ಚಿತ್ರಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಬೊಂಬೆ ರಿಯಾ ಸೇನ್
''ಬಾಲಿವುಡ್ ನಟಿ ರಿಯಾ ಸೇನ್ ಸದ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ... ತಮ್ಮ ದೀರ್ಘಕಾಲದ ಗೆಳೆಯ ಶಿವಂ ತೆವಾರಿ ಜೊತೆ ರಿಯಾ ಸೇನ್ ಮದುವೆ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ನೆರವೇರಲಿದೆ'' ಎಂದು ಕಳೆದ ಕೆಲ ದಿನಗಳ ಹಿಂದೆಯಷ್ಟೇ ವರದಿ ಆಗಿತ್ತು.
ಆದ್ರೆ, ರಿಯಾ ಸೇನ್ ವಿವಾಹ ಮಹೋತ್ಸವ ಅದಾಗಲೇ ನೆರವೇರಿಬಿಟ್ಟಿದೆ. ಪೂಣೆಯಲ್ಲಿ ಸರಳವಾಗಿ ರಿಯಾ ಸೇನ್-ಶಿವಂ ತೆವಾರಿ ಮದುವೆ ನಡೆದಿದೆ ಎನ್ನಲಾಗಿದೆ. ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ರಿಯಾ ಸೇನ್-ಶಿವಂ ತೆವಾರಿ ವಿವಾಹಕ್ಕೆ ಸಾಕ್ಷಿ ಆಗಿದ್ದರು.
ರಿಯಾ ಸೇನ್-ಶಿವಂ ತೆವಾರಿ ವಿವಾಹ ಮಹೋತ್ಸವದ ಚಿತ್ರಗಳು ನಿಮ್ಮ 'ಫಿಲ್ಮಿಬೀಟ್'ಗೆ ಲಭ್ಯವಾಗಿದೆ... ಒಮ್ಮೆ ನೋಡಿ...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಿಯಾ ಸೇನ್
36 ವರ್ಷ ವಯಸ್ಸಿನ ರಿಯಾ ಸೇನ್, ತಮ್ಮ ಬಾಯ್ ಫ್ರೆಂಡ್ ಶಿವಂ ತೆವಾರಿ ಜೊತೆ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ.

ಬೆಂಗಾಲಿ ಸಂಪ್ರದಾಯ
ಬೆಂಗಾಲಿ ಸಂಪ್ರದಾಯದಂತೆ ರಿಯಾ ಸೇನ್ ಹಾಗೂ ಶಿವಂ ತೆವಾರಿ ವಿವಾಹ ನಡೆದಿದೆ.

ಮದುವೆ ನಡೆದಿದ್ದು ಎಲ್ಲಿ.? ಯಾವಾಗ.?
ಪುಣೆಯಲ್ಲಿ ಅತ್ಯಂತ ಸರಳವಾಗಿ ನಡೆದ ರಿಯಾ ಸೇನ್-ಶಿವಂ ತೆವಾರಿ ಮದುವೆಗೆ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆಯ ಫೋಟೋಗಳನ್ನ ರಿಯಾ ಸೇನ್ ಸಹೋದರಿ ರೈಮಾ ಸೇನ್ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ, ಮದುವೆ ಯಾವಾಗ ಎಲ್ಲಿ ನಡೆಯಿತು ಎನ್ನುವ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಅರಿಶಿನ ಶಾಸ್ತ್ರ
ಮದುವೆಗೂ ಮುನ್ನ ನಡೆದ ಅರಿಶಿನ ಶಾಸ್ತ್ರದಲ್ಲಿ ರಿಯಾ ಸೇನ್-ಶಿವಂ ತೆವಾರಿ ಕಂಗೊಳಿಸಿದ್ದು ಹೀಗೆ....

ರಿಯಾ ಸೇನ್ ಕುರಿತು
ಬಾಲಿವುಡ್ ನಟಿ ಮೂನ್ ಮೂನ್ ಸೇನ್ ಹಾಗೂ ಭರತ್ ದೇವ್ ವರ್ಮಾ ರವರ ಪುತ್ರಿ ರಿಯಾ ಸೇನ್. 1991ರಲ್ಲಿಯೇ 'ವಿಷಕನ್ಯಾ' ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ರಿಯಾ ಸೇನ್ 'ಸ್ಟೈಲ್', 'ಅಪ್ನಾ ಸಪ್ನಾ ಮನಿ ಮನಿ', 'ಪ್ಲಾನ್', 'ಹೇ ಬೇಬಿ' ಸೇರಿದಂತೆ ಹಿಂದಿ, ತಮಿಳು, ತೆಲುಗು, ಬೆಂಗಾಲಿ ಭಾಷೆಯ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











