ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ಮದುವೆಯ ಫೋಟೋ ಆಲ್ಬಂ ಇಲ್ಲಿದೆ ನೋಡಿ
ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೆಳೆಯ ನಿಕ್ ಜೋನಸ್ ಜೊತೆಗೆ ವೈವಾಹಿಕ ಬದುಕಿಗೆ ಪ್ರಿಯಾಂಕಾ ಛೋಪ್ರಾ ಅಡಿಯಿಟ್ಟಿದ್ದಾರೆ.
ಜೋಧ್ ಪುರದ ಐತಿಹಾಸಿಕ ಉಮೈದ್ ಭವನ್ ಪ್ಯಾಲೇಸ್ ನಲ್ಲಿ ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ವಿವಾಹ ಮಹೋತ್ಸವ ನಡೆಯಿತು. ಡಿಸೆಂಬರ್ 1 ರಂದು ಕ್ರೈಸ್ತ ಸಂಪ್ರದಾಯದಂತೆ ಪ್ರಿಯಾಂಕಾ-ನಿಕ್ ಮದುವೆ ನಡೆಯಿತು. ಇನ್ನೂ ಡಿಸೆಂಬರ್ 2 ರಂದು ಸಿಖ್ ಸಂಪ್ರದಾಯದಂತೆ ಪ್ರಿಯಾಂಕಾ ಕೊರಳಿಗೆ ನಿಕ್ ಜೋನಸ್ ಮಂಗಳಸೂತ್ರ ತೊಡಿಸಿದರು.
ಪ್ರಿಯಾಂಕಾ-ನಿಕ್ ಮದುವೆಯ ಫೋಟೋಗಳು ಸದ್ಯ ಬಿಡುಗಡೆಗೊಂಡಿದೆ. ಫೋಟೋ ಆಲ್ಬಂ ಇಲ್ಲಿದೆ, ನೋಡಿರಿ...

ಬಿಳಿ ಗೌನ್ ನಲ್ಲಿ ಕಂಗೊಳಿಸಿದ ಪ್ರಿಯಾಂಕಾ
ಕ್ರೈಸ್ತ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ವಧು ಪ್ರಿಯಾಂಕಾ ಛೋಪ್ರಾ ಬಿಳಿ ಬಣ್ಣದ ಎಂಬ್ರಾಯಿಡರಿ ಹೊಂದಿದ್ದ Ralph Lauren ಗೌನ್ ಧರಿಸಿದ್ದರು. ಬರೋಬ್ಬರಿ 75 ಅಡಿ ಉದ್ದದ ವೇಲ್ ಧರಿಸಿದ್ದ ಪ್ರಿಯಾಂಕಾ ಛೋಪ್ರಾ ಮಿರಿ ಮಿರಿ ಮಿಂಚಿದರು. ಇನ್ನೂ ಕಪ್ಪು ಬಣ್ಣದ ಸೂಟು ಬೂಟು ತೊಟ್ಟು ಕ್ಲಾಸಿ ಅವತಾರ ತಾಳಿದ್ದರು ನಿಕ್ ಜೋನಸ್.

ಗೌನ್ ವಿಶೇಷತೆ
ಹಲೋ ಕೆನಡಾ ವರದಿ ಮಾಡಿರುವ ಪ್ರಕಾರ, ಪ್ರಿಯಾಂಕಾ ಮದುವೆಯ ಗೌನ್ ರೆಡಿ ಮಾಡಲು 1826 ಗಂಟೆಗಳು ಬೇಕಾಯಿತಂತೆ.
ತಾಯಿಯ ಕೈಹಿಡಿದು ನಡೆದು ಬಂದ ಪ್ರಿಯಾಂಕಾ
2013 ರಲ್ಲಿ ಕ್ಯಾನ್ಸರ್ ನಿಂದ ಪ್ರಿಯಾಂಕಾ ಛೋಪ್ರಾ ತಂದೆ ಅಶೋಕ್ ವಿಧಿವಶರಾದರು. ಹೀಗಾಗಿ, ತಾಯಿ ಮಧು ಕೈಹಿಡಿದು ವಧು ಪ್ರಿಯಾಂಕಾ ಮದುವೆ ಮಂಟಪಕ್ಕೆ ನಡೆದು ಬಂದರು.

ಸಿಖ್ ಸಂಪ್ರದಾಯದಂತೆ ಮದುವೆ
ಡಿಸೆಂಬರ್ 2 ರಂದು ಸಿಖ್ ಸಂಪ್ರದಾಯದಂತೆ ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ಮದುವೆ ನಡೆಯಿತು. ಇದ್ದಕ್ಕಾಗಿ ಕಣ್ಣು ಕುಕ್ಕುವ ಕೆಂಪು ಬಣ್ಣದ ಲೆಹಂಗಾ ಧರಿಸಿದ್ದರು ಪ್ರಿಯಾಂಕಾ ಛೋಪ್ರಾ. ಇನ್ನೂ ಕ್ರೀಮ್ ಮತ್ತು ಗೋಲ್ಡನ್ ಬಣ್ಣದ ಶೇರ್ವಾನಿಯಲ್ಲಿ ವರ ನಿಕ್ ಕಂಗೊಳಿಸಿದರು.

225 ಅತಿಥಿಗಳು ಭಾಗಿ
ಗಣ್ಯಾತಿಗಣ್ಯರು, ಬಾಲಿವುಡ್ ನಟ-ನಟಿಯರು ಸೇರಿದಂತೆ ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ಮದುವೆಗೆ ಒಟ್ಟು 225 ಅತಿಥಿಗಳು ಸಾಕ್ಷಿ ಆಗಿದ್ದರು.


Click it and Unblock the Notifications











