»   » ಗ್ಲಾಮರ್ ಡ್ಯಾನ್ಸರ್ ಶ್ವೇತಾ ಮದುವೆ ಸಂಭ್ರಮದ ಕ್ಷಣಗಳು

ಗ್ಲಾಮರ್ ಡ್ಯಾನ್ಸರ್ ಶ್ವೇತಾ ಮದುವೆ ಸಂಭ್ರಮದ ಕ್ಷಣಗಳು

Posted By:
Subscribe to Filmibeat Kannada

ಹಿಂದಿ ಕಿರುತೆರೆ, ಭೋಜ್ ಪುರಿ ನಟಿ, ಜನಪ್ರಿಯ ಡ್ಯಾನ್ಸರ್ ಶ್ವೇತಾ ತಿವಾರಿ ಮತ್ತೆ ಮದುವೆಯಾಗಿದ್ದಾರೆ. ಬಾಲ್ಯದ ಗೆಳೆಯ ನಟ ಅಭಿನವ್ ಕೊಹ್ಲಿ ಅವರರ ಕೈ ಹಿಡಿದಿದ್ದಾರೆ. ಕಳೆದ ಮೂರೂವರೆ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಜು.13 ರಂದು ವಿವಾಹ ಬಂಧನಕ್ಕೊಳಪಟ್ಟ ಈ ಜೋಡಿ ಜು.17 ರಂದು ಬೆಂಗಳೂರಿನಲ್ಲಿ ಮದುವೆ ಆರತಕ್ಷಕೆ ಇಟ್ಟುಕೊಂಡಿದೆ.

ಹಿಂದಿ ಕಿರುತೆರೆ ಗ್ಲಾಮರ್ ಲುಕ್ ನೀಡಿದ ಶ್ವೇತಾ ತಿವಾರಿ, ಕಿರುತೆರೆ ರಾಣಿಯಾಗಿ ಮೆರೆದವರು. ಬಿಗ್ ಬಾಸ್ 4 ನಲ್ಲಿ ಗೆಲುವು. ನಚ್ ಬಲಿಯೆ 2 ನಲ್ಲಿ ಡ್ಯಾನ್ಸಿಂಗ್ ಝಲಕ್ ತೋರಿಸಿದ ಶ್ವೇತಾ, ತನ್ನ ಗ್ಲಾಮರ್ ಇಮೇಜ್ ಅನ್ನು ಉಳಿಸಿಕೊಂಡಿದ್ದಾರೆ. ಇಸ್ ಜಂಗಲ್ ಸೆ ಮುಜೆ ಬಚಾವೋ ರಿಯಾಲಿಟಿ ಶೋನಲ್ಲಿ ತುಂಡುಡುಗೆ ಉಟ್ಟು ಸ್ನಾನ ಮಾಡಿ ಸುದ್ದಿ ಮಾಡಿದ್ದ ಶ್ವೇತಾ ನಿಧಾನವಾಗಿ ಬಾಲಿವುಡ್ ನ ಅಂಗಳದಲ್ಲಿ ಅರಳಿದ ಪ್ರತಿಭೆ. ಭೋಜ್ ಪುರಿಯಲ್ಲಂತೂ ಶ್ವೇತಾ ಸ್ಟಾರ್ ನಟಿ ಎಂಬುದರಲ್ಲಿ ಎರಡು ಮಾತಿಲ್ಲ.

ಜುಲೈ ತಿಂಗಳಿನಲ್ಲಿ ಮದುವೆಯಾಗುತ್ತಿರುವುದನ್ನು ನಟಿ ಶ್ವೇತಾ 'ಝಲಕ್ ದಿಕ್ ಲಾಜಾ' ಕಾರ್ಯಕ್ರಮದಲ್ಲಿ ಘೋಷಿಸಿದ್ದರು. ಆ ಸಂದರ್ಭ ಶ್ವೇತಾ ಮಗಳು ಪಾಲಕ್ ಮತ್ತು ಭಾವಿ ಪತಿ ಅಭಿನವ್ ಉಪಸ್ಥಿತರಿದ್ದರು.

ಅಂದ ಹಾಗೆ, ಇದು ಶ್ವೇತಾಗೆ ಇದು 2ನೇ ಮದುವೆ. ಮೊದಲ ಪತಿ ನಟ ರಾಜಾ ಚೌಧರಿ. ಮದುವೆಯಾಗಿ ಏಳು ವರ್ಷದ ನಂತರ ಇವರಿಬ್ಬರ ಸಂಬಂಧ ಮುರಿದು ಬಿದ್ದಿತ್ತು. ಕೌಟುಂಬಿಕ ದೌರ್ಜನ್ಯದ ಕಾರಣ ನೀಡಿ 2012ರ ಅಕ್ಟೋಬರ್ ನಲ್ಲಿ ವಿಚ್ಛೇದನ ನೀಡಿದ್ದರು. ಬಿಗ್ ಬಾಸ್ ನೋಡಿದವರಿಗೆ ಈ ಕಥೆಗೊತ್ತೇ ಇರುತ್ತದೆ. ಯಾಕ್ ಬಿಡಿ ಈಗ ಹಳೆ ಕಥೆ,. ಶ್ವೇತಾ ಹೊಸ ದಾಂಪತ್ಯಕ್ಕೆ ಕಾಲಿಟ್ಟ ಕ್ಷಣಗಳನ್ನು ಆನಂದಿಸಿ...

ಬಾಲ್ಯದ ಗೆಳೆಯ ಅಭಿನವ್

ಬಾಲ್ಯದ ಗೆಳೆಯ ಅಭಿನವ್ ಕೊಹ್ಲಿ ಜೊತೆ ವಿವಾಹಕ್ಕೆ ಬಂಧನಕ್ಕೆ ಮುನ್ನ ಶ್ವೇತಾ ತಿವಾರಿ

ಶ್ವೇತಾ ಸುಂದರಿ


ಮೊದಲ ಪತಿ ನಟ ರಾಜಾ ಚೌಧರಿ ಅವರಿಂದ ಪಲಕ್ ಎಂಬ ಪುತ್ರಿಯನ್ನು ಶ್ವೇತಾ ತಿವಾರಿ ಹೊಂದಿದ್ದಾರೆ

ಮೆಹಂದಿ ವೈಭವ

ಭೋಜ್ ಪುರಿ ಸೂಪರ್ ಸ್ಟಾರ್ ಮನೋಜ್ ತಿವಾರಿ ಜೊತೆ ಪ್ರೇಮಿಗಳು

ಆಕರ್ಷಕ ಉಡುಪು

ಅನಾರ್ಕಲಿ ಲೆಹಂಗಾ ತೊಟ್ಟ ನಟಿ ಶ್ವೇತಾ ತಿವಾರಿ

ಹೊಸ ಕುಟುಂಬ

ಶ್ವೇತಾ, ಅಭಿನವ್ ಜೊತೆ ಪುತ್ರಿ ಪಲಕ್ ಹಾಗೂ ಭೋಜ್ ಪುರಿ ನಟ, ಗಾಯಕ್ ಮನೋಜ್ ತಿವಾರಿ..ಮದುವೆ ಚಿತ್ರಗಳನ್ನು ನಿರೀಕ್ಷಿಸಿ..

