»   » ಚಿತ್ರಗಳು: 27 ತರಹೇವಾರಿ ಬಿಕಿನಿಯಲ್ಲಿ ಸನ್ನಿಯ ಸೊಗಸು

ಚಿತ್ರಗಳು: 27 ತರಹೇವಾರಿ ಬಿಕಿನಿಯಲ್ಲಿ ಸನ್ನಿಯ ಸೊಗಸು

By: ಸೋನು ಗೌಡ
Subscribe to Filmibeat Kannada

ಯಾವುದೇ ಒಂದು ಸಿನಿಮಾದಲ್ಲಿ ಒಬ್ಬ ನಟಿ ಬಿಕಿನಿಯಲ್ಲಿ ಕಾಣಿಸಿಕೊಳ್ಳೋದು ಅಬ್ಬಾಬ್ಬ ಅಂದ್ರೆ ಒಂದೋ ಎರಡು ಸಲ. ಅದ್ರಲ್ಲೂ ಬಾಲಿವುಡ್ ನಲ್ಲಾದರೆ, ಹೆಚ್ಚೆಂದರೆ, ಮೂರರಿಂದ ನಾಲ್ಕು ಬಾರಿ ಕಾಣಿಸಿಕೊಳ್ಳಬಹುದು. ಆದರೆ ಬರೋಬ್ಬರಿ 27 ಬಾರಿ ಬಿಕಿನಿ ಹಾಕಿ ರೆಕಾರ್ಡ್ ಮಾಡಿದ್ದು ಅಂದ್ರೆ, ಬಿಟೌನ್ ತಾರೆ ಸನ್ನಿ ಲಿಯೋನ್.

ಇದಪ್ಪಾ ವರಸೆ ಅಂದ್ರೆ, ಬರೀ ಬೀಚ್ ಸೀನ್ ನಲ್ಲೋ, ಐಟಂ ಸಾಂಗ್ ನಲ್ಲೋ ಅಥವಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿಕಿನಿ ಧರಿಸಿ ಪಡ್ಡೆ ಹೈಕಳ ಮೈ ಬೆಚ್ಚಗಾಗಿಸೋದು ಇದ್ದೇ ಇರುತ್ತೆ. ಆದರೆ ನಟಿ ಸನ್ನಿ ಲಿಯೋನ್ ಅವರು ತಮ್ಮ ಮುಂಬರುವ ಸಿನಿಮಾ 'ಮಸ್ತಿಝಾದೆ'ಯಲ್ಲಿ ಭರ್ಜರಿ 27 ಬಾರಿ ಬಿಕಿನಿ ಧರಿಸಿ ಸುದ್ದಿ ಆಗಿದ್ದಾರೆ.[ತಾಯ್ತನದ ಸುಖ ಅನುಭವಿಸಲು ಸನ್ನಿ ಲಿಯೋನ್ ಸಿದ್ಧ!]

ನಿರ್ದೇಶಕ ಮಿಲಪ್ ಝವೇರಿ ನಿರ್ದೇಶನದ ಈ ಅಡಲ್ಟ್ ಕಾಮಿಡಿ ಸಿನಿಮಾ ಇದೇ ತಿಂಗಳು ಜನವರಿ 29 ರಂದು ತೆರೆ ಕಾಣುತ್ತಿದ್ದು, ನಟಿ ಸನ್ನಿ ಲಿಯೋನ್ ಅವರು ಇದೇ ಮೊದಲ ಬಾರಿಗೆ ಡಬಲ್ ರೋಲ್ ನಲ್ಲಿ ಮಿಂಚಿದ್ದಾರೆ.

ಈ ಸಿನಿಮಾದಲ್ಲಿ ಕಾಮಿಡಿಯ ಲೆವೆಲ್ ಹೇಗಿದೆಯೋ ಗೊತ್ತಿಲ್ಲ ಆದರೆ ಮಾದಕ ಬೆಡಗಿ ಸನ್ನಿ ಲಿಯೋನ್ ಅವರ ತರಹೇವಾರಿ ಬಿಕಿನಿಗಳು ಮಾತ್ರ ಸಖತ್ ಹೈಲೈಟ್ ಆಗಿವೆ. ಸನ್ನಿ ಬಿಕಿನಿ ಸ್ಟೈಲ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

