Tamannaah: ಬಾಲಿವುಡ್‌ಗೆ ಹೋಗಿ ಸೌತ್ ಸಿನಿಮಾಗಳ ಬಗ್ಗೆ ತಮನ್ನಾ ಆಘಾತಕಾರಿ ಹೇಳಿಕೆ!

By ಫಿಲ್ಮಿಬೀಟ್ ಡೆಸ್ಕ್

ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಪ್ರಮುಖ ನಟಿಯರ ಸಾಲಿಗೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಸೇರುತ್ತಾರೆ. ಜೈಲರ್ ಸಿನಿಮಾದಲ್ಲಿನ ಅವರ 'ಕಾವಾಲಾ' ಡ್ಯಾನ್ಸ್ ಇನ್ನೂ ಜನರ ಫೇವರಿಟ್ ಲಿಸ್ಟ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ದಕ್ಷಿಣ ಸಿನಿಮಾ ರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿರುವ ಅವರ ಮೇಲೆ ಅಭಿಮಾನಿಗಳಿಗೆ ಅತ್ಯಂತ ಗೌರವವಿದೆ. ಆದರೆ, ತಮನ್ನಾ ಒಂದು ಶಾಕಿಂಗ್ ಹೇಳಿಕೆ ನೀಡುವ ಮೂಲಕ ದಕ್ಷಿಣ ಚಿತ್ರರಂಗದ ಮೇಲೆ ಕೆಸರೆರಚಿದ್ದಾರೆ.

ಸೌತ್ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ತಮನ್ನಾ ಈಗ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ಅವರು ಈಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ ಎಂದಲ್ಲ. ಅವರ ಜರ್ನಿ ಶುರುವಾಗಿದ್ದೆ ಹಿಂದಿ ಸಿನಿಮಾದಿಂದ. 2005 ರ ಬಾಲಿವುಡ್ ಚಲನಚಿತ್ರ "ಚಾಂದ್ ಸಾ ರೋಷನ್ ಚೆಹ್ರಾ" ಚಿತ್ರದೊಂದಿಗೆ ತಮ್ಮ ನಟನಾ ವೃತ್ತಿ ಪ್ರಾರಂಭಿಸಿದ್ದರು.

actress-tamannaah-bhati

ಹಿಂದಿಯಲ್ಲಿ ಯಾವುದೇ ಯಶಸ್ಸನ್ನು ಕಾಣದ ಹಿನ್ನೆಲೆ ಅದೇ ವರ್ಷದಲ್ಲಿ, ಅವರು 'ಶ್ರೀ' ಯೊಂದಿಗೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮುಂದಿನ ವರ್ಷ "ಕೇಡಿ" ಯೊಂದಿಗೆ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಎರಡು ಸಿನಿಮಾಗಳಲ್ಲಿ ಅವರ ಅಭಿನಯ ಜನರನ್ನು ಸೆಳೆದವು. ಅಲ್ಲಿಂದ ಅವರು ಹೊಸ ಹೊಸ ಸಿನಿಮಾ ಆಫರ್‌ಗಳನ್ನು ಪಡೆಯುತ್ತಾ ಬೆಳೆದರು.

ದಕ್ಷಿಣದಲ್ಲಿ ಅತೀಯಾದ ಪುರುಷತ್ವದ ವೈಭವೀಕರಣ!

ಇಷ್ಟೆಲ್ಲಾ ಯಶಸ್ಸು ನೀಡಿದ ದಕ್ಷಿಣ ಸಿನಿಮಾಗಳ ಬಗ್ಗೆ ಫಿಲ್ಮ್‌ಫೇರ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ದಕ್ಷಿಣದ ಚಲನಚಿತ್ರಗಳಲ್ಲಿ ಅತೀಯಾಗಿ ಪುರುಷತ್ವವನ್ನು ವೈಭವೀಕರಿಸಲಾಗಿದೆ ಎಂಬುದನ್ನು ಎತ್ತಿ ಹೇಳಿದ್ದಾರೆ. ಇಲ್ಲಿ ಪುರುಷರು ಹೇಳುವುದು ಮಾತ್ರ ನಡೆಯುತ್ತದೆ ಎಂದು ತಿಳಿಸಿದ್ದಾರೆ.

