»   » ನಟನೆಗೆ ಬ್ರೇಕ್! ಇಟಲಿ ಬೀಚ್‌ನಲ್ಲಿ ಹಾಟ್ ಬ್ಯೂಟಿ ರಾಧಿಕ ಆಪ್ಟೆ

ನಟನೆಗೆ ಬ್ರೇಕ್! ಇಟಲಿ ಬೀಚ್‌ನಲ್ಲಿ ಹಾಟ್ ಬ್ಯೂಟಿ ರಾಧಿಕ ಆಪ್ಟೆ

Posted By:
Subscribe to Filmibeat Kannada

ಹಾಟ್ ನಟಿ ರಾಧಿಕಾ ಆಪ್ಟೆ ತಮಿಳಿನ 'ಕಬಾಲಿ' ಚಿತ್ರದ ನಂತರ ಹಲವು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಆ ಚಿತ್ರದ ನಂತರ ಅವರ ಅಭಿನಯದ ಯಾವುದೇ ಚಿತ್ರ ಬಿಡುಗಡೆ ಆಗಿಲ್ಲ. ಆದ್ದರಿಂದ ಸಹಜವಾಗೆ ರಾಧಿಕಾ ಎಲ್ಲಿ ಹೋಗ್‌ ಬಿಟ್ರು... ಕಾಣ್ತಾನೆ ಇಲ್ಲವಲ್ಲ ಅನ್ನೋ ಪ್ರಶ್ನೆ ಕಾಡುತಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ.

ರಾಧಿಕಾ ಆಪ್ಟೆ ಸದ್ಯದಲ್ಲಿ ಈಗ ಅಭಿನಯದಿಂದ ಬ್ರೇಕ್ ಪಡೆದಿದ್ದು ರಜೆ ದಿನಗಳನ್ನು ಎಂಜಾಯ್ ಮಾಡಲು ಇಟಲಿಗೆ ತೆರಳಿದ್ದಾರೆ. ಅಲ್ಲಿ ಸ್ನೇಹಿತರೊಂದಿಗೆ ಇಟಲಿಯ ವಾಸ್ತುಶಿಲ್ಪ ಕಲೆ ಮತ್ತು ನವೋದಯ ಕಾಲದ ಶಿಲ್ಪಗಳನ್ನು ನೋಡುತ್ತ ರಜೆಯನ್ನು ಆನಂದಿಸುತ್ತಿದ್ದಾರೆ. ಅಲ್ಲದೇ ಅಲ್ಲಿನ ಬೀಚ್ ಗಳಲ್ಲಿಯೂ ಸುತ್ತಾಡುತ್ತ ಕೂಲ್ ಆಗುತ್ತಿದ್ದಾರೆ. ಅವರ ರಜೆ ದಿನೆಯ ಮಜಾ ಚಿತ್ರಗಳು ಕೆಳಗಿನಂತಿವೆ.

ರಾಧಿಕಾ ಆಪ್ಟೆ

ನಟಿ ರಾಧಿಕಾ ಆಪ್ಟೆ ಇಟಲಿಯ ಟಸ್ಕನಿಗೆ ಟೂರಿಂಗ್ ಹೋಗಿದ್ದು, ಬೀಚ್ ನಲ್ಲಿ ತಣ್ಣನೆಯ ಫೀಲ್ ಪಡೆಯುತ್ತಿದ್ದಾರೆ.

ಇಟಾಲಿಯನ್ ಹಾಲಿಡೇ

ಹಾಟ್ ಬ್ಯೂಟಿ ಒಬ್ಬಳೇ ಹೋಗದೇ ಸ್ನೇಹಿತರೊಂದಿಗೆ ಹೋಗಿದ್ದು ಉತ್ತಮ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

ನವೋದಯ ಶಿಲ್ಪಕಲೆ

ಟಸ್ಕನಿಯ ಧಾರ್ಮಿಕ ಸಂಪ್ರದಾಯದ ನವೋದಯ ಕಾಲದ ಶಿಲ್ಪಕಲೆ ಮತ್ತು ವಾಸ್ತು ಶಿಲ್ಪಕಲೆಯ ದರ್ಶನ ಮಾಡುತ್ತ ಎಂಜಾಯ್ ಮಾಡುತ್ತಿದ್ದಾರೆ.

ಹ್ಯಾಪಿ ಗರ್ಲ್ ರಾಧಿಕಾ ಆಪ್ಟೆ

ಇಟಲಿಯ ವಂಡರ್ ಫುಲ್ ತಾಣಗಳಿಗೆ ಭೇಟಿ ನೀಡುತ್ತಾ ರಾಧಿಕಾ ರಿಲ್ಯಾಕ್ಸ್ ಆಗುತ್ತಿದ್ದಾರೆ.

ಬೀಚ್ ಬೇಬಿ

ಇಟಲಿಯ ಕಡಲ ತೀರಗಳಲ್ಲಿ ಸುತ್ತಾಡುತ್ತ ಫುಡ್ ಐಟೆಮ್ ತಿನ್ನುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಅಭಿನಯಕ್ಕೆ ಬ್ರೇಕ್

ಸಾಮಾನ್ಯವಾಗಿ ತಾರೆಯರು ಆಗಾಗ ನಟನೆಗೆ ಬ್ರೇಕ್ ಕೊಡುತ್ತಿರುತ್ತಾರೆ. ಅಂತೆಯೇ ರಾಧಿಕ ಆಪ್ಟೆ ಸಹ ಈಗ ಅಭಿನಯದಿಂದ ಬ್ರೇಕ್ ಪಡೆದಿದ್ದು ಇಟಲಿಯಲ್ಲಿ ಸುತ್ತಾಡುತ್ತಿದ್ದಾರೆ.

English summary
The beautiful Radhika Apte has headed to Tuscany, Italy and is holidaying with her buddies, enjoying the Renaissance art and architecture of that lovely region. She also hit the beach and was seen basking in the sun.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada