twitter
    For Quick Alerts
    ALLOW NOTIFICATIONS  
    For Daily Alerts

    'ಬ್ರೈಡಲ್ ಶವರ್'ನಲ್ಲಿ ಕುಣಿದು ಕುಪ್ಪಳಿಸಿದ ಮದುಮಗಳು ಪ್ರಿಯಾಂಕಾ ಛೋಪ್ರಾ

    |

    ಹಾಲಿವುಡ್ ನಲ್ಲಿಯೂ ಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಮದುವೆ ನವೆಂಬರ್ 30 ರಂದು ಜೋಧ್ ಪುರದ ಅರಮನೆಯಲ್ಲಿ ನಡೆಯಲಿದೆ. ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಮದುವೆಗೆ ಇನ್ನೂ ಒಂದು ತಿಂಗಳು ಸಮಯಾವಕಾಶ ಇದೆ.

    ಹೀಗಿರುವಾಗಲೇ, ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಪ್ರಿಯಾಂಕಾ ಛೋಪ್ರಾ ಬಿಜಿಯಾಗಿದ್ದಾರೆ. ಮೊನ್ನೆಯಷ್ಟೇ ನ್ಯೂಯಾರ್ಕ್ ನಲ್ಲಿ ಪ್ರಿಯಾಂಕಾ ಛೋಪ್ರಾ 'ಬ್ರೈಡಲ್ ಶವರ್' ನಡೆಯಿತು.

    ಪ್ರಿಯಾಂಕಾ-ನಿಕ್ ಮದುವೆ ದಿನಾಂಕ ನಿಗದಿ ಆಯ್ತು: ವಿವಾಹ ಎಲ್ಲಿ, ಯಾವಾಗ.?ಪ್ರಿಯಾಂಕಾ-ನಿಕ್ ಮದುವೆ ದಿನಾಂಕ ನಿಗದಿ ಆಯ್ತು: ವಿವಾಹ ಎಲ್ಲಿ, ಯಾವಾಗ.?

    'ಬ್ರೈಡಲ್ ಶವರ್' ನಲ್ಲಿ ಆತ್ಮೀಯ ಗೆಳತಿಯರೊಂದಿಗೆ ಪ್ರಿಯಾಂಕಾ ಛೋಪ್ರಾ ಕುಣಿದು ಕುಪ್ಪಳಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಭಾವಿ ಅತ್ತೆ (ನಿಕ್ ಜೊನಾಸ್ ತಾಯಿ) ಪ್ರಿಯಾಂಕಾ ತಾಯಿ ಕೂಡ ಪಾಲ್ಗೊಂಡಿದ್ದರು. ಎಲ್ಲರೊಂದಿಗೆ ಹಾಡು, ಕುಣಿತ ಹಾಕಿ ಪ್ರಿಯಾಂಕಾ ಸಂತಸ ಪಟ್ಟರು. 'ಬ್ರೈಡಲ್ ಶವರ್'ನಲ್ಲಿ ಬೃಹತ್ ಕೇಕ್ ಕತ್ತರಿಸಿ ಖುಷಿ ಪಟ್ಟರು ನಟಿ ಪ್ರಿಯಾಂಕಾ ಛೋಪ್ರಾ.

    In pics: Priyanka Chopras Bridal shower

    ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ನಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳುಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ನಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳು

    ಅಂದ್ಹಾಗೆ, ಪ್ರಿಯಾಂಕಾ ಛೋಪ್ರಾರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ತಮಗಿಂತ ಹತ್ತು ವರ್ಷ ಕಿರಿಯ ನಿಕ್ ಜೊನಾಸ್ ರನ್ನ ಪ್ರಿಯಾಂಕಾ ಪ್ರೀತಿಸಿ ಮದುವೆ ಆಗುತ್ತಿದ್ದಾರೆ.

    In pics: Priyanka Chopras Bridal shower

    ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದು Met Gala 2017 ರಲ್ಲಿ. ರೆಡ್ ಕಾರ್ಪೆಟ್ ಮೇಲೆ ಇಬ್ಬರು ಒಟ್ಟಿಗೆ ಕ್ಯಾಟ್ ವಾಕ್ ಮಾಡಿದರು. ಇಲ್ಲಿಂದಲೇ, ಇಬ್ಬರ ಪ್ರೀತಿ ಮೊಳಕೆಯೊಡೆದಿದ್ದು ಎನ್ನಲಾಗಿದೆ.

    In pics: Priyanka Chopras Bridal shower

    ಚಿತ್ರಗಳು: 'ತಾರೆ'ಗಳ ತೋಟದಲ್ಲಿ ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ಪಾರ್ಟಿಚಿತ್ರಗಳು: 'ತಾರೆ'ಗಳ ತೋಟದಲ್ಲಿ ಪ್ರಿಯಾಂಕಾ-ನಿಕ್ ಎಂಗೇಜ್ಮೆಂಟ್ ಪಾರ್ಟಿ

    25 ವರ್ಷದ ನಿಕ್ ಜೊನಾಸ್ ಅಮೇರಿಕಾದ ಗಾಯಕ ಹಾಗೂ ನಟ. 'ಕ್ಯಾಂಪ್ ರಾಕ್', 'ಮಿಸ್ಟರ್ ಸನ್ ಶೈನ್', 'ಸ್ಮ್ಯಾಶ್' ಮುಂತಾದ ಟೆಲಿವಿಷನ್ ಫಿಲ್ಮ್ ಗಳಲ್ಲಿ ನಿಕ್ ಜೋನಾಸ್ ಕಾಣಿಸಿಕೊಂಡಿದ್ದಾರೆ. ಗಾಯಕನಾಗಿ ಹಲವಾರು ಆಲ್ಬಂಗಳನ್ನು ನಿಕ್ ಜೊನಾಸ್ ಹೊರತಂದಿದ್ದಾರೆ. ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ನಡುವೆ ಹತ್ತು ವರ್ಷಗಳ ಅಂತರವಿದೆ.

    English summary
    Bollywood Actress Priyanka Chopra officially kickstarted her pre-wedding celebrations with a bridal shower at New York city.
    Wednesday, October 31, 2018, 13:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X