'ದಕ್ಷಿಣದಲ್ಲಿ ಟಾಕ್ಸಿಕ್ ಮಸ್ಯ್ಕೂಲಿನಿಟಿ ಅಸ್ತಿತ್ವದಲ್ಲಿದೆ. ಅವರು ಒಪ್ಪದ ದೃಶ್ಯಗಳು ಮತ್ತು ವಿಷಯಗಳಿದ್ದರೆ ಅದನ್ನು ತೆಗೆದು ಹಾಕಲಾಗುತ್ತದೆ. ದಕ್ಷಿಣದಲ್ಲಿ, ಕೆಲವು ಸುಲಭವಾಗಿರುವ ಸಿದ್ಧ ಸೂತ್ರಗಳನ್ನು ಬಳಸಲಾಗುತ್ತದೆ. ಕೆಲವು ಚಿತ್ರಗಳಲ್ಲಿ, ನಾನು ನನ್ನ ಪಾತ್ರಗಳೊಂದಿಗೆ ಸಂಬಂಧ ಹೊಂದಲು ಸಾಧ್ಯವಾಗಲಿಲ್ಲ. ನಿರ್ದೇಶಕರು ನಮ್ಮ ಪಾತ್ರಗಳನ್ನು ಕಡಿತ ಮಾಡುತ್ತಾರೆ' ಎಂದು ಆರೋಪಿಸಿದ್ದಾರೆ.

"ಹೀಗಾಗಿ ನಾನು ಈಗ ಅಂತಹ ಚಿತ್ರಗಳನ್ನು ಮಾಡುವುದನ್ನು ನಿಲ್ಲಿಸುವ ಹಂತಕ್ಕೆ ಬಂದಿದ್ದೇನೆ. ಅತೀಯಾದ ಪುರುಷತ್ವವನ್ನು ತೋರಿಸುವ ಚಲನಚಿತ್ರಗಳಲ್ಲಿ ಕೆಲಸ ಮಾಡದಿರಲು ನಾನು ಪ್ರಜ್ಞಾಪೂರ್ವಕ ಪ್ರಯತ್ನ ಪ್ರಾರಂಭಿಸಿದೆ" ಎಂದು ರಮನ್ನಾ ಭಾಟಿಯಾ 'ಫಿಲ್ಮ್‌ಫೇರ್‌'ಗೆ ತಿಳಿಸಿದ್ದಾರೆ.

actress-tamannaah-bhati

ಬಾಲಿವುಡ್‌ನಲ್ಲಿ ತಮನ್ನಾಗೆ ಸಾಲು ಸಾಲು ಸೋಲು

ಅದೇ ಸಂದರ್ಶನದಲ್ಲಿ ಬಾಲಿವುಡ್‌ನಲ್ಲಿನ ಸತತ ಸೋಲುಗಳ ಬಗ್ಗೆಯೂ ಮಾತನಾಡಿದ್ದಾರೆ. "ನಾನು ತನ್ನ ಗೆಲುವು ಮತ್ತು ಸೋಲನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೇನೆ. ನಾನು ಇಲ್ಲಿ (ಬಾಲಿವುಡ್) ಮಾಡಿದ ಚಿತ್ರಗಳು ಯಶಸ್ಸು ಗಳಿಸಲಿಲ್ಲ. ಆದರೆ, ಅದನ್ನು ವೈಯಕ್ತಿಕ ಸೋಲು ಎಂದು ಎಂದಿಗೂ ತೆಗೆದುಕೊಂಡಿಲ್ಲ. ಏಕೆಂದರೆ ಚಲನಚಿತ್ರಕ್ಕೆ ಬಹಳಷ್ಟು ಜನರು ಕೊಡುಗೆ ನೀಡುತ್ತಾರೆ. ಆ ಮೂಲಕ ನಾನು ನನ್ನ ಯಶಸ್ಸು ಮತ್ತು ಸೋಲು ಎರಡರಿಂದಲೂ ಸ್ವಲ್ಪ ನಿರ್ಲಿಪ್ತಳಾಗಿದ್ದೇನೆ. ನಾನು ಎರಡನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ" ಎಂದು ಹೇಳಿದ್ದಾರೆ.

ತಮನ್ನಾ ಭಾಟಿಯಾ 2007 ರಲ್ಲಿ ತೆಲುಗು ಮತ್ತು ತಮಿಳು ಸಿನೆಮಾ ಚಲನಚಿತ್ರಗಳಾದ ಹ್ಯಾಪಿ ಡೇಸ್ ಮತ್ತು ಕಲ್ಲೂರಿ ಸಿನಿಮಾಗಳಿಮದ ಭಾರಿ ಯಶಸ್ಸು ಗಳಿಸಿದ್ದರು. 2013 ರಲ್ಲಿ, ಅವರು ಅಜಯ್ ದೇವಗನ್‌ ಜೊತೆಗೆ ಹಿಮ್ಮತ್ವಾಲಾ ಚಿತ್ರದ ಮೂಲಕ ಹಿಂದಿ ಸಿನಿರಂಗಕ್ಕೆ ಮತ್ತೆ ಮರಳಿದ್ದರು. ಇತ್ತೀಚೆಗೆ ಲಸ್ಟ್ ಸ್ಟೋರೀಸ್ 2, ಆಖರಿ ಸಚ್, ಜೀ ಕರ್‌ದಾ, ಭೋಲಾ ಶಂಕರ್ ಮತ್ತು ಜೈಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
In south films toxic masculinity is celebrated: Tamannaah Bhati Shocking statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X