For Quick Alerts
  ALLOW NOTIFICATIONS  
  For Daily Alerts

  25 ವಸಂತಗಳನ್ನು ಕಂಡ ಸುಂದರಾಂಗ ಸಲ್ಮಾನ್

  By ಜೇಮ್ಸ್ ಮಾರ್ಟಿನ್
  |

  ಬಾಲಿವುಡ್ ನ ಸುರಸುಂದರಾಂಗ ಬಾಡ್ ಬ್ಯಾಯ್ ಸಲ್ಲೂ ಮಿಯಾಗೆ ಇಂದು ಸಂಭ್ರಮದ ದಿನ. ಚಿತ್ರರಂಗ ಪ್ರವೇಶಿಸಿ 25 ವಸಂತಗಳನ್ನು ಕಂಡಿರುವ ಸಲ್ಮಾನ್ ಖಾನ್ ಅವರ ಚಿತ್ರರಂಗ, ವೈಯಕ್ತಿಕ ಬದುಕಿನ ಬದುಕಿನ ಕುತೂಹಲ ಸಂಗತಿಗಳ ಬಗ್ಗೆ ಸಂಕ್ಷಿಪ್ತವಾಗಿ ಇಲ್ಲಿ ನೀಡಲಾಗಿದೆ

  ಸಲ್ಲೂ ಬಗ್ಗೆ ಗುಲ್ಲು ಆಗದ ವಿಷ್ಯ ಶಾಲಾ ದಿನಗಳಲ್ಲಿ ಸಲ್ಲೂ ಅದ್ಭುತ ಈಜುಪಟು ಆಗಿದ್ದರು. ನಂತರ ಕೂಡಾ ಅವರ ಅಂಗ ಸೌಷ್ಟವ ಬೆಳೆಸಲು ಈಜು ಸಹಕಾರಿಯಾಯಿತು. 1988ರಲ್ಲಿ ಬಿವಿ ಹೋ ತೋ ಐಸಾ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರೂ 1989 ರ ಸೂಪರ್ ಹಿಟ್ ಚಿತ್ರ ಮೈನೇ ಪ್ಯಾರ್ ಕಿಯಾ ಅವರ ಪ್ರಥಮ ಚಿತ್ರ ಎನ್ನಬಹುದು.

  ಕಷ್ಟದ ದಿನಗಳಲ್ಲೂ ಸಲ್ಮಾನ್ ಖಾನ್ ತಮ್ಮ ತಂದೆ ಸಲೀಂ ಖಾನ್ ಅವರ ಹೆಸರು ಬಳಸಿಕೊಂಡು ಮೇಲಕ್ಕೇರಲು ಯತ್ನಿಸಲಿಲ್ಲ. ನಿರ್ಮಾಪಕರ ಮುಂದೆ ಕೈಯೊಡ್ಡುತ್ತಾ ಆಡೀಷನ್ ಗಳಲ್ಲಿ ಪಾಲ್ಗೊಂಡಿದ್ದು ಸಲ್ಲೂ ವಿಶೇಷ ಇನ್ನಷ್ಟು ಕುತೂಹಲಕಾರಿ ಸಂಗತಿಗಳು ಇಲ್ಲಿವೆ ಓದಿ...

  ಕರ್ಚೀಫ್ ಬಳಸಲ್ಲ

  ಕರ್ಚೀಫ್ ಬಳಸಲ್ಲ

  ಸಲ್ಮಾನ್ ಖಾನ್ ವಿಶೇಷ mulmul ಬಟ್ಟೆ ಅಥವಾ ಸಾಧಾರಾಣ ಹತ್ತಿಯಿಂದ ಮಾಡಿದ ಬಟ್ಟೆಯನ್ನು ಬಳಸಿ ಮೂಗು ಉಜ್ಜಿಕೊಳ್ಳುತ್ತಾರೆ. ಬೇರೆ ಬಟ್ಟೆಯ ಕರ್ಚೀಫ್(ಕರವಸ್ತ್ರ) ಬಳಸಿ ಅಭ್ಯಾಸವಿಲ್ಲ

  ಮದುವೆ ಬಗ್ಗೆ

  ಮದುವೆ ಬಗ್ಗೆ

  ಹಲವು ಯುವತಿಯರ ಜತೆ ಸಲ್ಮಾನ್ ಹೆಸರು ತಗುಲಿ ಹಾಕಿಕೊಂಡರೂ ಸಲ್ಮಾನ್ ಮಾತ್ರ ಮದುವೆ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದು ಸೋಮಿ ಅಲಿ ಜತೆ ಡೇಟಿಂಗ್ ಮಾಡಿದಾಗ ಮಾತ್ರ

  ಬಾಂದ್ರಾ ಬಾಯ್

  ಬಾಂದ್ರಾ ಬಾಯ್

  ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಮರಗಳು ಕಡಿಮೆಯಾಗಿರುವ ಬಗ್ಗೆ ಅನೇಕ ಸಲ ವ್ಯಥೆ ವ್ಯಕ್ತಪಡಿಸಿರುವ ಸಲ್ಮಾನ್, ಮತ್ತೆ ಮರಗಳನ್ನು ನೆಟ್ಟು ಪರಿಸರ ಉಳಿಸುವ ಯೋಜನೆ ಹಾಕಿಕೊಂಡಿದ್ದಾರೆ.

  ಕ್ಯಾರವಾನ್ ನಲ್ಲೇ ಎಲ್ಲಾ

  ಕ್ಯಾರವಾನ್ ನಲ್ಲೇ ಎಲ್ಲಾ

  ಮನೆಯಿಂದ ಕೆಲವೊಮ್ಮೆ ಶೂಟಿಂಗ್ ಸೆಟ್ ಗೆ ತಡವಾಗಿ ಬರುವ ಸಲ್ಮಾನ್ ಖಾನ್, ಸ್ನಾನ ಮಾಡುವುದು ಸೆಟ್ ಹತ್ತಿರುವ ನಿಲ್ಲಿಸಿದ ತಮ್ಮ ಕ್ಯಾರವಾನ್ ನಲ್ಲೇ ಎಂಬುದು ವಿಶೇಷ

  ದಾನ ಧರ್ಮ

  ದಾನ ಧರ್ಮ

  ದಾನ ಧರ್ಮ ಸಲ್ಮಾನ್ ಖಾನ್ ರಕ್ತಗತವಾಗಿ ಬಂದಿದೆ. ಆಗಾಗ್ಗೆ ರಕ್ತದಾನ ಮಾಡುವ ಸಲ್ಲೂ, ಆಸ್ಪತ್ರೆಗಳಿಗೆ ತೆರಳಿ ತೀವ್ರವಾಗಿ ಕಾಯಿಲೆಗೊಳಗಾಗಿರುವ ಮಕ್ಕಳಿಗೆ ಆರೈಕೆ ಮಾಡುತ್ತಾರೆ. ಕ್ಯಾನ್ಸರ್, ಏಡ್ಸ್ ಪೀಡಿತ ಮಕ್ಕಳಿಗಾಗಿ ಶ್ರಮಿಸುತ್ತಿದ್ದಾರೆ.

  ಇಂಟರ್ನೆಟ್ ಗೊತ್ತಿಲ್ಲ

  ಇಂಟರ್ನೆಟ್ ಗೊತ್ತಿಲ್ಲ

  ಸಲ್ಮಾನ್ ಖಾನ್ ಸ್ವಂತ ಇಮೇಲ್ ಹೊಂದಿಲ್ಲ, ಸಾಮಾಜಿಕ ಜಾಲ ತಾಣಗಳಲ್ಲಿ ವಿಹರಿಸುವುದಿಲ್ಲ. ಅವರ ಪರವಾಗಿ ಅಭಿಮಾನಿಗಳು, ಆಪ್ತರು ಉತ್ತರಿಸುತ್ತಾರೆ ಅಷ್ಟೇ