27 ಬಾರಿ ಬಿಕಿನಿ ಧರಿಸಲು ಕಷ್ಟ ಅನಿಸಲಿಲ್ಲ

ಇಷ್ಟೊಂದು ಸಲ ಬಿಕಿನಿ ಧರಿಸಿಕೊಂಡು ಅದರಲ್ಲೂ ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಕಷ್ಟ ಆಗಿಲ್ವಾ?, ಎಂಬ ಪ್ರಶ್ನೆಗೆ ಸನ್ನಿಯ ಉತ್ತರ ಕೂಡ ಅವರಂತೆ ತುಂಬಾ ಹಾಟ್ ಆಗಿತ್ತು. 'ಹಾಗೇನೂ ಅನಿಸಲಿಲ್ಲ, ಆದರೆ ವೀಕ್ಷಕರು ನನ್ನನ್ನು 24 ಘಂಟೆ ಬಿಕಿನಿಯಲ್ಲಿ ನೋಡಲು ಇಷ್ಟಪಡುತ್ತಾರೆ. ಆದರೆ ಜಗತ್ತು ನೋಡುವಂತೆ ನಾನು ಆ ಥರ ಇಲ್ಲ. ಜನ ನಿರೀಕ್ಷಿಸಿದಾಗಲೆಲ್ಲ ನನಗೆ ನಟಿಸಲು ಸಂಕಟವಾಗುತ್ತದೆ' ಎಂದು ಸನ್ನಿ ನುಡಿದಿದ್ದಾರೆ.[ಸನ್ನಿ ಜೊತೆ ಸೃಜಾ 'ಹಾಟ್' ಫೋಟೋ ಶೂಟ್]

ನೀಲಿತಾರೆ ಪಟ್ಟ ಕಳೆದ ಮೇಲೆ ಅಡಲ್ಟ್ ಇಮೇಜ್ ನಿಂದ ಹೊರಬರಬಹುದಿತ್ತಲ್ವಾ?

'ಮಾಜಿ ನೀಲಿತಾರೆ ಆದ ಮೇಲೂ ಇನ್ನಾದರೂ ಅಡಲ್ಟ್ ಇಮೇಜ್ ನಿಂದ ಹೊರಬರಬಹುದಿತ್ತಲ್ವಾ ಎಂಬ ಪ್ರಶ್ನೆಗೆ ಸನ್ನಿ ಉತ್ತರ ಹೀಗಿದೆ. 'ಸ್ಟೋರಿ ತುಂಬಾ ಇಂಟರೆಸ್ಟಿಂಗ್ ಅಂತ ಅನ್ನಿಸ್ತು. ಸ್ಕ್ರಿಪ್ಟ್ ಓದಿ ನಕ್ಕು ಖುಷಿ ಆದ್ಮೇಲೆ 'ಮಸ್ತಿಝಾದೆಗೆ ಒಪ್ಪಿಕೊಂಡೆ' ಎನ್ನುತ್ತಾರೆ ಸನ್ನಿ.[ಸನ್ನಿ ಕಾಂಡೋಮ್ ಜಾಹೀರಾತಲ್ಲಿ ಕಾಣಿಸಿಕೊಂಡ್ರೆ ರೇಪ್ ಹೆಚ್ಚತ್ತಾ?]

ಸೆನ್ಸಾರ್ ಕತ್ತರಿ

ಅಂದಹಾಗೆ ಈ ಸಿನಿಮಾ ಜನವರಿ 29 ರಂದು ಬಿಡುಗಡೆ ಆಗುತ್ತಿದ್ದು, ತಮ್ಮ 27 ಬಿಕಿನಿ ಸೀನ್ ಗಳಲ್ಲಿ ಯಾವ ಯಾವ ಸೀನ್ ಗೆ ಸೆನ್ಸಾರ್ ಮಂಡಳಿಯಿಂದ ಕತ್ತರಿ ಬೀಳುತ್ತೆ ಅನ್ನೋ ಭಯ ಕೂಡ ಸನ್ನಿ ಅವರನ್ನು ಆವರಿಸಿಕೊಂಡಿದೆಯಂತೆ.

ಟ್ರೈಲರ್ ಸೂಪರ್ ಹಿಟ್ (1 ಕೋಟಿ ಜನ ವೀಕ್ಷಣೆ)

ನಟ ತುಷಾರ್ ಕಪೂರ್, ವೀರ್ ದಾಸ್, ಸನ್ನಿ ಲಿಯೋನ್, ವಿಶೇಷ ಪಾತ್ರದಲ್ಲಿ ರಿತೇಶ್ ದೇಶ್ ಮುಖ್, ಸುಶ್ಮಿತಾ ಮುಖರ್ಜಿ, ವಿವೇಕ್ ವಾಸ್ವಾನಿ, ಸುರೇಶ್ ಮೆನನ್, ಶಾದ್ ರಾಂಧ್ವಾ, ಅಸ್ರಾನಿ ಮುಂತಾದವರು ಮಿಂಚಿರುವ ಈ ಸಿನಿಮಾದ ಟ್ರೈಲರ್ ಈಗಾಗಲೇ ಸಖತ್ ಹಿಟ್ ಆಗಿದ್ದು ಸುಮಾರು 1 ಕೋಟಿ ಜನ ವೀಕ್ಷಿಸಿದ್ದಾರೆ.

ಬಿಕಿನಿಯಲ್ಲಿ ಕಾರ್ ತೊಳಿಯುತ್ತಿರುವ ಸನ್ನಿ ಸೂಪರ್

ಬೀಚ್ ಬಳಿ ಮಾದಕ ನಟಿ ಸನ್ನಿ ಲಿಯೋನ್ ಅವರು ಕಪ್ಪು ಮತ್ತು ಮೆರೂನ್ ಕಲರ್ ಬಿಕಿನಿ ಧರಿಸಿ ಕಾರ್ ತೊಳಿಯುವ ಸಂದರ್ಭದಲ್ಲಿ ಮಾದಕವಾಗಿ ಮಿಂಚಿರುವ ಪರಿ ಇದು.

ತುಷಾರ್ ಕಪೂರ್ ಜೊತೆ ಸನ್ನಿ ಮಸ್ತಿ

ನಿರ್ದೇಶಕ ಮಿಲಪ್ ಝವೇರಿ ಆಕ್ಷನ್-ಕಟ್ ಹೇಳಿರುವ 'ಮಸ್ತಿಝಾದೆ' ಸಿನಿಮಾದಲ್ಲಿ ತುಷಾರ್ ಕಪೂರ್ ಮತ್ತು ವೀರ್ ದಾಸ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿ ಸನ್ನಿ ಅವರು ನಟ ತುಷಾರ್ ಕಪೂರ್ ಅವರ ಜೊತೆ ಮಸ್ತಿ ಮಾಡುತ್ತ ನೀಡಿದ ಹಾಟ್ ಪೋಸ್.

ಸ್ವಿಮ್ಮಿಂಗ್ ಫುಲ್ ನಲ್ಲಿ ಸನ್ನಿ ಪೋಟೋ ಶೂಟ್

'ಮಸ್ತಿಝಾದೆ' ಚಿತ್ರೀಕರಣದ ಸಂದರ್ಭದಲ್ಲಿ ಸ್ವಿಮ್ಮಿಂಗ್ ಫುಲ್ ನಲ್ಲಿ ನಟಿ ಸನ್ನಿ ಲಿಯೋನ್ ಅವರ ಪಿಂಕ್ ಬಿಕಿನಿಯಲ್ಲಿ ಹಾಟ್ ಪೋಟೋ ಶೂಟ್.

ಲಿಲ್ಲಿ ಪಾತ್ರದಲ್ಲಿ ಸನ್ನಿ

ಈ ಸಿನಿಮಾದಲ್ಲಿ ಸನ್ನಿ ಅವರು ದ್ವಿಪಾತ್ರದಲ್ಲಿ ಮಿಂಚಿದ್ದು, ಒಂದು ಶೇಡ್ ನಲ್ಲಿ ಸನ್ನಿ ಅವರು ಮಸ್ತ್ ಹಾಟ್ ಆಗಿ ಕಾಣಿಸಿಕೊಂಡರೆ ಇನ್ನೊಂದು ಶೇಡ್ ನಲ್ಲಿ ಫುಲ್ ಕಾಮಿಡಿ ರೋಲ್ ನಲ್ಲಿ ಸನ್ನಿ ಲಿಲ್ಲಿಯಾಗಿ ಮಿಂಚಿದ್ದಾರೆ.

ಬೀಚ್ ನಲ್ಲಿ ಸನ್ನಿ ಸಖತ್ ಹಾಟ್

ಬೀಚ್ ನಲ್ಲಿ ಮಾದಕ ನಟ ಸನ್ನಿ ಲಿಯೋನ್ ಅವರು ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿರೋದು ಹೀಗೆ.

ಇವಿಷ್ಟು ಸ್ಯಾಂಪಲ್ ಅಷ್ಟೆ

ಸದ್ಯಕ್ಕೆ ನಮಗೆ ಸಿಕ್ಕಿರುವ ನಟಿ ಸನ್ನಿ ಲಿಯೋನ್ ಅವರು ತರಹೇವಾರಿ ಬಿಕಿನಿ ಧರಿಸಿರುವ ಪೋಟೋಗಳ ಸ್ಯಾಂಪಲ್ಸ್ ಇಷ್ಟು. ಇನ್ನು 27 ಥರದ ಬಿಕಿನಿ ನೋಡಲು ಜನವರಿ 29 ಸಿನಿಮಾ ಬಿಡುಗಡೆ ಆಗುವ ತನಕ ಕಾಯಲೇಬೇಕು.

Read in English:
English summary
Sunny Leone will next be seen in the movie "Mastizaade", in which the actress will don as many as 27 different bikinis. It has been reported that Sunny was informed by her stylist that she would have to attain perfect bikini body for "Mastizaade" and this left the hot diva almost teary-eyed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada