twitter
    For Quick Alerts
    ALLOW NOTIFICATIONS  
    For Daily Alerts

    ಸೋನು ಸೂದ್ ವಿರುದ್ಧ ₹ 20 ಕೋಟಿಗೂ ಅಧಿಕ ತೆರಿಗೆ ವಂಚನೆ ಆರೋಪ ಮಾಡಿದ ಆದಾಯ ತೆರಿಗೆ ಇಲಾಖೆ

    |

    ಕಳೆದ ಮೂರು ದಿನಗಳಿಂದ ಬಹುಭಾಷಾ ನಟ, ರಿಯಲ್ ಹೀರೋ ಸೋನು ಸೂದ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಸರ್ವೆ ನಡೆಸಿದ್ದು, ಇದೀಗ ಮಾಹಿತಿ ಬಹಿರಂಗ ಮಾಡಿದೆ. ನಟ ಸೋನು ಸೂದ್ ₹ 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತನ್ನ ಹೇಳಿಕೆಯಲ್ಲಿ ಬಹಿರಂಗ ಪಡಿಸಿದೆ. ಸತತ ಮೂರು ದಿನಗಳ ಕಾಲ ಸೋನು ಮನೆ, ಕಚೇರಿಗಳ ಮೇಲೆ ಸಮೀಕ್ಷೆ ನಡೆಸಿದ ಐಟಿ ಅಧಿಕಾರಿಗಳು, ನಟನಿಗೆ ಸಂಬಂಧಿಸಿದ ನಾನ್ ಪ್ರಾಫಿಟ್ ಸಂಸ್ಥೆಯು, ₹ 2.1 ಕೋಟಿಗಳನ್ನು ವಿದೇಶಿ ಮೂಲಗಳಿಂದ ಸಂಗ್ರಹಿಸಿದೆ ಎಂದಿದೆ. ಇದು ಸರ್ಕಾರದ ವಿದೇಶಿ ಹಣ ಸ್ವೀಕಾರದ ಕಾನೂನಿಗೆ ವಿರುದ್ಧವಾಗಿದೆ ಎಂದು ಇಲಾಖೆ ತಿಳಿಸಿದೆ.

    ಐಟಿ ಅಧಿಕಾರಿಗಳ ಸಮೀಕ್ಷೆಯ ವೇಳೆ ಸೋನು ಸೂದ್ ತಮ್ಮ ಸಹವರ್ತಿಗಳೊಂದಿಗೆ ಸೇರಿ ತೆರಿಗೆ ವಂಚನೆ ನಡೆಸಿದ್ದರ ಬಗ್ಗೆ ಸಾಕ್ಷ್ಯಗಳು ಪತ್ತೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಮುಖ್ಯವಾಗಿ ಲೆಕ್ಕವಿಲ್ಲದ ಆದಾಯವನ್ನು ಅನೇಕ ನಕಲಿ ಸಂಸ್ಥೆಗಳ ಹೆಸರಿನ ಸಾಲದ ರೂಪದಲ್ಲಿ ಸಾಗಿಸಲಾಗಿದೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ. ಐಟಿ ಇಲಾಖೆಯು ಸೋನು ಸೂದ್ ಹಾಗೂ ಲಕ್ನೋ ಮೂಲದ ಸಂಸ್ಥೆಯೊಂದರ ಮೇಲೆ ಸಮೀಕ್ಷೆ ನಡೆಸಿತ್ತು.ಇದಕ್ಕೆ ಸಂಬಂಧಪಟ್ಟಂತೆ, ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದೆಹಲಿ, ಗುರುಗ್ರಾಮಗಳಲ್ಲಿ ಶೋಧ ನಡೆಸಲಾಗಿತ್ತು ಎಂದು ಕೇಂದ್ರ ಆದಾಯ ತೆರಿಗೆ ಮಂಡಳಿ ತಿಳಿಸಿದೆ.

