ಬಾಲಿವುಡ್ ನಟಿ ತಾಪ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್ ಮನೆ ಮೇಲೆ ಐಟಿ ದಾಳಿ
ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ಖ್ಯಾತ ಬಹುಭಾಷಾ ನಟಿ ತಾಪ್ಸಿ ಪನ್ನು ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಇಂದು ಬೆಳ್ಳಂಬೆಳಗ್ಗೆ ಮುಂಬೈ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ.
ತೆರಿಗೆ ವಂಚನೆಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ. ಅನುರಾಗ್ ಕಶ್ಯಪ್ ಅವರ ನಿರ್ಮಾಣ ಸಂಸ್ಥೆ ಫ್ಯಾಂಟಮ್ ಫಿಲ್ಮ್ಸ್ ಗೆ ಸಂಬಂಧಿಸಿದ ವಿಚಾರವಾಗಿ ತಾಪ್ಸಿ ಜೊತೆಗೆ ನಿರ್ಮಾಪಕ ಮತ್ತು ನಿರ್ದೇಶಕ ವಿಕಾಸ್ ಭಾಲ್ ಅವರ ಮನೆ ಮೇಲೂ ಸಹ ಐಟಿ ದಾಳಿ ನಡೆದಿದೆ.

Recommended Video
ಅಪ್ಪು ಮತ್ತು ರಿಷಬ್ ಶೆಟ್ಟಿ ಒಂದೇ ಥರ ಅಂತ ಹೇಳಿದವರು ಯಾರು? | Rishab Shetty | Filmibeat Kannada
ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಇತ್ತೀಚಿಗಷ್ಟೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು, ದೊಬಾರಾ ಎಂದು ಟೈಟಲ್ ಇದ್ದಾರೆ. ಸದ್ಯ ಇಬ್ಬರು ಈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
English summary
Income Tax raids on properties of Anurag Kashyap and Taapsee Pannu in Mumbai.


Click it and Unblock the Notifications