ಕರಾವಳಿ ಕುವರಿ ಶಿಲ್ಪಾ ಶೆಟ್ಟಿ ಅರಮನೆ 'ಕಿನಾರೆ'ಯ ಅಂದ-ಚೆಂದ ನೋಡಿದ್ದೀರಾ.?

By Harshitha

Recommended Video

ಶಿಲ್ಪಾ ಶೆಟ್ಟಿ ವಾಸಿಸೋ ಮನೆ, ಮನೆನಾ ಇಲ್ಲ ಅರಮನೆನಾ ...!!! | Filmibeat Kannada

ಒಂದ್ಕಾಲದಲ್ಲಿ ಅವಕಾಶಗಳಿಗಾಗಿ ತಿಣುಕಾಡುತ್ತಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇದೀಗ ಅಕ್ಷರಶಃ ರಾಣಿ. ಕರ್ನಾಟಕದ ಕರಾವಳಿ ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಶಿಲ್ಪಾ ಶೆಟ್ಟಿ ಸದ್ಯ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ನ 'ರಾಜಸ್ಥಾನ ರಾಯಲ್ಸ್' ಕ್ರಿಕೆಟ್ ಟೀಮ್ ನ ಒಡತಿ ಕೂಡ ಆಗಿರುವ ಶಿಲ್ಪಾ ಶೆಟ್ಟಿ ಮುಂಬೈನಲ್ಲಿ ಅತ್ಯಂತ ವಿಲಾಸಿ ಬಂಗಲೆ ಹೊಂದಿದ್ದಾರೆ. ತಮ್ಮ ಅರಮನೆಗೆ 'ಕಿನಾರಾ' ಅಂತ ಹೆಸರಿಟ್ಟಿದ್ದಾರೆ.

ಮುಂಬೈನಲ್ಲಿ ಐಷಾರಾಮಿ ಬಂಗಲೆ ಹೊಂದಿರುವ ಕೆಲವೇ ಕೆಲವು ನಟ-ನಟಿಯರ ಪೈಕಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು. ಹಾಗಾದ್ರೆ, ಮುಂಬೈನ ಕಡಲತಡಿಯಲ್ಲಿರುವ ಶಿಲ್ಪಾ ಶೆಟ್ಟಿಯ 'ಕಿನಾರಾ' ಹೇಗಿದೆ ಅಂತ ನೀವೇ ಕಣ್ತುಂಬಿಕೊಳ್ಳಿ...

'ಕಿನಾರಾ' ವೈಭೋಗ ಹೀಗಿದೆ...

'ಕಿನಾರಾ' ವೈಭೋಗ ಹೀಗಿದೆ...

ಶಿಲ್ಪಾ ಶೆಟ್ಟಿಯ ನಿವಾಸ 'ಕಿನಾರಾ' ಒಳಾಂಗಣ ಇರುವುದು ಹೀಗೆ... ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಒಡೆತನದ ಈ ಮನೆ ಯಾವ ಅರಮನೆಗೆ ತಾನೇ ಕಮ್ಮಿ ಇದೆ ಹೇಳಿ...

ಡೈನಿಂಗ್ ಹಾಲ್

ಡೈನಿಂಗ್ ಹಾಲ್

ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಮನೆಯ ಈ ಡೈನಿಂಗ್ ಹಾಲ್ ಹೋಟೆಲ್ ಅನ್ನೇ ಮೀರಿಸುತ್ತೆ.

ಲಿವಿಂಗ್ ಏರಿಯಾ

ಲಿವಿಂಗ್ ಏರಿಯಾ

'ಕಿನಾರಾ' ಒಳಗೆ ಲಿವಿಂಗ್ ಏರಿಯಾ ವಿಶಾಲವಾಗಿದೆ. ಐಷಾರಾಮಿ ಪೀಠೋಪಕರಣಗಳನ್ನಿಡಲಾಗಿದೆ.

ಕಣ್ಣಿಗೆ ಮುದ ನೀಡುವ ಕಲರ್ ಕಾಂಬಿನೇಶನ್

ಕಣ್ಣಿಗೆ ಮುದ ನೀಡುವ ಕಲರ್ ಕಾಂಬಿನೇಶನ್

'ಕಿನಾರಾ' ಮನೆಯ ಒಳಾಂಗಣ ವಿನ್ಯಾಸವನ್ನ ಅತ್ಯಂತ ಜಾಗರೂಕತೆಯಿಂದ ಮಾಡಲಾಗಿದೆ. ಪೀಠೋಪಕರಣಗಳು ಹಾಗೂ ಗೋಡೆಗಳಿಗೆ ಕಣ್ಣಿಗೆ ಮುದ ನೀಡುವ ಕಲರ್ ಕಾಂಬಿನೇಶನ್ ಬಳಸಲಾಗಿದೆ.