  ಹಳೆ ಗೆಳತಿಯರು

  ಹಳೆ ಗೆಳತಿಯರು

  ಹಳೆ ಗೆಳೆತಿಯರಾದ ಸೋಮಿ ಅಲಿ, ಸಂಗೀತಾ ಬಿಜಲಾನಿ, ಕತ್ರೀನಾ ಕೈಫ್..ಮುಂತಾದವರ ಜತೆ ಈಗಲೂ ಸಲ್ಮಾನ್ ಖಾನ್ ಸ್ನೇಹ ಮುಂದುವರೆಸಿದ್ದಾರೆ. ಆದರೆ, ಒಬ್ಬ ಅಪ್ರತಿಮ ಸುಂದರಿ ಗೆಳತಿಯೊಬ್ಬಳ ನೆರಳು ಮಾತ್ರ ಸೋಕದಂತೆ ಎಚ್ಚರವಹಿಸಿದ್ದಾರೆ. ಯಾರೆಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ?

  ಪತ್ರಿಕೆ ಓದುವುದಿಲ್ಲ

  ಪತ್ರಿಕೆ ಓದುವುದಿಲ್ಲ

  ಇಂಟರ್ನೆಟ್ ಇರಲಿ, ತಮ್ಮ ಚಿತ್ರಗಳ ಬಗ್ಗೆ ಬಂದಿರುವ ವಿಮರ್ಶೆಗಳನ್ನು ಸಲ್ಮಾನ್ ಓದುವುದಿಲ್ಲ. ಟಿವಿ ಮಾಧ್ಯಮಗಳಲ್ಲಿ ಅಪರೂಪಕ್ಕೆ ಸಂದರ್ಶನ ನೀಡಿದಾಗ ಮಾತ್ರ ಚಿತ್ರದ ಬಗ್ಗೆ ತಿಳಿದಿದ್ದಷ್ಟೇ ಹೇಳುತ್ತಾರೆ.

  ಸಾಫ್ಟ್ ಮನಸು

  ಸಾಫ್ಟ್ ಮನಸು

  ಮುಂಬೈನಲ್ಲಿ ಒಮ್ಮೆ ಸಂಚರಿಸುವಾಗ ಟ್ರಾಫಿಕ್ ಬಳಿ ಕಂಡ ವ್ಯಕ್ತಿಯನ್ನು ಸಲ್ಮಾನ್ ನೋಡುತ್ತಾರೆ. ಆ ವ್ಯಕ್ತಿ ಮುಖದ ಚರ್ಮ ಕಿತ್ತು ಹೋಗಿರುತ್ತದೆ. ತಕ್ಷಣವೇ ಹತ್ತಿರ ಕರೆದು ಆತನನ್ನು ವೈದ್ಯರ ಬಳಿಗೆ ಕರೆದೊಯ್ದು ತಮ್ಮ ಖರ್ಚಿನಲ್ಲೇ ಚಿಕಿತ್ಸೆ ಕೊಡಿಸುತ್ತಾರೆ.

  ಒಂದು ಕೇಳಿದರೆ ನೂರು

  ಒಂದು ಕೇಳಿದರೆ ನೂರು

  ವಾಂಟೆಡ್ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಸ್ಟುಡಿಯೋದಲ್ಲಿ ಕಸ ಗುಡಿಸುವ ಮಹಿಳೆಯೊಬ್ಬರು ತಮ್ಮ ಗೋಳು ತೋಡಿಕೊಂಡು ಒಂದು ಸೀರೆಗಾಗಿ ಸಲ್ಮಾನ್ ರನ್ನು ಕೇಳುತ್ತಾರೆ. ಮರುದಿನ ಸ್ಟುಡಿಯೋದಲ್ಲಿರುವ 35ಕ್ಕೂ ಮಂದಿ ಮಹಿಳಾ ಕೆಲಸಗಾರರಿಗೆ ಹೊಸ ಸೀರೆ ಸಿಗುತ್ತದೆ.

  ಕಡಿಮೆ ವಯಸ್ಸಿನ ಹೀರೋಯಿನ್

  ಕಡಿಮೆ ವಯಸ್ಸಿನ ಹೀರೋಯಿನ್

  ತಮಗಿಂತ ಕಡಿಮೆ ವಯಸ್ಸಿನ ಹೀರೋಯಿನ್ ಜತೆ ನಟಿಸುವಾಗ ಎಂದಿಗೂ ಮುಜುಗರ ಪಟ್ಟುಕೊಳ್ಳದ ಸಲ್ಮಾನ್ ಗೆ ಕಸಿವಿಸಿಯಾದ ಪ್ರಸಂಗ ಕ್ಯೂಂಕಿ ಚಿತ್ರದಲ್ಲಿ ಆಯಿತು. ಕರೀಶ್ಮಾ ಕಪೂರ್ ಜತೆ ನಟಿಸುವಾಗ ಫ್ರಾಕ್ ಹಾಕಿಕೊಂಡು ಓಡೋಡಿ ಬರುತ್ತಿದ್ದ ಅಂದಿನ ಪುಟ್ಟ ಹುಡುಗಿ ಕರೀನಾ ಜತೆ ಈ ಚಿತ್ರದಲ್ಲಿ ನಟಿಸುವಾಗ ಸಲ್ಮಾನ್ ಗೆ ಕಷ್ಟವಾಯಿತಂತೆ

  ಸಲ್ಮಾನ್ ಮರೆಯುವಂಥ ಚಿತ್ರಗಳು

  ಸಲ್ಮಾನ್ ಮರೆಯುವಂಥ ಚಿತ್ರಗಳು

  ಸೂರ್ಯವಂಶಿ (1992), ಎಕ್ ಲಡ್ಕಾ ಎಕ್ ಲಡ್ಕಿ (1992),ಸಂಗ್ಧಿಲ್ ಸನಮ್ (1994),ಚಂದ್ರಮುಖಿ(1993), ದಿಲ್ ತೇರಾ ಆಶಿಖ್ (1993), ಜಾಗೃತಿ (1993) ಈ ಚಿತ್ರಗಳು ಕೇವಲ ಸಲ್ಮಾನ್ ಗಾಗಿ ಮಾಡಿದ ಚಿತ್ರಗಳು ಹಾಗೂ ಬಾಕ್ಸಾಫೀಸ್ ನಲಿ ತೋಪೆದ್ದವು.

  ನಟನೆ ಅಲ್ಲದೆ ಜತೆಗೆ

  ನಟನೆ ಅಲ್ಲದೆ ಜತೆಗೆ

  ನಟನೆ ಜತೆಗೆ ಚಿತ್ರಕಥೆಗೂ ಕೈ ಹಾಕಿದ್ದ ಸಲ್ಮಾನ್ ಅವರು ಬಾಘಿ, ಚಂದ್ರಮುಖಿ ಹಾಗೂ ವೀರ್ ಚಿತ್ರಕ್ಕೆ ಕಥೆ ಒದಗಿಸಿದ್ದರು. ಚಿತ್ರಗಳು ನೆಲಕಚ್ಚಿದ್ದವು

  ನಿರೂಪಕ ಸಲ್ಮಾನ್

  ನಿರೂಪಕ ಸಲ್ಮಾನ್

  ಕಲರ್ಸ್ ವಾಹಿನಿಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಯಶಸ್ವಿ ನಿರೂಪಕರಾದರೂ ಸಲ್ಮಾನ್ ಗೆ ಕೊರಗಿತ್ತು. ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಣೆ ಮಾಡಿರಲಿಲ್ಲ. ಆದರೆ, ಕಳೆದ ವರ್ಷ ಅಪ್ಸರ ಪ್ರಶಸ್ತಿ ಸಮಾರಂಭದಲ್ಲಿ ಆ ಆಸೆ ಕೂಡಾ ತೀರಿತು.

  ವಿಶ್ರಾಂತಿ ಬಯಸುವ ಸಲ್ಮಾನ್

  ವಿಶ್ರಾಂತಿ ಬಯಸುವ ಸಲ್ಮಾನ್

  ಹೊರಾಂಗಣ ಚಿತ್ರೀಕರಣ ಅದರಲ್ಲೂ ಮನೆಯಿಂದ ದೂರ ಎಂದರೆ ಸಲ್ಮಾನ್ ಗೆ ಕಷ್ಟ ಕಷ್ಟ. ಶೂಟಿಂಗ್ ಇಲ್ಲದ ವೇಳೆ ತಮ್ಮ ಫಾರ್ಮ್ ಹೌಸ್ ನಲ್ಲೇ ಸಲ್ಮಾನ್ ನೆಲೆಸುತ್ತಾರೆ.