    ತೆರಿಗೆ ತಪ್ಪಿಸುವ ಉದ್ದೇಶದಿಂದ ಖಾತೆಗಳ ಪುಸ್ತಕದಲ್ಲಿ ಸಾಲ ಎಂದು ತೋರಿಸಿ ಮರೆಮಾಚಲಾಗಿದೆ. ಹೂಡಿಕೆಗಳನ್ನು ಮಾಡಲು ಮತ್ತು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಈ ನಕಲಿ ಸಾಲಗಳನ್ನು ಬಳಸಲಾಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಇಲ್ಲಿಯವರೆಗೂ ಪತ್ತೆಯಾದ ಒಟ್ಟು ತೆರಿಗೆಯ ಮತೊತವು 20ಕೋಟಿಗಿಂತ ಅಧಿಕ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

    Income Tax Department says Actor Sonu Sood Evaded Over ₹ 20 Crore in Taxe

    ನಟನ ವಿರುದ್ಧ ಕೇಳಿಬರುತ್ತಿರುವ ಆರೋಪದ ಪ್ರಕಾರ, ಕೋವಿಡ್ 19 ಸಮಯದಲ್ಲಿ ನಟ ಸೋನು ಸೂದ್ ಅವರ ಮಾನವೀಯ ಕೆಲಸಗಳು ಭಾರಿ ಪ್ರಶಂಸೆಗೆ ಕಾರಣವಾಗಿತ್ತು. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಅಂದರೆ ಜುಲೈನಲ್ಲಿ ಸ್ಥಾಪಿಸಲಾದ ಅವರ ಲಾಭರಹಿತ ಸೂದ್ ಚಾರಿಟಿ ಫೌಂಡೇಶನ್ ಈ ವರ್ಷದ ಏಪ್ರಿಲ್ ವರೆಗೂ 18 ಕೋಟಿ ರೂ.ಗೂ ಅಧಿಕ ದೇಣಿಗೆ ಸಂಭ್ರಹಿಸಿದೆ. ಅದರಲ್ಲಿ 1.9 ಕೋಟಿ ರೂ ಪರಿಹಾರ ಕಾರ್ಯಕ್ಕಾಗಿ ಖರ್ಚು ಮಾಡಲಾಗಿದೆ ಮತ್ತು ಉಳಿದ 17 ಕೋಟಿ ರೂ. ಲಾಭರಹಿತ ಬ್ಯಾಂಕ್ ಖಾತೆಯಲ್ಲಿ ಬಳಕೆಯಾಗದೆ ಉಳಿದಿದೆ.

    ಮೂಲಗಳ ಪ್ರಕಾರ "ಸೋನು ಸೂದ್ ಅವರ ಕಂಪನಿ ಮತ್ತು ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ನಡುವಿನ ಇತ್ತೀಚಿನ ಒಪ್ಪಂದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ" ಎನ್ನಲಾಗಿದೆ. ಈ ಒಪ್ಪಂದದ ಬಳಿಕ ತೆರಿಗೆ ವಂಚನೆ ಆರೋಪದ ಮೇಲೆ ಸಮೀಕ್ಷೆ ಕಾರ್ಯಚರಣೆ ಆರಂಭವಾಗಿದೆ ಎನ್ನಲಾಗಿದೆ. ಲಕ್ನೋದ ಸಂಸ್ಥೆಯಲ್ಲಿ ಸೋನು ಸೂದ್ ಅಕ್ರಮ ಹಣವನ್ನು ಹೂಡಿದ್ದಾರೆ. ಈ ಕುರಿತು ಸಾಕ್ಷಾಧಾರಗಳು ಲಭ್ಯವಾಗಿವೆ. ಜೊತೆಗೆ ಲಕ್ನೋದ ಕಂಪೆನಿಯು ₹ 65 ಕೋಟಿಗೂ ಅಧಿಕ ಬೋಗಸ್ ಕಾಂಟ್ರಾಕ್ಟ್ ಪಡೆದಿದೆ. ಹೆಚ್ಚಿನ ತನಿಖೆ ನಡೆದಿದೆ ಎಂದು ಮಾಹಿತಿ ನೀಡಲಾಗಿದೆ.

    ಸೋನು ಸೂದ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳ ಸರ್ವೆಯನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಆಡಳಿತ ರೂಢ ಶಿವಸೇನೆ ಮತ್ತು ಆಮ್ ಆದ್ಮಿ ಪಕ್ಷ ಇದನ್ನು ಪ್ರಶ್ನೆ ಮಾಡಿದೆ. ಆಮ್ ಆದ್ಮಿ ಪಕ್ಷದ ಜೊತೆ ಸೋನು ಸೂದ್ ಅವರ ಸಂಬಂಧ ಮತ್ತು ಈ ಶೋಧ ಕಾರ್ಯಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿದೆ.

    English summary
    Income Tax Department says Actor Sonu Sood Evaded Over ₹ 20 Crore in Taxes.
    Saturday, September 18, 2021, 14:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X