ಮನೆಯೊಳಗೆ ಆಟ-ಪಾಠ

ಮನೆಯೊಳಗೆ ಆಟ-ಪಾಠ

'ಕಿನಾರಾ' ಬೃಹತ್ ಆಗಿದೆ. ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಪುತ್ರ ವಿಯಾನ್ ತನ್ನ ಮುದ್ದಿನ ನಾಯಿ ಮರಿ ಜೊತೆಗೆ ಮನೆಯಲ್ಲೇ ಆಟ ಆಡುತ್ತಾನೆ.

ಹೊರಗೆ ಬಂದರೆ ಸಾಗರ

ಹೊರಗೆ ಬಂದರೆ ಸಾಗರ

ಶಿಲ್ಪಾ ಶೆಟ್ಟಿ ಕುಟುಂಬ ಮನೆಯಿಂದ ಹೊರಗೆ ಬಂದರೆ ಸಾಗರದ ಅಲೆಗಳು ಆಹ್ವಾನ ನೀಡುತ್ತವೆ.

ಹೊರಾಂಗಣ ಹೀಗಿದೆ ನೋಡಿ...

ಹೊರಾಂಗಣ ಹೀಗಿದೆ ನೋಡಿ...

ಸುತ್ತಲು ಹಸಿರು.. ಮಧ್ಯದಲ್ಲಿ ಗಾಜಿನ ಮನೆ.. ಪರಿಸರದ ಸೊಬಗನ್ನು ಸವಿಯಲು ಇದಕ್ಕಿಂತ ಬೇರೇನು ಬೇಕು ಹೇಳಿ...

ಇಷ್ಟದ ಮನೆ ಬಗ್ಗೆ ಶಿಲ್ಪಾ ಶೆಟ್ಟಿ ಹೇಳಿದ್ದೇನು.?

ಇಷ್ಟದ ಮನೆ ಬಗ್ಗೆ ಶಿಲ್ಪಾ ಶೆಟ್ಟಿ ಹೇಳಿದ್ದೇನು.?

''ಸೀ ವ್ಯೂ ಹೊಂದಿರುವ 'ಕಿನಾರೆ' ನನಗ್ಯಾಕೆ ಇಷ್ಟ ಅಂದ್ರೆ, ಸಾಗರದ ಅಲೆಗಳ ಸದ್ದನ್ನ ಕೇಳುತ್ತಲೇ ನಾನು ನಿದ್ದೆಗೆ ಜಾರುತ್ತೇನೆ'' ಎಂದು ಸಂದರ್ಶನವೊಂದರಲ್ಲಿ ನಟಿ ಶಿಲ್ಪಾ ಶೆಟ್ಟಿ ಹೇಳಿದ್ದರು.

ಮನೆ ಮೇನ್ಟೇನ್ ಮಾಡುವುದು ಕಷ್ಟ

ಮನೆ ಮೇನ್ಟೇನ್ ಮಾಡುವುದು ಕಷ್ಟ

'ಕಿನಾರಾ' ನೋಡಲು ಎಷ್ಟು ಚೆನ್ನಾಗಿದ್ಯೋ, ಅದನ್ನ ಮೇನ್ಟೇನ್ ಮಾಡುವುದು ಅಷ್ಟೇ ಕಷ್ಟ ಎನ್ನುತ್ತಾರೆ ನಟಿ ಶಿಲ್ಪಾ ಶೆಟ್ಟಿ

ಹ್ಯಾಪಿ ಫ್ಯಾಮಿಲಿ

ಹ್ಯಾಪಿ ಫ್ಯಾಮಿಲಿ

2009 ರಲ್ಲಿ ಉದ್ಯಮಿ ರಾಜ್ ಕುಂದ್ರಾ ರನ್ನ ನಟಿ ಶಿಲ್ಪಾ ಶೆಟ್ಟಿ ಮದುವೆ ಆದರು. ಈ ದಂಪತಿಗೆ ವಿಯಾನ್ ಎಂಬ ಪುತ್ರನಿದ್ದಾನೆ.

More from Filmibeat

English summary
Have a look at Bollywood Actress Shilpa Shetty's home in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X