  ಕಂಪ್ಯೂಟರ್ ಗೆ ಲ್ಯಾಪ್ ಟಾಪ್

  ಕಂಪ್ಯೂಟರ್ ಗೆ ಲ್ಯಾಪ್ ಟಾಪ್

  ದಾನ ಧರ್ಮದಲ್ಲಿ ಎತ್ತಿದ ಕೈ ಎನಿಸಿರುವ ಸಲ್ಮಾನ್ ಖಾನ್ ಅವರ ಮನೆಗೆ ಒಮ್ಮೆ ಮಹಿಳೆಯೊಬ್ಬರು ತಮ್ಮ ಮಗನಿಗೆ ಕಂಪ್ಯೂಟರ್ ಬೇಕೆಂದು ಕೇಳಿದಾಗ, ಸಲ್ಮಾನ್ ಹೇಳಿದ್ದು ಹೀಗೆ "Arey woj jo laptop mujhe kisine diya tha, main kya karoonga uska, inko de do."

  ಅಪ್ಪನ ಭವಿಷ್ಯ

  ಅಪ್ಪನ ಭವಿಷ್ಯ

  ಕನ್ನಡದ ಪ್ರೇಮದ ಕಾಣಿಕೆಗೆ ಕಥೆ ಒದಗಿಸಿದ್ದ ಹೆಸರಾಂತ ಚಿತ್ರ ಸಾಹಿತಿ ಸಲೀಂ ಖಾನ್ ಅವರು ಮಗನ ಬಗ್ಗೆ ಹೇಳಿದ್ದು ಹೀಗೆ" ನಿನ್ನ ಎಲ್ಲಾ ತೊಂದರೆಗಳು ರಾತ್ರಿ 11 ಗಂಟೆಯಿಂದ ಮುಂಜಾನೆ 3 ಗಂಟೆಯೊಳಗೆ ನಡೆಯಲಿದೆ' ಈ ಮಾತು ಹಲವು ಬಾರಿ ನಿಜವಾಗಿದೆ ಕೂಡಾ

  ಕಲೆಗಾರ ಸಲ್ಮಾನ್

  ಕಲೆಗಾರ ಸಲ್ಮಾನ್

  ಸಲ್ಮಾನ್ ಖಾನ್ ನ ಹೆತ್ತ ತಾಯಿ ಸಲ್ಮಾಖಾನ್ ಮೂಲತಃ ಮಹಾರಾಷ್ಟ್ರದ ಡೋಲಾ ರಜಪೂತರ ಜಾತಿಗೆ ಸೇರಿದವರು. ಸಲ್ಮಾಳ ಮೂಲ ಹೆಸರು ಸುಶೀಲಾ ಚರಕ್.

  1964 ರಲ್ಲಿ ಸಲೀಂ ಖಾಖಾನ್ ಮದುವೆಯಾದ ಮೇಲೆ ಮುಸ್ಲಿಂ ಧರ್ಮಕ್ಕೆ ಪರಿವರ್ತನೆಗೊಂಡು ಸಲ್ಮಾ ಆದರು.ನಂತರ ಸಲೀಂ ಖಾನ್ ಹೆಸರಾಂತ ನಟಿ ಮತ್ತು ಅದ್ಭುತ ನೃತ್ಯಗಾರ್ತಿ,ಕ್ಯಾಬೆರಾ ಡ್ಯಾನ್ಸರ್ ಹೆಲೆನ್ ಕೈ ಹಿಡಿದರು.

  ಸೊಗಸಾಗಿ ಚಿತ್ರ ಬಿಡಿಸುವ ಸಲ್ಮಾನ್ ಖಾನ್ ಗೆ ಈ ಕಲೆ ಒಲಿದಿದ್ದು ಅಮ್ಮ ಸಲ್ಮಾ ಅವರಿಂದ ಎಂಬುದು ವಿಶೇಷ

  ಶೆಟ್ಟಿ ಕಂಡರೆ ಭಯ

  ಶೆಟ್ಟಿ ಕಂಡರೆ ಭಯ

  ಬೆಳಗ್ಗೆ ನಿಧಾನವಾಗಿ ಏಳುವ ಅಭ್ಯಾಸ ಸಲ್ಮಾನ್ ಗೆ ರೂಢಿಯಾಗಿದೆ. ವಿದೇಶದಲ್ಲಿ ಒಮ್ಮೆ ಮೌಂಟನ್ ಡ್ಯೂ ಜಾಹೀರಾತು ಶೂಟಿಂಗ್ ನಲ್ಲಿದ್ದಾಗ ಗಡತ್ತಾಗಿ ಸಲ್ಲೂ ನಿದ್ದೆ ಮಾಡಿದ್ದಾರೆ. ಇದರಿಂದ ಕೆರಳಿದ ಸಲ್ಲೂ ವ್ಯವಸ್ಥಾಪಕಿ ರೇಷ್ಮಾ ಶೆಟ್ಟಿ ಸಲ್ಮಾನ್ ಅವರ ಬೆಡ್ ಶಿಟ್ ಕಿತ್ತು ಹಾಕಿ ಜೋರಾಗಿ ಗದರಿಸಿದ್ದಾರೆ. ಸಲ್ಮಾನ್ ಮಾತ್ರ ವಿಧೇಯ ವಿದ್ಯಾರ್ಥಿ ರೀತಿ ತುಟಿ ಪಿಟಕ್ ಎನ್ನದೆ ಎದ್ದು ರೆಡಿ ಆದರಂತೆ. ಸಲ್ಮಾನ್ ಸೋದರಿ ಅಲ್ವಿರಾ ಬಾಲ್ಯದ ಗೆಳತಿ ರೇಷ್ಮಾ ಕಂಡರೆ ಸಲ್ಲೂಗೆ ಭಯ ಭಕ್ತಿ

  ಪ್ರವಾಸ ಪ್ರಿಯ

  ಪ್ರವಾಸ ಪ್ರಿಯ

  ಸಲ್ಮಾನ್ ಗೆ ಪ್ರವಾಸ ಇಷ್ಟ. ಅದರೆ, ಲಂಡನ್ ಗೆ ಹೋಗುವುದೇ ಹೆಚ್ಚು. ಶೂಟಿಂಗ್ ಗೆ ಈ ಮೊದಲು ಮಧ್ಯಾಹ್ನ 2 ಕ್ಕೆ ಬಂದು ಮುಂಜಾನೆ ತನಕ ಇರುತ್ತಿದ್ದ ಸಲ್ಲೂ ಇತ್ತೀಚೆಗೆ ರೇಷ್ಮಾ ಮೇಡಂ ಹುಕುಂ ಪಾಲಿಸಿ ಮಧ್ಯಾಹ್ನ 12ಕ್ಕೆ ಹಾಜರಾಗುತ್ತಿದ್ದಾರಂತೆ

  ಬ್ರೇಸ್ಲೇಟ್ ಮಹಿಮೆ

  ಬ್ರೇಸ್ಲೇಟ್ ಮಹಿಮೆ

  ನೀಲಿ ಹರಳಿನ ಬ್ರೈಸ್ಲೇಟ್ ಹಾಕಿಕೊಳ್ಳದೇ ಮನೆ ಬಿಡೋದಿಲ್ಲ. ಬ್ರೈಸ್ಲೇಟಆನು ಗಿಫ್ಟಾಗಿ ಕೊಟ್ಟಿದ್ದು ಈತನ ಅಂಕಲ್. ಒಂದು ದಶಕಗಳಿಂದ ಸಲ್ಲೂ ಕೈ ಅಲಂಕರಿಸಿದೆ. ಬ್ರೈಸ್ಲೇಟ್ ಬೆಳ್ಳಿ ಚೈನ್ ತುಂಡಾದರೆ ಅದನ್ನು ಸೀದಾ ಮತ್ತೇ ಅಂಕಲ್ಗೆ ಕೊಡುತ್ತಾನೆ. ಅವರೇ ರಿಪೇರಿ ಮಾಡಿಸಿ ಮತ್ತೆ ವಾಪಸ್ ಮಾಡುತ್ತಾರೆ.