ಶ್ವೇತಾ ಗೆಳತಿ

ಶ್ವೇತಾ ಅವರ ಪರ್ವರೀಷ್ ಸೀರಿಯಲ್ ಸಹ ನಟೀ ಬರ್ಖಾ ಸೇನ್ ಗುಪ್ತಾ ಹಾಗೂ ಇಂದ್ರನೀಲ್ ಸೇನ್ ಗುಪ್ತಾ

ಶ್ವೇತಾ ಸಂಗೀತ್ ಸಮಾರಂಭ

ಕಾಮಿಡಿಯನ್ ಭಾರತಿ ಹಾಗೂ ಜಯಂತಿ ಭಾಟಿಯಾ ಶ್ವೇತಾ ಸಂಗೀತ್ ಸಮಾರಂಭದಲ್ಲಿ

ಶ್ವೇತಾ ಸ್ನೇಹಿತರು

ಶ್ವೇತಾ ಸಂಗೀತ್ ಸಮಾರಂಭದಲ್ಲಿ ಕರಣ್ ವೀರ್ ಬೊಹ್ರಾ ಹಾಗೂ ಆತನ ಗೆಳತಿ

ಹೊಸ ದಂಪತಿ

ಮುಂಬೈನಲ್ಲಿ ನಡೆದ ಉತ್ತರ ಭಾರತೀಯ, ಪಂಜಾಬಿ ಶೈಲಿ ಮದುವೆ

ಹೊಸ ದಂಪತಿ

ಮುಂಬೈನಲ್ಲಿ ನಡೆದ ಉತ್ತರ ಭಾರತೀಯ, ಪಂಜಾಬಿ ಶೈಲಿ ಮದುವೆಯಲ್ಲಿ ಶ್ವೇತಾ -ಅಭಿನವ್

ಮುಖ್ಯ ಅತಿಥಿ

ಶ್ವೇತಾ -ಅಭಿನವ್ ಮದುವೆಯಲ್ಲಿ ಮುಖ್ಯ ಅತಿಥಿಯಾಗಿ ಮನೋಜ್ ತಿವಾರಿ

ಬಿಗ್ ಬಾಸ್ ಗೆಳತಿ

ನಟಿ ಶ್ವೇತಾ ತಿವಾರಿ ಬಿಗ್ ಬಾಸ್ 4ರ ವಿಜೇತೆಯಾದರೆ, ಊರ್ವಶಿ ಡೋಲಾಕಿಯಾ ಬಿಗ್ ಬಾಸ್ 6ರ ವಿಜೇತೆಯಾಗಿದ್ದರು.

ಟಿವಿ ತಾರೆ ರಾಜೇಶ್ವರಿ

ಶ್ವೇತಾ -ಅಭಿನವ್ ಮದುವೆಯಲ್ಲಿ ಟಿವಿ ತಾರೆ ರಾಜೇಶ್ವರಿ

ದಂಪತಿಯ ನಗು

ಮುಂಬೈನಲ್ಲಿ ಸಂಗೀತ್, ಮದುವೆ ಸಮಾರಂಭದ ನಂತರ ನೂತನ ದಂಪತಿ ಬೆಂಗಳೂರಿಗೆ ಆಗಮಿಸಿ, ಜು.17ರಂದು ಆರತಕ್ಷತೆ ನೀಡಲಿದ್ದಾರೆ.

ರೂಪಾಲಿ ಗಂಗೂಲಿ

ಶ್ವೇತಾ ತಿವಾರಿ ಅಭಿನಯಿಸಿದ ಪರ್ವರೀಷ್ ನ ಸಹ ನಟಿ ರೂಪಾಲಿ ಗಂಗೂಲಿ

ಶುಭ ಹಾರೈಕೆ

ನೂತನ ದಂಪತಿಗಳಿಗೆ ಬಾಲಿವುಡ್, ಭೋಜ್ ಪುರಿ ಸೇರಿದಂತೆ ಕಿರುತೆರೆಯ ಧಾರಾವಾಹಿ ಹಾಗೂ ಡ್ಯಾನ್ಸಿಂಗ್ ರಿಯಾಲಿಟಿ ಶೋನ ಅನೇಕ ಸಿಬ್ಬಂದಿ ಶುಭ ಹಾರೈಸಿದ್ದಾರೆ.

English summary
Shweta Tiwari has tied the knot with her boyfriend Abhinav Kohli in Mumbai on 13th July. The Sangeet and Mehandi Ceremony took place on the previous day. The reception is said to take place on 17th in Bangalore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada