»   » ಫೋಟೋ ಗ್ಯಾಲರಿ: ವಧು ಪೂಜೆಯಲ್ಲಿ ಮಿಂಚಿದ ಕೃಷ್ಣ ಸುಂದರಿ ಬಿಪಾಶಾ

ಫೋಟೋ ಗ್ಯಾಲರಿ: ವಧು ಪೂಜೆಯಲ್ಲಿ ಮಿಂಚಿದ ಕೃಷ್ಣ ಸುಂದರಿ ಬಿಪಾಶಾ

By: ಸೋನು ಗೌಡ
Subscribe to Filmibeat Kannada

ಬಿಟೌನ್ ನಲ್ಲಿ ಈಗಿನಿಂದಲೇ ಮದುವೆ ಸಂಭ್ರಮ ಶುರುವಾಗಿ ಬಿಟ್ಟಿದೆ. ಹೌದು ಹಾಟ್ ಕಪಲ್ ಗಳಾದ ಬಿಪಾಶಾ ಬಸು ಮತ್ತು ಕರಣ್ ಗ್ರೋವರ್ ಸಿಂಗ್ ಅವರ ಮದುವೆಯ ಮುಂಚಿನ ದಿನದ ಶಾಸ್ತ್ರಗಳು ನಡೆಯುತ್ತಿದ್ದು, ವಧು ಪೂಜೆ, ವರ ಪೂಜೆ ಅಂತ ಒಂದೊಂದು ಕಾರ್ಯಕ್ರಮಗಳು ಶುರುವಾಗಿ ಬಿಟ್ಟಿದೆ.

ಮದುವೆಗೆ ಮುಂಚಿನ ಶಾಸ್ತ್ರಗಳು ಮುಂಬೈನಲ್ಲಿರುವ ಬಿಪಾಶಾ ಬಸು ಅವರ ಮನೆಯಲ್ಲಿ ಏಪ್ರಿಲ್ 28 ರಂದು ಭರ್ಜರಿಯಾಗಿ ನಡೆದಿದೆ. ಕೃಷ್ಣ ಸುಂದರಿ ಬಿಪಾಶಾ ಬಸು ಅವರು ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಲಕ ಲಕ ಮಿಂಚುತ್ತಿದ್ದರೆ, ಕರಣ್ ಸಿಂಗ್ ಗ್ರೋವರ್ ಅವರು ಬಿಳಿ ಬಣ್ಣದ ಕುರ್ತಾ ಪೈಜಾಮ ಧರಿಸಿದ್ದರು.['EX' ಬಾಯ್ ಫ್ರೆಂಡ್ ಗಳಿಗೆ ಮದುವೆ ಕಾರ್ಡ್ ಕೊಡೋಲ್ವಂತೆ ಬಿಪ್ಸ್]

In Pics: Wedding Pooja Of Bipasha Basu & Karan Singh Grover

ಬಿಪಾಶಾ ಬಸು ಅವರ ಮದುವೆ ಬೆಂಗಾಲಿ ಶೈಲಿಯಲ್ಲಿ ನಡೆಯಲಿದ್ದು, ಸಂಪ್ರದಾಯದಂತೆ ಬಿಪಾಶಾ ಅವರು ವಧು ಪೂಜೆ ಶಾಸ್ತ್ರದಲ್ಲಿ ತಲೆಯಲ್ಲಿ 'ಮುಕುಟ'ವನ್ನು ತೊಟ್ಟಿದ್ದರು. ಆ ಮುಕುಟಕ್ಕೆ ಬಿಪಾಶಾ ಬಸು ಅವರ ತಂದೆ ಹಿರಾಕ್ ಬಸು ಅವರು ಪೂಜೆ ಸಲ್ಲಿಸಿದರು.

ಪೂಜೆ ಕಾರ್ಯಕ್ರಮದಲ್ಲಿ ಬಿಪಾಶಾ ಬಸು ಮತ್ತು ಕರಣ್ ಅವರ ಆಪ್ತರು ಮಾತ್ರ ಭಾಗವಹಿಸಿದ್ದು, ಕರಣ್ ಅವರ ಫಿಟ್ ನೆಸ್ ಗುರು ಡೆನ್ನಿ ಪಾಂಡೆ, ಡಿಸೈನರ್ ರಾಕಿ ಎಸ್ ಮತ್ತು ನಿರ್ಮಾಪಕ ಸುಜಾನೆ ಅವರು ಪಾಲ್ಗೊಂಡಿದ್ದರು. ಏಪ್ರಿಲ್ 29 ರಂದು ಮುಂಬೈನ ಕ್ಲಬ್ ಇನ್ ಜುಹ್ ನಲ್ಲಿ ಮೆಹೆಂದಿ ಕಾರ್ಯಕ್ರಮ ನಡೆಯಲಿದೆ.[ಬಿಪಾಶಾ ಬಸು - ಕರಣ್ ಮದುವೆ ಆಮಂತ್ರಣ ಪತ್ರಿಕೆ ಹಿಂಗಿದೆ.!]

ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಅವರು ಏಪ್ರಿಲ್ 3೦ ರಂದು ಬೆಂಗಾಲಿ ಶೈಲಿಯಲ್ಲಿ ನಡೆಯಲಿದ್ದು, ಮದುವೆ ಕಾರ್ಯಗಳಲ್ಲಿ ಬರೀ ಬಿಪಾಶಾ ಮತ್ತು ಕರಣ್ ಅವರ ಕುಟುಂಬಸ್ಥರು ಭಾಗವಹಿಸಲಿದ್ದಾರೆ. ಸಂಜೆ ಆರತಕ್ಷತೆ ಕಾರ್ಯಕ್ರಮದಲ್ಲಿ ಬಿಪಾಶಾ ಮತ್ತು ಕರಣ್ ಅವರ ಬಾಲಿವುಡ್ ಗೆಳೆಯರು ಭಾಗವಹಿಸಲಿದ್ದಾರೆ.[ಕಪ್ಪು-ಬಿಳುಪಿನ ಫೋಟೋಶೂಟ್ ನಲ್ಲಿ ನವ ಜೋಡಿ ಬಿಪಾಶಾ-ಕರಣ್]

ಬಿಪಾಶಾ ಅವರ ಮನೆಯಲ್ಲಿ ನಡೆದ ಮದುವೆಗೆ ಮುನ್ನ ಶಾಸ್ತ್ರದ ಫೋಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
The wedding celebrations of our favourite Bollywood couple, Bipasha Basu and Karan Singh Grover have begun today. We have just got the first pictures from the pooja and they both are looking so beautiful. The couple is dressed in pink and white respectively.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada