಾರೆ. ಅದಕ್ಕೆ ಈ ಫೋಟೋಗಿಂತ ಸಾಕ್ಷಿ ಬೇಕಾ.?
ಮಳೆಯಲ್ಲಿ ಸಹೋದರಿಯರ ಗಾನಬಜಾನ
ಗೋವಾದಲ್ಲಿ... ಮಳೆಯಲ್ಲಿ.. ಟಿಪ್ ಟಿಪ್ ಬರಸಾ ಪಾನಿ.. ಅಂತ ಪ್ರಿಯಾಂಕಾ ಛೋಪ್ರಾ ಹಾಗೂ ಪರಿಣಿತಿ ಛೋಪ್ರಾ ಹಾಡಿ ಕುಣಿದು ಕುಪ್ಪಳಿಸಿರುವ ವಿಡಿಯೋ ಇಲ್ಲಿದೆ ನೋಡಿ...

ಭಾರತಕ್ಕೆ ನಿಕ್ ಜೊನಾಸ್ ಬಂದಿದ್ದೇಕೆ.?
ಮುಂಬೈನ ಕಡಲ ಕಿನಾರೆಯಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಒಂದು ಬಂಗಲೆ ಖರೀದಿ ಮಾಡಿದ್ದಾರೆ. ಆ ಬಂಗಲೆಯ ಗೃಹಪ್ರವೇಶ ಸಮಾರಂಭದಲ್ಲಿ ಪಾಲ್ಗೊಳ್ಳಲು ನಿಕ್ ಜೊನಾಸ್ ಭಾರತಕ್ಕೆ ಬಂದರು. ಈಗಾಗಲೇ ಪ್ರಿಯಾಂಕಾ ರನ್ನ ತಮ್ಮ ತಂದೆ-ತಾಯಿಗೆ ನಿಕ್ ಜೊನಾಸ್ ಪರಿಚಯ ಮಾಡಿಕೊಟ್ಟಿದ್ದಾಗಿದೆ. ಇದೀಗ ನಟಿ ಪ್ರಿಯಾಂಕಾ ಛೋಪ್ರಾ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ನಿಕ್ ರನ್ನ ಪರಿಚಯಿಸಿದ್ದಾರೆ.


Click it and Unblock the Notifications