  Rambo ಪ್ರೇರಣೆ

  Rambo ಪ್ರೇರಣೆ

  ಸಲ್ಮಾನ್ ಖಾನ್ ಗೆ ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಲ್ಲೋನ್ ಅಂದರೆ ಬಹಳ ಇಷ್ಟ. ಆತನ ಸಿನಿಮಾಗಳನ್ನು ಚಿಕ್ಕವನಾಗಿದಾಗಿಂದಲೇ ತುಂಬಾ ಇಷ್ಟ ಪಟ್ಟು ನೋಡುತ್ತಿದ್ದ. ಸಲ್ಮಾನ್ ಖಾನ್ ಅದೇ ರೀತಿ ಸ್ಟೈಲ್ ಮಾಡುತ್ತಿದ್ದ. ಬಾಡಿ ಬಿಲ್ಡಿಂಗ್ ಹಾಗೂ ಫಿಟ್ನೆಸ್ ಗೆ ಸಿಲ್ವೆಸ್ಟರ್ ಸ್ಟಲ್ಲೋನ್ ಪ್ರೇರಣೆ

  ಫಿಟ್ನೆಸ್ ಮಂತ್ರ

  ಫಿಟ್ನೆಸ್ ಮಂತ್ರ

  ಮೈ ಕಟ್ಟಿನ ಬಗ್ಗೆ ಮೊದಮೊದಲು ಅಸಡ್ಡೆ ಹೊಂದಿದ್ದ ಸುರಸುಂದರಾಂಗ ಸಲ್ಲೂ ವಿಶ್ವದ 7ನೇ ಸುಂದರ ಎನಿಸಿದ ಮೇಲೆ ಸೀರಿಯಸ್ ಆಗಿ ಜಿಮ್ ಗೆ ತೆರಳಲು ಆರಂಭಿಸಿದರು. ದೈನಂದಿನ ದೈಹಿಕ ಕಸರತ್ತು ಇಲ್ಲದೆ ಸಲ್ಲೂ ಬೇರೆ ಕೆಲಸ ಮಾಡುವುದಿಲ್ಲ. ಹೆಲ್ತ್ ಇಸ್ ವೆಲ್ತ್ ಸಲ್ಲೂ ಫಿಟ್ನೆಸ್ ಮಂತ್ರ

  ಐಷಾರಾಮಿ ಸಲ್ಮಾನ್

  ಐಷಾರಾಮಿ ಸಲ್ಮಾನ್

  ಸಲ್ಮಾನ್ ಗೆ ಬಿಎಂಡಬ್ಲ್ಯೂ, ಮರ್ಸಿಡೀಸ್ ಬೆಂಜ್, ಲ್ಯಾಂಡ್ ಕ್ರೂಸರ್ ವಾಹನಗಳೆಂದರೆ ತುಂಬಾ ಇಷ್ಟ. ಐಷಾರಾಮಿ ಕಾರುಗಳ ಒಡೆಯ ಸಲ್ಮಾನ್ ಸಾವಿರ ಕೋಟಿ ರು ಒಡೆಯ ಎನ್ನಲಾಗುತ್ತದೆ

  ನಟನೆ, ನೃತ್ಯ ತರಬೇತಿ

  ನಟನೆ, ನೃತ್ಯ ತರಬೇತಿ

  ಸಲ್ಮಾನ್ ಖಾನ್ ಅವರು ಅನಿಲ್ ಕಪೂರ್, ಸೈಫ್ ಅಲಿ ಖಾನ್ ಹಾಗೂ ಹೃತಿಕ್ ರೋಷನ್ ಗೆ ನಟನೆ, ನೃತ್ಯ ತರಬೇತಿ ನೀಡಿದ್ದಾರೆ ಗೊತ್ತಾ? ಅದೇ ರೀತಿ ಹಿರಿಯ ನಟರಿಂದ ಸಾಕಷ್ಟು ನಟನೆ ಕಲಿತ್ತಿದ್ದೇನೆ ಎಂದು ಸಲ್ಲೂ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

  English summary
  Bollywood super star Salman Khan completes 25 years in the film industry. Here 25 things you didn't know about Salman Khan

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X